Viral Video : ಆನೆಯನ್ನು ಬೇಸ್ತು ಬೀಳಿಸಲು ಹೋಗಿ ಪೆಚ್ಚಾದ ಮಹಿಳೆ – ಏನೋ ಮಾಡಲು ಹೋಗಿ…..

Viral Video : ಆನೆಯನ್ನು ಬೇಸ್ತು ಬೀಳಿಸಲು ಹೋಗಿ ಪೆಚ್ಚಾದ ಮಹಿಳೆ – ಏನೋ ಮಾಡಲು ಹೋಗಿ…..

ನ್ಯೂಸ್ ಆ್ಯರೋ‌ : ಬುದ್ಧಿವಂತ ಪ್ರಾಣಿ ಎಂದು ಕರೆಯಿಸಿಕೊಳ್ಳುವ ಆನೆ ಗಾತ್ರದಲ್ಲಿ ದೊಡ್ಡದಾದರೂ ಸೌಮ್ಯ ಸ್ವಭಾವ ಹೊಂದಿರುತ್ತದೆ. ಆದರೆ ಅದನ್ನು ಕೆಣಕಲು ಹೋದರೆ ಮಾತ್ರ ಸುಮ್ಮನಿರುವುದಿಲ್ಲ. ಅದಕ್ಕೆ ಉದಾಹರಣೆ ಈ ವೈರಲ್ ವೀಡಿಯೋ.

ಪೊದೆಯಲ್ಲಿ ತನ್ನ ಪಾಡಿಗೆ ತಾನು ಓಡಾಡಿಕೊಂಡಿದ್ದ ಆನೆಯನ್ನು ಈ ಮಹಿಳೆ ಗಮನ ಸೆಳೆದಿದ್ದಾಳೆ. ಆಕೆಯ ಬಳಿಯಿದ್ದ ಬಾಳೆಗೊನೆಯನ್ನು ನೋಡಿ ಬಳಿಗೆ ಬಂದಿದೆ. ಆದರೆ ಆಕೆ ಅದನ್ನು ಕೊಡದೆ ಸತಾಯಿಸಿದ್ದಾಳೆ.

ಕೊನೆಗೆ ತಾಳ್ಮೆ ಕಳೆದುಕೊಂಡ ಆನೆ ಆಕೆಯನ್ನು ತನ್ನ ದಂತದಿಂದ ಚುಚ್ಚಿ ದೂರ ತಳ್ಳಿದೆ. ಅಷ್ಟಕ್ಕೇ ಬಿಟ್ಟಿತೋ ಮುಂದೆ ಏನಾಯಿತೋ ಎಂದು ತಿಳಿದುಬಂದಿಲ್ಲ. ಯಾವುದೇ ಜೀವಿಯನ್ನು ಹೀಗೆ ಅಗೌರದಿಂದ ನಡೆಸಿಕೊಳ್ಳಬಾರದು. ಎಲ್ಲ ಜೀವಿಗೂ ಅದರದೇ ಆದ ಸಾಮರ್ಥ್ಯ ಶಕ್ತಿ ಇರುತ್ತದೆ ಎನ್ನುವುದಕ್ಕೆ ಸಾಕ್ಷಿಯಂತಿದೆ ಈ ವೀಡಿಯೋ.

ಸುಸಾಂತ್ ನಂದ ಎನ್ನುವವರು ಇದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಮಹಿಳೆ ಅಪಾಯದಿಂದ ಪಾರಾಗಿರಬಹುದು ಎಂದು ಭಾವಿಸುತ್ತೇನೆ ಎಂದು ಒಬ್ಬರು ಹೇಳಿದರೆ, ಕಾಡು ಪ್ರಾಣಿಗಳ ಜೊತೆ ಜಾಗರೂಕತೆಯಿಂದ ವರ್ತಿಸಬೇಕು ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ನೆಟ್ಟಿಗರ ಗಮನ ಸೆಳೆದಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *