ಬ್ಯುಸಿ ಶೆಡ್ಯೂಲ್‌ ಮಧ್ಯೆ ಸಾನ್ಯಾ ಮನೆಯಲ್ಲಿ ರೂಪೇಶ್ ಶೆಟ್ಟಿ ಪ್ರತ್ಯಕ್ಷ – ರೂಪಾನ್ಯ ಮದುವೆಗೆ ಮಾತುಕತೆ ನಡೀತಾ ಇದ್ಯಾ…!?

ಬ್ಯುಸಿ ಶೆಡ್ಯೂಲ್‌ ಮಧ್ಯೆ ಸಾನ್ಯಾ ಮನೆಯಲ್ಲಿ ರೂಪೇಶ್ ಶೆಟ್ಟಿ ಪ್ರತ್ಯಕ್ಷ – ರೂಪಾನ್ಯ ಮದುವೆಗೆ ಮಾತುಕತೆ ನಡೀತಾ ಇದ್ಯಾ…!?

ನ್ಯೂಸ್‌ ಆ್ಯರೋ : ತುಳುನಾಡಿನ ರಾಕ್‌ಸ್ಟಾರ್‌, ನಟ, ನಿರ್ದೆಶಕ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಅವರು ಬಿಗ್‌ಬಾಸ್‌ ಸ್ಪರ್ಧಾಳು ಸಾನ್ಯಾ ಅಯ್ಯರ್ ಮನೆಗೆ ಈಚೆಗೆ ಭೇಟಿ ನೀಡಿದ್ದಾರೆ. ಕುಟುಂಬದ ಜೊತೆ ಫೋಟೋಗೆ ಪೋಸ್ ನೀಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಬಿಗ್ ಬಾಸ್ ಸೀಸನ್ 9 ಶುರುವಾಗುವ ಮೊದಲು ಈ ಬಾರಿ ಬಿಗ್‌ಬಾಸ್ ಒಟಿಟಿ ಶುರುವಾಗಿತ್ತು. ಅದರಲ್ಲಿ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್ ಇಬ್ಬರು ಆತ್ಮೀಯರಾಗಿದ್ದರು. ಇಬ್ಬರು ಕೂಡ ಟಿವಿ ಸೀಸನ್‍ಗೆ ಆಯ್ಕೆ ಆಗಿದ್ದರು. ನಂತರವೂ ಇವರಿಬ್ಬರ ಆತ್ಮೀಯತೆ ಮುಂದುವರೆದಿತ್ತು. ಇಬ್ಬರ ಫ್ರೆಂಡ್‍ಶಿಪ್ ಜನರಿಗೆ ಇಷ್ಟ ಆಗಿತ್ತು. ಅದರಲ್ಲೂ ಸಾನ್ಯಾಗೆ ರೂಪೇಶ್ ಶೆಟ್ಟಿ ಅಂದರೆ ತುಂಬಾ ಇಷ್ಟ. ಯಾವಾಗಲೂ ರೂಪಿ, ರೂಪಿ ಎಂದು ಓಡಾಡುತ್ತಾ ಇದ್ದರು.

ಸಾನ್ಯಾ ಅಯ್ಯರ್ ಬಿಗ್‌ಬಾಸ್‌ನಿಂದ ಹೊರಬಂದಾಗ ರೂಪೇಶ್ ಶೆಟ್ಟಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಸಾನ್ಯಾ ತರಹ ನನಗೆ ಯಾರೂ ಸಹ ಕೇರ್ ಮಾಡಿರಲಿಲ್ಲ. ಅವಳು ನನ್ನ ಜೀವನ ಬೆಸ್ಟ್ ಪಾರ್ಟ್ ಎಂದಿದ್ದರು. ಇಬ್ಬರ ನಡುವೆ ಪ್ರೀತಿ ಇದೆ, ಮದುವೆ ಆಗುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಾ ಇದೆ. ಆದರೆ, ಮದುವೆ, ಪ್ರೀತಿ ಬಗ್ಗೆ ಇಬ್ಬರೂ ಇದುವರೆಗೆ ಗುಟ್ಟು ಬಿಟ್ಟುಕೊಟ್ಟಿಲ್ಲ.

ಈಚೆಗೆ ರೂಪೇಶ್ ಶೆಟ್ಟಿ ಅವರು ಸಾನ್ಯಾ ಅಯ್ಯರ್ ಮನೆಗೆ ಭೇಟಿ ಕೊಟ್ಟಿದ್ದಾರೆ. ಅವರ ಕುಟುಂಬದ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ತುಂಬಾ ದಿನಗಳ ಬಳಿಕ ರೂಪೇಶ್- ಸಾನ್ಯಾ ಭೇಟಿ ಮಾಡಿದ್ದಾರೆ. ಸಾನ್ಯಾ ಅಯ್ಯರ್ ಜೊತೆಗಿನ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ. ಮದುವೆ ಮಾತುಕತೆನಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಮದುವೆ ಸುದ್ದಿ ಕೊಡಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ.

ರೂಪೇಶ್ ಶೆಟ್ಟಿ ಶೇರ್ ಮಾಡಿರುವ ಫೋಟೋಗಳಿಗೆ 25 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ರೂಪಾನ್ಯ ಜೋಡಿಯನ್ನು ಮತ್ತೆ ಒಟ್ಟಿಗೆ ನೋಡಿ ಫ್ಯಾನ್ಸ್ ಗೆ ಖುಷಿಯಾಗಿದೆ. ರೂಪೇಶ್ ಶೆಟ್ಟಿ ಅವರು ಸದ್ಯ ಸರ್ಕಸ್ ಎಂಬ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ಬ್ಯೂಸಿ ಆಗಿದ್ದಾರೆ. ಮತ್ತೊಂದೆಡೆ ಐಪಿಎಲ್‌ ಕನ್ನಡ ಕಮೆಂಟರಿಯನ್ನು ನೀಡುವ ಕೆಲಸದಲ್ಲಿ ತಲ್ಲೀನವಾಗಿದ್ದಾರೆ. ಈ ಮಧ್ಯೆಯೂ ಸಾನ್ಯಾ ಮನೆಗೆ ಭೇಟಿ ನೀಡಿದ್ದು, ಹೊಸ ಚರ್ಚೆಗೆ ಕಾರಣವಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *