ಅಬ್ಬಾ! ಶಾರುಖ್ ಖಾನ್ ಮ್ಯಾನೇಜರ್ ಸಂಭಾವನೆ ಇಷ್ಟೊಂದಾ? – ಪೂಜಾ ದದ್ಲಾನಿ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ಗೊತ್ತಾ..!?

ಅಬ್ಬಾ! ಶಾರುಖ್ ಖಾನ್ ಮ್ಯಾನೇಜರ್ ಸಂಭಾವನೆ ಇಷ್ಟೊಂದಾ? – ಪೂಜಾ ದದ್ಲಾನಿ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ಗೊತ್ತಾ..!?

ನ್ಯೂಸ್ ಆ್ಯರೋ‌ : ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಬಾಲಿವುಡ್ ನ ಯಶಸ್ವಿ ನಟ ಮತ್ತು ನಿರ್ಮಾಪಕ. ಈ ಕಾರಣದಿಂದಲೇ ಅವರು ಪ್ರತೀ ಸಿನಿಮಾಕ್ಕೆ, ಜಾಹೀರಾತಿಗೆ ಕೋಟಿಗಟ್ಟಲೆ ರೂ. ಸಂಭಾವನೆ ಪಡೆಯುತ್ತಾರೆ. ಇದೀಗ ಶಾರುಖ್ ಬ್ಯುಸಿನೆಸ್ ಮ್ಯಾನೇಜರ್ ಪೂಜಾ ದದ್ಲಾನಿ ಅವರ ಸಂಬಳದ ವಿವರ ಹೊರ ಬಂದಿದೆ. ಅವರು ಕೂಡ ವರ್ಷಕ್ಕೆ ಕೋಟಿಗಟ್ಟಲೆ ರೂ. ಸಂಬಳ ಪಡೆಯುತ್ತಾರೆ.

ಮೂಲಗಳ ಪ್ರಕಾರ ಪೂಜಾ ವರ್ಷಕ್ಕೆ ಸುಮಾರು 7-9 ಕೋಟಿ ರೂ. ಸಂಪಾದಿಸುತ್ತಾರೆ. ಅಂದರೆ ತಿಂಗಳ ಸಂಪಾದನೆ ಅಂದಾಜು 75 ಲಕ್ಷ ರೂ. ಮೆನ್​ಎಕ್ಸ್​ಪಿ ವರದಿ ಪ್ರಕಾರ 2021ರಲ್ಲಿ ಪೂಜಾ ದದ್ಲಾನಿ ಅವರ ಅಸ್ತಿ ಮೌಲ್ಯ 45-50 ಕೋಟಿ ರೂ. ಇತ್ತು. ಮುಂಬೈ ಮೂಲದ ಪೂಜಾ ಶಾರುಖ್ ಜೊತೆ ದಶಕಗಳಿಂದಲೂ ಕೆಲಸ ಮಾಡುತ್ತಿದ್ದಾರೆ. ಇವರು 2012ರಲ್ಲಿ ನಟನ ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲೀಸ್ ಎಂಟರ್​​ಟೈನ್​ಮೆಂಟ್ ಸೇರಿ ಎಲ್ಲ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ.

ಪೂಜಾ ಲಕ್ಷುರಿ ಮರ್ಸಿಡಿಸ್ ಕಾರ್ ಹೊಂದಿದ್ದು, ಮುಂಬೈಯ ಬಾಂದ್ರಾದಲ್ಲಿ ಬಂಗಲೆ ಹೊಂದಿದ್ದಾರೆ. ಅವರು 2023ರ ಆರಂಭದಲ್ಲಿ ಈ ಲಕ್ಷುರಿ ಮನೆಗೆ ಶಿಫ್ಟ್ ಆದರು. ಈ ಮನೆಗೆ ಶಾರುಖ್ ಪತ್ನಿ ಗೌರಿ ಖಾನ್ ಡಿಸೈನ್​ ಮಾಡಿದ್ದಾರೆ.

ಆತ್ಮೀಯ ನಂಟು

ವ್ಯವಹಾರ ಮಾತ್ರವಲ್ಲ ಶಾರುಖ್ ಖಾನ್ ಕುಟುಂಬದ ಜೊತೆ ಪೂಜಾ ಆತ್ಮೀಯ ಸಂಬಂಧ ಹೊಂದಿದ್ದಾರೆ. ಶಾರುಖ್ ಅವರ ಮಗ ಆರ್ಯನ್ ಖಾನ್ ನನ್ನ ಬಂಧಿಸಿದಾಗ ಪೂಜಾ ಅವರ ಕುಟುಂಬಕ್ಕೆ ಬೆಂಬಲವಾಗಿದ್ದರು. ಶಾರುಖ್ ಅವರ ಸಿನಿಮಾಗಳ ಜೊತೆಗೆ ಜಾಹೀರಾತು, ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಕೂಡ ಪೂಜಾ ನಿರ್ವಹಿಸುತ್ತಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *