UPSC ಪರೀಕ್ಷಾ ಕ್ಯಾಲೆಂಡರ್ ಪ್ರಕಟ – ಡೌನ್‌ಲೋಡ್ ಮಾಡುವ ವಿಧಾನ ಇಲ್ಲಿದೆ..

UPSC ಪರೀಕ್ಷಾ ಕ್ಯಾಲೆಂಡರ್ ಪ್ರಕಟ – ಡೌನ್‌ಲೋಡ್ ಮಾಡುವ ವಿಧಾನ ಇಲ್ಲಿದೆ..

ನ್ಯೂಸ್ ಆ್ಯರೋ‌ : ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಮುಂದಿನ ವರ್ಷ( 2024)ದ CSE, NDA I & II, CDS ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ upsc.gov.in ನಲ್ಲಿ ಸಂಪೂರ್ಣ ವೇಳಾಪಟ್ಟಿಯನ್ನು ಪರಿಶೀಲಿಸಬಹುದು.

NDA, NA ಮತ್ತು CDS ಮುಖ್ಯ ಪರೀಕ್ಷೆಯನ್ನು ಸೆ. 1, 2024 ರಂದು ನಿಗದಿಪಡಿಸಲಾಗಿದೆ. ಅಧಿಸೂಚನೆಯ ದಿನಾಂಕವು ಮೇ 15, 2024 ಮತ್ತು ಅಪ್ಲಿಕೇಶನ್ ದಿನಾಂಕ ಜೂ. 4, 2024. ನಾಗರಿಕ ಸೇವೆಗಳ (ಪ್ರಿಲಿಮ್ಸ್) ಪರೀಕ್ಷೆ ಮೇ 26, 2024ರಂದು ನಡೆಯಲಿದೆ. ಅಧಿಸೂಚನೆಯನ್ನು ಫೆ. 14, 2024ರಂದು ಬಿಡುಗಡೆ ಮಾಡಲಾಗುವುದು ಮತ್ತು ನೋಂದಣಿಗಳು ಮಾ. 5, 2024ರಂದು ಪ್ರಾರಂಭವಾಗುತ್ತವೆ.

UPSC ಮೈನ್ಸ್ ಪರೀಕ್ಷೆ 2024 ಅನ್ನು ಸೆ. 20, 2024ರಂದು ನಿಗದಿಪಡಿಸಲಾಗಿದೆ. ಆದರೂ ಅಧಿಸೂಚನೆಯ ದಿನಾಂಕಗಳು, ಪರೀಕ್ಷೆಯ ಪ್ರಾರಂಭ ಮತ್ತು ಅವಧಿಗಳು/ಆರ್‌ಟಿಗಳು ವಿವಿಧ ಸಂದರ್ಭಕ್ಕೆ ಅನುಗುಣವಾಗಿ ಬದಲಾಗುವ ಸಾಧ್ಯತೆಗಳಿವೆ ಎಂದು ಸೂಚಿಸಲಾಗಿದೆ.

ಹೀಗೆ ಕ್ಯಾಲೆಂಡರ್ ಡೌನ್‌ಲೋಡ್ ಮಾಡಿ

ಅಧಿಕೃತ ವೆಬ್‌ಸೈಟ್‌ upsc.gov.inಗೆ ಭೇಟಿ ನೀಡಿ. ಬಳಿಕ ನಂತರ ಪರೀಕ್ಷೆಯ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಕ್ಯಾಲೆಂಡರ್ ವಿಭಾಗವನ್ನು ಆಯ್ಕೆ ಮಾಡಿ ಮತ್ತು ‘ವಾರ್ಷಿಕ ಕ್ಯಾಲೆಂಡರ್ 2024′ ಮೇಲೆ ಕ್ಲಿಕ್ ಮಾಡಿ. ಆಗ ಸಂಪೂರ್ಣ ವೇಳಾಪಟ್ಟಿ ಪರದೆಯ ಮೇಲೆ ಕಾಣಿಸುತ್ತದೆ. ಇದನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರತಿಯನ್ನು ಇಟ್ಟುಕೊಳ್ಳಿ.

UPSC ಪರೀಕ್ಷೆಗಳು 2023 ಅಥವಾ 2024ರ ಬದಲಾವಣೆ, ಯಾವುದೇ ಇತ್ತೀಚಿನ ಅಪ್‌ಡೇಟ್ ಗಾಗಿ ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ ಎಂದು ಪ್ರಕಟಣೆ ತಿಳಿಸಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *