ಭಾರತ-ಬಾಂಗ್ಲಾ ಗಡಿಯಲ್ಲಿ ಹಾವಿನ ವಿಷ ಪತ್ತೆ – ಇದರ ಬೆಲೆ ಬರೋಬ್ಬರಿ 13 ಕೋಟಿ ರೂ..!

ಭಾರತ-ಬಾಂಗ್ಲಾ ಗಡಿಯಲ್ಲಿ ಹಾವಿನ ವಿಷ ಪತ್ತೆ – ಇದರ ಬೆಲೆ ಬರೋಬ್ಬರಿ 13 ಕೋಟಿ ರೂ..!

ನ್ಯೂಸ್ ಆ್ಯರೋ‌ : ಭಾರತ – ಬಾಂಗ್ಲಾದೇಶ ಗಡಿಯ ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಹಿಲಿ ಪೊಲೀಸ್ ಠಾಣೆ ವ್ಯಾಪ್ತಿಯ ಘೋಷ್‌ಪುರ ಬಿಒಪಿ ಪ್ರದೇಶದಲ್ಲಿ ಬಿಎಸ್‌ಎಫ್ ಪಡೆಗೆ ಹಾವಿನ ವಿಷ ತುಂಬಿದ ಬಾಟಲಿ ಲಭಿಸಿದ್ದು, ಅದರ ಬೆಲೆ ಬರೋಬ್ಬರಿ 13 ಕೋಟಿ ರೂ. ಎಂದು ವರದಿ ತಿಳಿಸಿದೆ.

ಸುರಕ್ಷತೆ ಕಾರಣಕ್ಕೆ ಬಿಎಸ್‌ಎಫ್ ಪಡೆ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗಸ್ತು ತಿರುಗುತ್ತಿದೆ. ಗಡಿಯಲ್ಲಿ ಇದು ಹದ್ದಿನ ಕಣ್ಣಿಟ್ಟಿದೆ. ಸಣ್ಣ ಅನುಮಾನ ಬಂದರೂ ಭದ್ರತಾ ಪಡೆಗಳು ಜಾಗೃತಗೊಳ್ಳುತ್ತವೆ. ಇಂತಹ ಗಡಿಯಲ್ಲಿ ಕಳ್ಳಸಾಗಾಣಿಕೆ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕ ಬಳಿಕ ಸೇನೆ ಎಚ್ಚೆತ್ತುಕೊಂಡಿತ್ತು.

ಮಧ್ಯರಾತ್ರಿ ಇಬ್ಬರು ಭಾರತಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದರು. ಈ ವೇಳೆ ಬಿಎಸ್‌ಎಫ್ ಪಡೆ ಅವರ ಮೇಲೆ ಗುಂಡು ಹಾರಿಸಿತು. ಸ್ಥಳದಿಂದ ಇಬ್ಬರೂ ಪರಾರಿಯಾಗಿದ್ದರು. ಬಿಎಸ್‌ಎಫ್ ಸ್ಥಳ ಪರಿಶೀಲನೆ ವೇಳೆ ಅಪರಿಚಿತರು ಬೀಳಿಸಿದ್ದ ಬಾಟಲಿ ಪತ್ತೆಯಾಗಿತ್ತು. ಬಾಟಲಿ ತೆರೆದು ನೋಡಿದಾಗ ಅದರೊಳಗೆ ದುಬಾರಿ ಬೆಲೆಯ ಹಾವಿನ ವಿಷ ಇದೆ ಎಂಬುದು ಬೆಳಕಿಗೆ ಬಂದಿದೆ.

ಈ ಬಾಟಲಿಯಲ್ಲಿ ರೆಡ್ ಡ್ರ್ಯಾಗನ್ ಕಂಪನಿ ಮೇಡ್ ಇನ್ ಫ್ರಾನ್ಸ್ ಎಂದು ಬರೆಯಲಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಬಾಟಲ್ ನಲ್ಲಿರುವ ವಿಷ ನಾಗರ ಹಾವಿನದ್ದು. ಬಿಎಸ್‌ಎಫ್ 137ನೇ ಬೆಟಾಲಿಯನ್ ವಶಪಡಿಸಿಕೊಂಡ ಇದನ್ನು ಬಲುಘಾಟ್ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ರೇಂಜರ್ ಸುಕಾಂತ್ ಓಜಾನ್ ಮಾಹಿತಿ ನೀಡಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *