ಕ್ಯಾಡ್‍ಬರಿ ಉತ್ಪನ್ನಗಳ ಕವರ್ ನೇರಳೆ ಬಣ್ಣದಲ್ಲೇ ಯಾಕಿರುತ್ತವೆ ಗೊತ್ತಾ? – ನಿಮಗೆಲ್ಲರಿಗೂ ಗೊತ್ತಿಲ್ಲದ ಸತ್ಯ ಇಲ್ಲಿದೆ?

ಕ್ಯಾಡ್‍ಬರಿ ಉತ್ಪನ್ನಗಳ ಕವರ್ ನೇರಳೆ ಬಣ್ಣದಲ್ಲೇ ಯಾಕಿರುತ್ತವೆ ಗೊತ್ತಾ? – ನಿಮಗೆಲ್ಲರಿಗೂ ಗೊತ್ತಿಲ್ಲದ ಸತ್ಯ ಇಲ್ಲಿದೆ?

ನ್ಯೂಸ್ ಆ್ಯರೋ‌ : ಕ್ಯಾಡ್‍ಬರಿ ಚಾಕೊಲೇಟ್ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಮಕ್ಕಳಿಂದ ಹಿಡಿದು ವಯಸ್ಸಾದವರೂ ಇದನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಇನ್ನೊಂದು ವಿಶೇಷ ಎಂದರೆ ಕ್ಯಾಡ್‍ಬರಿ ಉತ್ಪನ್ನಗಳ ಕವರ್ ನೇರಳ ಬಣ್ಣದಲ್ಲೇ ಇರುತ್ತವೆ. ಇದಕ್ಕೂ ಒಂದು ಕಾರಣವಿದೆ. ಅದರ ಕುರಿತಾದ ವಿವರ ಇಲ್ಲಿದೆ.

ಇತಿಹಾಸ

ನೇರಳೆ ಬಣ್ಣ ಬಳಸಲು ಕ್ಯಾಡ್‍ಬರಿ ಕಂಪೆನಿಗೆ ಕಾನೂನಿನ ಅದಿಕೃತ ಒಪ್ಪಿಗೆ ಸಿಕ್ಕಿದೆ. ಕ್ಯಾಡ್‍ಬರಿಯು 1914ರಿಂದಲೂ ತನ್ನ ಕವರ್ ಗೆ ನೇರಳೆ ಬಣ್ಣ ಬಳಸುತ್ತಿದೆ. ರಾಣಿ ವಿಕ್ಟೋರಿಯಾಗೆ ಗೌರವ ಸಲ್ಲಿಸಲು ಇದನ್ನು ಪರಿಚಯಿಸಲಾಯಿತು. 1854ರಲ್ಲಿ ಕಂಪೆನಿಗೆ ರಾಯಲ್ ವಾರೆಂಟ್ ನೀಡಲಾಯಿತು. ಮೊದಲು ಬ್ರಿಟಿಷ್ ರಾಜನಿಗೆ ಕೋಕ್ ಮತ್ತು ಚಾಕೊಲೇಟ್ ತಯಾರಿಸುವ ಉದ್ದೇಶದಿಂದ ಕಂಪೆನಿ ಆರಂಭಿಸಲಾಗಿತ್ತು.

ಒಮ್ಮೆ ಈ ಬಣ್ಣ ಬಳಸಿದ್ದಕ್ಕಾಗಿ ತನ್ನ ಪ್ರತಿಸ್ಪರ್ಧಿ ಸಂಸ್ಥೆ ನೆಸ್ಲೆ ವಿರುದ್ಧ ಕ್ಯಾಡ್‌ಬರಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಕ್ಯಾಡ್‌ಬರಿ ಚಾಕೊಲೇಟ್ 2004ರಲ್ಲಿ ಪ್ಯಾಂಟೋನ್ 2865c ಬಣ್ಣವನ್ನು ತನ್ನ ಟ್ರೇಡ್‌ಮಾರ್ಕ್ ಆಗಿ ಹೊಂದಲು ಬಯಸಿತ್ತು. ಆದರೆ ಥಾಮ್ಸನ್ ರಾಯಿಟರ್ಸ್ ಪ್ರಾಕ್ಟಿಕಲ್ ಲಾ ಪ್ರಕಾರ ನೆಸ್ಲೆ ಅದನ್ನು ವಿರೋಧಿಸಿತು. ಬಣ್ಣದ ಮೇಲೆ ಯಾವುದೇ ಹಿಡಿತ ಇರಬಾರದು ಎಂದು ಅದು ವಾದಿಸಿತ್ತು. ಅಂದರೆ ಈ ಪ್ರಕರಣದ ಪ್ರಕಾರ ಯಾವುದೇ ಚಾಕೊಲೇಟ್‌ ಸಂಸ್ಥೆಯು ತನ್ನ ಉತ್ಪನ್ನದ ಮೇಲೆ ನೇರಳೆ ಬಣ್ಣವನ್ನು ಬಳಸಬಹುದು ಎಂದರ್ಥ.

ಆದರೆ ನ್ಯಾಯಾಧೀಶ ಕಾಲಿನ್ ಬಿರ್ಸ್ ನೆಸ್ಲೆಯ ಮನವಿಯನ್ನು ತಿರಸ್ಕರಿಸಿದ್ದರು. 2012ರಲ್ಲಿ ಅವರು ನೀಡಿದ ತೀರ್ಪಿನ ಪ್ರಕಾರ ನೇರಳೆ ಬಣ್ಣ ಕ್ಯಾಡ್‌ಬರಿಗೆ ಸೀಮಿತ. ಸಂಶೋಧನೆಗಳು ಹಾಗೂ ಪುರಾವೆಗಳ ಪ್ರಕಾರ ಇದು ಸ್ಪಷ್ಟವಾಗಿದೆ ಎಂದು ಅವರು ತೀರ್ಪು ನೀಡಿದ್ದರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *