ಪೋಬ್ಸ್‌ನ ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಲೀನಾ ಗಾಂಧಿ ತಿವಾರಿ – ದೇಶದ ಐದನೇ ಶ್ರೀಮಂತ ಮಹಿಳೆಯ ಹಿನ್ನೆಲೆ ಏನ್ ಗೊತ್ತಾ?

ಪೋಬ್ಸ್‌ನ ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಲೀನಾ ಗಾಂಧಿ ತಿವಾರಿ – ದೇಶದ ಐದನೇ ಶ್ರೀಮಂತ ಮಹಿಳೆಯ ಹಿನ್ನೆಲೆ ಏನ್ ಗೊತ್ತಾ?

ನ್ಯೂಸ್‌ ಆ್ಯರೋ : ಬ್ಯುಸಿನೆಸ್ ನಿಯತಕಾಲಿಕೆ ಫೋರ್ಬ್ಸ್ ಏಪ್ರಿಲ್ 4ರಂದು ಬಿಡುಗಡೆ ಮಾಡಿದ ಭಾರತದ ಅತ್ಯಂತ ಸಿರಿವಂತರ ಪಟ್ಟಿಯಲ್ಲಿ ರಿಲಾಯನ್ಸ್ ಸಮೂಹದ ಚೇರ್ಮನ್ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಮಾತ್ರವಲ್ಲ, ಏಷ್ಯಾದಲ್ಲೇ ಅಂಬಾನಿ ಅತ್ಯಂತ ಸಿರಿವಂತ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2023ರ ಸಾಲಿನ ಭಾರತದ ಶತಕೋಟ್ಯಾಧಿಪತಿಗಳ ಪಟ್ಟಿಗೆ 16 ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ, ಇವರಲ್ಲಿ ಮೂವರು ಮಹಿಳೆಯರೂ ಇದ್ದಾರೆ. ಸಾವಿತ್ರಿ ಜಿಂದಾಲ್, ರೋಹಿಕಾ ಸೈರಸ್ ಮಿಸ್ತ್ರಿ, ರೇಖಾ ಝುಂಝುನ್‌ವಾಲಾ, ವಿನೋದ್‌ ರಾಯ್ ಗುಪ್ತಾ ಹಾಗೂ ಲೀನಾ ತಿವಾರಿ ದೇಶದಲ್ಲಿರುವ ಮಹಿಳಾ ಶತಕೋಟ್ಯಾಧಿಪತಿಗಳು.

ಈ ಪೈಕಿ ಲೀನಾ ಗಾಂಧಿ ತಿವಾರಿ ಫಾರ್ಮಾ ಉದ್ಯಮಿಯಾಗಿದ್ದಾರೆ. ಸಾಮಾನ್ಯವಾಗಿ ಮಾಧ್ಯಮಗಳ ಮುಂದೆ ಅಷ್ಟಾಗಿ ಕಾಣಿಸಿಕೊಳ್ಳದ ಅವರು ಯುಎಸ್‌ವಿ ಇಂಡಿಯಾ ಹೆಸರಿನ ಖಾಸಗಿ ಸಂಸ್ಥೆಯ ಚೇರ್ಮನ್ ಆಗಿದ್ದಾರೆ. ಅವರ ಸದ್ಯದ ಆಸ್ತಿಯ ಮೌಲ್ಯ $3.7 ಶತಕೋಟಿ (₹30,000 ಕೋಟಿ).

ಬಯೋಕಾನ್‌ನ ಕಿರಣ್ ಮುಝುಂದಾರ್‌ ಶಾ, ನೈಕಾದ ಫಾಲ್ಗುಣಿ ನಾಯರ್‌ ಹಾಗೂ ಜ಼ೋಹೋ ಕಾರ್ಪ್‌ನ ರಾಧಾ ವೆಂಬು ಅವರಿಗಿಂತ ಲೀನಾ ಶತಕೋಟ್ಯಾಧಿಪತಿ ಮಹಿಳೆಯರ ಪಟ್ಟಿಯಲ್ಲಿ ಮುಂದಿದ್ದಾರೆ.

ಹೃದ್ರೋಗ ಹಾಗೂ ಮಧುಮೇಹದ ಔಷಧಗಳ ಕ್ಷೇತ್ರದಲ್ಲಿ ಯುಎಸ್‌ವಿ ಫಾರ್ಮಾ ದೇಶದ ಅಗ್ರ ಐದು ಕಂಪನಿಗಳಲ್ಲಿ ಒಂದಾಗಿದೆ. ಇದರೊಂದಿಗೆ ಸಕ್ರಿಯ ಫಾರ್ಮಕ್ಯೂಟಿಕಲ್ ವಸ್ತುಗಳು (ಎಪಿಐ), ಇಂಜೆಕ್ಷನ್‌ಗಳು ಹಾಗೂ ಬಯೋಸಿಮಿಲರ್‌ ಮದ್ದುಗಳನ್ನು ಸಹ ಯುಎಸ್‌ವಿ ಉತ್ಪಾದಿಸುತ್ತದೆ. ಯುಎಸ್‌ವಿಯ ಗ್ಲೈಕೋಮೆಟ್ ದೇಶದ ಅಗ್ರ ಮೂರು ಡಯಾಬೆಟಿಕ್ ಮದ್ದುಗಳಲ್ಲಿ ಒಂದಾಗಿದೆ.

ಪ್ರಯಾಣ ಪ್ರಿಯೆಯಾಗಿರುವ ತಿವಾರಿ, ಪುಸ್ತಕ ಓದುವುದನ್ನು ಇಷ್ಟ ಪಡುತ್ತಾರೆ. ಮುಂಬೈ ವಿವಿಯಿಂದ ಬಿಕಾಂ ಪದವಿ ಪೂರೈಸಿರುವ ಲೀನಾ, ಬೋಸ್ಟನ್ ವಿವಿಯಲ್ಲಿ ಎಂಬಿಎ ಮಾಡಿದ್ದಾರೆ.

ಯುಎಸ್‌ವಿಯ ಎಂಡಿ ಪ್ರಶಾಂತ್‌ ತಿವಾರಿರನ್ನು ವಿವಾಹವಾಗಿರುವ ಲೀನಾಗೆ ಒಬ್ಬ ಮಗಳಿದ್ದಾರೆ. ಪ್ರಶಾಂತ್‌ ಐಐಟಿ ಬಾಂಬೆ ಹಾಗೂ ಅಮೆರಿಕದ ಕಾರ್ನೆಲ್ ವಿವಿಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *