Dr. Bro : ಸಿನಿಮಾ ರಂಗಕ್ಕೂ‌ ಕಾಲಿಟ್ಟ ಡಾ.ಬ್ರೋ – ಸಿನಿಮಾ ಯಾವುದು? ಏನ್ ಕಥೆ?

Dr. Bro : ಸಿನಿಮಾ ರಂಗಕ್ಕೂ‌ ಕಾಲಿಟ್ಟ ಡಾ.ಬ್ರೋ – ಸಿನಿಮಾ ಯಾವುದು? ಏನ್ ಕಥೆ?

ನ್ಯೂಸ್ ಆ್ಯರೋ‌ : ಡಾ.ಬ್ರೋ – ಸಾಮಾಜಿಕ ಜಾಲತಾಣ ಬಳಸುವವರಿಗೆ ಚಿರ ಪರಿಚಿತ ಮುಖ. ಗಗನ್‌ ಶ್ರೀನಿವಾಸ್ ಇವರ ನಿಜ ಹೆಸರು. 23ರ ಹರೆಯದ ಇವರು ಇಷ್ಟು ಚಿಕ್ಕವಯಸ್ಸಿನಲ್ಲಿಯೇ ಹತ್ತಾರು ದೇಶ ಸುತ್ತಿ ನೋಡುಗರಿಗೆ ಪ್ರಪಂಚ ಪರ್ಯಟನೆ ಮಾಡಿಸುತ್ತಿದ್ದಾರೆ. ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ನಲ್ಲಿ ಸರಣಿ ವೀಡಿಯೋ ಹಂಚಿಕೊಳ್ಳುತ್ತ ವಿದೇಶ, ವಿವಿಧ ಪ್ರದೇಶಗಳ ಪರಿಚಯ ಮಾಡಿಸುತ್ತಾರೆ. ಅವರು ಇದೀಗ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಹಾಗಾದರೆ ಡಾ.ಬ್ರೋ ಕಾಣಿಸಿಕೊಳ್ಳುತ್ತಿರುವ ಚಿತ್ರ ಯಾವುದು? ನಿರ್ದೇಶಕ ಯಾರು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಡಾ. ಬ್ರೋ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆಯನ್ನಾಧರಿಸಿದ ‘ಡೇರ್‌ ಡೆವಿಲ್‌ ಮುಸ್ತಾಫ’ ಸಿನಿಮಾದ ಭಾಗವಾಗಿದ್ದಾರೆ. ಶಶಾಂಕ್‌ ಸೊಗಲ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು ಈ ಚಿತ್ರ ಮೇ 19ರಂದು ಬಿಡುಗಡೆಯಾಗಲಿದೆ. ಪೂರ್ಣಚಂದ್ರ ಮೈಸೂರು, ಮಂಡ್ಯ ರಮೇಶ್, ಹಾಸ್ಯ ನಟ ಎಂ.ಎಸ್. ಉಮೇಶ್, ನಾಗಭೂಷಣ ಮತ್ತಿತರ ನುರಿತ ಕಲಾವಿದರು ಬಣ್ಣ ಹಚ್ಚಿದ್ದಾರೆ.

ಟ್ರೇಲರ್ ನಲ್ಲಿ ಏನಿದೆ?

ಈಗಾಗಲೇ ‘ಡೇರ್ ಡೆವಿಲ್ ಮುಸ್ತಾಫ’ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದ್ದು, ಡಾ. ಬ್ರೋ ಧ್ವನಿ ನೀಡಿದ್ದಾರೆ. ಆರಂಭದಿಂದ ಕೊನೆವರೆಗೂ ಡಾ. ಬ್ರೋ ತಮ್ಮದೇ ಶೈಲಿಯಲ್ಲಿ ಅಬಚೂರಿನ ಕಥೆಯನ್ನು ಹೇಳುತ್ತ ಹೋಗಿದ್ದಾರೆ. ಆದರೆ ಸಿನಿಮಾದಲ್ಲಿ ಅವರು ಅಭಿನಯಿಸಿದ್ದಾರಾ? ಇಲ್ಲವಾ? ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಒಟ್ಟಿನಲ್ಲಿ ಇಷ್ಟರವರೆಗೆ ವೀಡಿಯೋಗಳಲ್ಲಿ ಕೇಳಿಸುತ್ತಿದ್ದ ಡಾ. ಬ್ರೋ ಧ್ವನಿ ಸಿನಿಮಾದ ಟ್ರೇಲರ್ ನಲ್ಲಿ ಅಲಿಸಿ ಅಭಿಮಾನಿಗಳು ಕುತೂಹಲಗೊಂಡಿದ್ದಾರೆ.

ಡಾ. ಬ್ರೋ ಅವರ ಊರು ಬೆಂಗಳೂರಿನ ಹೊರವಲಯ. ಇವರು 2015ರಲ್ಲಿ ಯೂಟ್ಯೂಬ್‌ ಚಾನಲ್ ಆರಂಭಿಸಿದರು. ಸದ್ಯ ಯೂಟ್ಯೂಬ್‌ನಲ್ಲಿ ಒಂದು ಮಿಲಿಯನ್‌ಗೂ ಅಧಿಕ ಸಬ್‌ಸ್ಕ್ರೈಬರ್ಸ್‌ ಹೊಂದಿದ್ದು, ಆಗಾಗ ಹೊರದೇಶಗಳಿಗೆ ತೆರಳಿ ಅಲ್ಲಿನ ಹಲವು ಆಚಾರ ವಿಚಾರಗಳನ್ನು, ಸಂಗತಿಗಳನ್ನು ವೀಕ್ಷಕರಿಗೆ ತಿಳಿಸುತ್ತಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *