ವಿಮಾನ‌ ಎಷ್ಟು ಮೈಲೇಜ್ ನೀಡುತ್ತೆ ಅಂತ ಗೊತ್ತಾ? – 90% ಜನರಿಗೆ ಗೊತ್ತಿಲ್ಲದ ಈ ಯಕ್ಷಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ..!

ವಿಮಾನ‌ ಎಷ್ಟು ಮೈಲೇಜ್ ನೀಡುತ್ತೆ ಅಂತ ಗೊತ್ತಾ? – 90% ಜನರಿಗೆ ಗೊತ್ತಿಲ್ಲದ ಈ ಯಕ್ಷಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ..!

ನ್ಯೂಸ್ ಆ್ಯರೋ : ನಾವು ನೀವೆಲ್ಲ ಸಾಮಾನ್ಯವಾಗಿ‌ ಬಳಸುವ ಕಾರು ಅಥವಾ ಬೈಕ್ ಗಳ ಬಗ್ಗೆ ಅವುಗಳ ಮೈಲೇಜ್, ಇಂಧನ, ಅವುಗಳ ಸಾಮರ್ಥ್ಯ ಹೀಗೆ ಎಲ್ಲಾ ವಿಚಾರವೂ ನಿಮಗೆ ತಿಳಿದಿರಬಹುದು. ಆದರೆ ಎಂದಾದರೂ ನೀವು ಆಕಾಶದಲ್ಲಿ ಹಾರಾಡುವ ವಿಮಾನ ಎಷ್ಟು ಮೈಲೇಜ್ ಕೊಡುತ್ತೆ, ಅದಕ್ಕೆ ಯಾವ ಇಂಧನ ಬಳಸಲಾಗುತ್ತೆ ಇವುಗಳ ಬಗ್ಗೆ ಯೋಚಿಸಿದ್ದೀರಾ? 90 ಶೇಕಡಾ ಜನರಿಗೆ ಗೊತ್ತಿಲ್ಲದ ಈ ವಿಚಾರದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ವಿಮಾನಕ್ಕೆ ಬಳಸುವ ಇಂಧನ ಯಾವುದು?

ವಾಯು ಮಾರ್ಗದಲ್ಲಿ ಹಾರಾಡುವ ವಿಮಾನ ಅಥವಾ ಹೆಲಿಕಾಪ್ಟರ್ ನಂತಹ ಜೆಟ್ ಗಳಿಗೆ ವಿಶೇಷವಾದ ಜೆಟ್ ಇಂಧನ ಬಳಸಲಾಗುತ್ತದೆ. ಈ ಇಂಧನವನ್ನು ವಾಯುಯಾನ ಸೀಮೆಎಣ್ಣೆ, QAV ಎಂದೂ ಕೂಡ ಕರೆಯಲಾಗುತ್ತದೆ.

ಪೆಟ್ರೋಲಿಯಂ ನಿಂದ ಬಟ್ಟಿ ಇಳಿಸುವ ಮೂಲಕ ಈ‌ ಜೆಟ್ ಇಂಧನವನ್ನು ತಯಾರಿಸಲಾಗುತ್ತದೆ. ಈ ಇಂಧನವನ್ನು ವಾಣಿಜ್ಯ ವಾಯು ಸಾರಿಗೆಯಲ್ಲಿ ಹೆಚ್ಚು ಬಳಸಲಾಗುತ್ತದೆ.

ಇಂಡಿಯನ್ ಆಯಿಲ್ ವೆಬ್ಸೈಟ್ ಪ್ರಕಾರ, ದೇಶಿಯ ವಿಮಾನಯಾನ‌ ಮತ್ತು ಅಂತರಾಷ್ಟ್ರೀಯ ರನ್‌ಗಳಿಗೆ ATF ಬೆಲೆಯಲ್ಲಿ ವ್ಯತ್ಯಾಸವಿದೆ. ದೆಹಲಿಯಲ್ಲಿ ATF ಬೆಲೆ ಒಂದು ಕಿಲೋ ಲೀಟರ್ ಗೆ 1,07,750 ರೂಪಾಯಿ ಇದೆ. ಅಂದರೆ 1 ಲೀಟರ್ ಇಂಧನಕ್ಕೆ 107 ರೂಪಾಯಿ ಆಗುತ್ತದೆ. ಮುಂಬೈನಲ್ಲಿ‌ ಈ ಇಂಧನದ ಬೆಲೆ 1,06,695 ರೂಪಾಯಿ, ಕೊಲ್ಕತ್ತಾದಲ್ಲಿ 1,15,091 ರೂಪಾಯಿ ಇದೆ.

ವಿಮಾನದ ಮೈಲೇಜ್ ಎಷ್ಟಿರುತ್ತೆ?

ಇನ್ನು ವಿಮಾನವು ಎಷ್ಟು ಮೈಲೇಜ್‌ ನೀಡುತ್ತದೆ ಎಂದು ನೋಡುವುದಾದರೆ, ಹಾರಾಟದ ನೆಲದ ವೇಗ ಗಂಟೆಗೆ 900 ಕಿಲೋಮೀಟರ್ ಅಂದರೆ ಒಂದು ಸೆಕೆಂಡಿಗೆ ವಿಮಾನವು 250 ಮೀಟರ್ ವೇಗವಾಗಿ ಸಾಗುತ್ತದೆ. ಜೊತೆಗೆ ಒಂದು ಗಂಟೆಗೆ 2400 ಲೀಟರ್ ಪೆಟ್ರೋಲ್ ಬಳಸುತ್ತದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *