ಯುವಕರು ಗಡ್ಡಬಿಟ್ಟರೆ ₹ 51 ಸಾವಿರ ದಂಡ, ಮದುವೆಯಲ್ಲಿ ಡಿಜೆಯೂ ಇರಬಾರದು – ವಿಚಿತ್ರ ನಿಯಮ ಜಾರಿಗೆ ತಂದ ಸಮುದಾಯ : ಎಲ್ಲಿ ಗೊತ್ತಾ..‌!?

ಯುವಕರು ಗಡ್ಡಬಿಟ್ಟರೆ ₹ 51 ಸಾವಿರ ದಂಡ, ಮದುವೆಯಲ್ಲಿ ಡಿಜೆಯೂ ಇರಬಾರದು – ವಿಚಿತ್ರ ನಿಯಮ ಜಾರಿಗೆ ತಂದ ಸಮುದಾಯ : ಎಲ್ಲಿ ಗೊತ್ತಾ..‌!?

ನ್ಯೂಸ್‌ ಆ್ಯರೋ : ಗುಜರಾತ್‌ ರಾಜ್ಯದ ಬನಸ್ಕಾಂತ ಜಿಲ್ಲೆಯ ಘನೇರಾದಲ್ಲಿ ಇತ್ತೀಚೆಗೆ ನಡೆದ 54 ಗ್ರಾಮಗಳ ಅಂಜನಾ ಸಮುದಾಯದ ಸಭೆಯಲ್ಲಿ 22 ಸುಧಾರಣಾ ನಿರ್ಣಯಗಳನ್ನು ಅಂಗೀಕರಿಸಿದ್ದು, ಆ ನಿರ್ಣಯಗಳು ಇದೀಗ ಭಾರೀ ಸುದ್ದಿ ಆಗ್ತಿದೆ.

ಘನೇರ ತಾಲ್ಲೂಕಿನ ಸುಮಾರು 54 ಗ್ರಾಮಗಳಲ್ಲಿರುವ ಅಂಜನಾ ಸಮುದಾಯದ ಜನರು ತಮ್ಮ ಸಮುದಾಯದ ಸುಧಾರಣೆಗಾಗಿ ಅವರು ಕೆಲವೊಂದು ನಿರ್ಣಯಗಳನ್ನು ಅಂಗೀಕರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಬನಸ್ಕಾಂತ ಜಿಲ್ಲೆ ರಾಜಸ್ಥಾನದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದ್ದು, ಇಲ್ಲಿ ಅನೇಕ ಸಾಮಾಜಿಕ ಅನಿಷ್ಟಗಳು, ಮೂಢನಂಬಿಕೆಗಳು ಈಗಲೂ ಮುಂದುವರೆದುಕೊಂಡು ಬಂದಿದೆ. ಅದಕ್ಕೆ ಅಂಜನಾ ಚೌಧರಿ ಸಮುದಾಯ ಕೂಡ ಬಲಿಯಾಗಿದ್ದು, ಈಗಾಗಲೇ ಕೆಲವೊಂದು ಸಾಮಾಜಿಕ ಪಿಡುಗುಗಳಿಂದ ಹೊರಬಂದಿದೆ.

ಇನ್ನೂ ಕೆಲವು ಸಾಮಾಜಿಕ ಅನಿಷ್ಠಗಳು ಮುಂದುವರೆದುಕೊಂಡು ಬಂದಿದ್ದು, ಇದರ ಮಧ್ಯೆಯೇ ಕೆಲವೊಂದು ಕಠಿಣ ನಿಯಮಗಳನ್ನು ರೂಪಿಸಲು ಅಂಜನಾ ಚೌಧರಿ ಸಮುದಾಯದ ಮುಖಂಡರು ನಿರ್ಧರಿಸಿದ್ದಾರೆ. ಸಮುದಾಯದ ಸಭೆಯನ್ನು ಅಂಗೀಕರಿಸಿರುವ ಆದೇಶವನ್ನು ಧಿಕ್ಕರಿಸಿ ಪುನಃ ಅನಿಷ್ಠಗಳನ್ನು ಅನುಸರಿಸಿದರೆ ಅಂತಹವರಿಗೆ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಅಂಜನಾ ಚೌಧರಿ ಸಮುದಾಯ ಅಂಗೀಕರಿಸಿರುವ ಪ್ರಮುಖ ನಿರ್ಣಯಗಳ ಪೈಕಿ ಮುಖ್ಯವಾಗಿ ಯುವಕರು ಗಡ್ಡ ಬಿಟ್ಟರೂ ₹ 51,000 ದಂಡ ತೆರಬೇಕಾಗುತ್ತದೆ ಎನ್ನುವ ನಿಯಮವನ್ನು ತರಲಾಗಿದ್ದು, ಇದೀಗ ಈ ನಿರ್ಣಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಶೇಷ ಅಂದ್ರೆ ಅಂಜನಾ ಚೌಧರಿ ಸಮುದಾಯದ ಸಭೆಯಲ್ಲಿ ಯುವಕರೇ ಗಡ್ಡ ಬಿಡದಂತೆ ನಿಯಮ ರೂಪಿಸಬೇಕು ಎಂದು ಮನವಿ ಮಾಡಿದ್ದು, ಹೀಗಾಗಿ ಸಮುದಾಯದ ಮುಖಂಡರು ಯುವಕರ ಮನವಿಗೆ ಅಸ್ತು ಎಂದಿದೆ.

ಇನ್ನುಳಿದಂತೆ ಸಮುದಾಯದಲ್ಲಿ ಸಾವು ಸಂಭವಿಸಿದರೆ 12 ಮತ್ತು 13ನೇ ದಿನ ಐಷಾರಾಮಿ ವಸ್ತುಗಳನ್ನು ಸೇವನೆ ಮಾಡಬಾರದು, ಔತಣಕೂಟಕ್ಕೆ ಅಡುಗೆ ಮಾಡುವವರನ್ನು ಕರೆಯಬಾರದು, ಮದುವೆಗಳಲ್ಲಿ ಡಿಜೆ ನಿಷೇಧಿಸಬೇಕು, ಹೋಟೆಲ್‌ಗಳಲ್ಲಿ ಹುಟ್ಟುಹಬ್ಬ ಆಚರಣೆ ನಿಷೇಧ, ಮದುವೆ ಸಮಾರಂಭದಲ್ಲಿ ಪಟಾಕಿಗಳ ಸೀಮಿತ ಬಳಕೆ, ಮದುವೆಗೆ ದುಬಾರಿ ಕಾರ್ಡ್‌ ಮುದ್ರಿಸಬಾರದು ಎಂದು ನಿಯಮ ರೂಪಿಸಲಾಗಿದೆ.

ಈ ಬಗ್ಗೆ ಸಭೆಯಲ್ಲಿ ಶಿಕಾರಪುರದ ಗಡಿಪತಿ ದಯಾರಾಮಜೀ ಮಹಾರಾಜ್ ಮಾತನಾಡಿ, ‘ಹಿಂದೂ ಧರ್ಮದಲ್ಲಿ ಸಂತರು ಮತ್ತು ಸಾಧುಸಂತರು ಮಾತ್ರ ಗಡ್ಡ ಬಿಡಬೇಕಾಗಿದ್ದು, ಸಮಾಜದ ಯುವಕರು ಗಡ್ಡ ಬಿಟ್ಟರೆ ಚೆನ್ನಾಗಿ ಕಾಣುವುದಿಲ್ಲ. ಹಾಗಾಗಿ ಅವರು ಗಡ್ಡ ಬೆಳೆಸಬಾರದು. ಹೀಗಾಗಿ ಗಡ್ಡ ಬಿಟ್ಟು ಓಡಾಡುವ ಯುವಕರ ವಿರುದ್ಧ ಎಚ್ಚರಿಕೆ ನೀಡಿ ಅವರನ್ನು ದೂರವಿಡುವಂತೆ ಸೂಚಿಸಲಾಗಿದೆ. ಆದೇಶವನ್ನು ಪಾಲಿಸದವರಿಗೆ ದಂಡ ಪಾವತಿಸಲು ಸೂಚಿಸಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *