ಬಾಲಕನ ತುಟಿಗೆ ಮುತ್ತಿಟ್ಟು ತನ್ನ ನಾಲಿಗೆ ಚೀಪುವಂತೆ ಹೇಳಿದ ದಲೈಲಾಮಾ – ಟಿಬೆಟಿಯನ್ ಬೌದ್ಧ​​ ಧರ್ಮಗುರು ವಿರುದ್ಧ ನೆಟ್ಟಿಗರ ಆಕ್ರೋಶ, ವಿಡಿಯೋ ವೈರಲ್

ಬಾಲಕನ ತುಟಿಗೆ ಮುತ್ತಿಟ್ಟು ತನ್ನ ನಾಲಿಗೆ ಚೀಪುವಂತೆ ಹೇಳಿದ ದಲೈಲಾಮಾ – ಟಿಬೆಟಿಯನ್ ಬೌದ್ಧ​​ ಧರ್ಮಗುರು ವಿರುದ್ಧ ನೆಟ್ಟಿಗರ ಆಕ್ರೋಶ, ವಿಡಿಯೋ ವೈರಲ್

ನ್ಯೂಸ್‌ ಆ್ಯರೋ : ಟಿಬೆಟಿಯನ್ ಬೌದ್ಧ​​ ಧರ್ಮಗುರು ದಲೈ ಲಾಮಾ ಅವರು ಬಾಲಕನೊಂದಿಗೆ ತೋರಿದ ನಡವಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ದಲೈ ಲಾಮಾ ಅವರು ಬಾಲಕನೊಬ್ಬನ ತುಟಿಗೆ ಮುತ್ತಿಟ್ಟಿದ್ದಲ್ಲದೆ, ತಮ್ಮ ನಾಲಿಗೆಯನ್ನು ಚೀಪುವಂತೆ ಆ ಹುಡುಗನಿಗೆ ಹೇಳಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ದಲೈಲಾಮ ಪಾಲ್ಗೊಂಡಿದ್ದಾರೆ. ಕುರ್ಚಿಯಲ್ಲಿ ಕುಳಿತ ಅವರಿಗೆ ನಮಿಸಲೆಂದು ಬಾಲಕನೊಬ್ಬ ಬಂದು, ಅವರ ಎದುರು ನಿಂತಿದ್ದಾನೆ. ಆ ಬಾಲಕನ ಗಲ್ಲವನ್ನು ಹಿಡಿದ ದಲೈಲಾಮಾ ಅವನ ತುಟಿಗೆ ಚುಂಬಿಸುತ್ತಾರೆ. ಬಳಿಕ ಹುಡುಗನ ಹಣೆಗೆ ತಮ್ಮ ಹಣೆಯನ್ನು ತಾಗಿಸುತ್ತಾರೆ. ಅದಾದ ಮೇಲೆ ಅವರು ನಾಲಿಗೆಯನ್ನು ಹೊರಚಾಚಿ, ‘ನೀನು ನನ್ನ ನಾಲಿಗೆಯನ್ನು ಚೀಪುವೆಯಾ’ ಎಂದು ಬಾಲಕನ ಬಳಿ ಕೇಳುತ್ತಾರೆ. ದಲೈಲಾಮಾ ಬಾಲಕನ ಎದುರು ಹೀಗೆ ವರ್ತಿಸುವಾಗ ಒಂದಷ್ಟು ಚಪ್ಪಾಳೆ, ನಗುವಿನ ಧ್ವನಿಯೂ ವಿಡಿಯೊದಲ್ಲಿ ಕೇಳುತ್ತದೆ.

ದಲೈಲಾಮಾ ಅವರು ಅತ್ಯಂತ ಅಸಹ್ಯವಾಗಿ, ಗಲೀಜು ಎನ್ನಿಸುವಂತೆ ವರ್ತಿಸಿದ್ದಾರೆ ಎಂದು ಅನೇಕರು ಟೀಕಿಸಿದ್ದಾರೆ. ಈ ಕುರಿತ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅನೇಕರು ಕಿಡಿಕಾರಿದ್ದಾರೆ. ದೀಪಿಕಾ ಪುಷ್ಕರ್​ನಾಥ್ ಎಂಬುವರು ಟ್ವೀಟ್ ಮಾಡಿ ‘ದಲೈಲಾಮಾ ಹೀಗೆ ಮಾಡಿದ್ದು ನಿಜಕ್ಕೂ ಅಸಹ್ಯಕರ. ಇಂಥದ್ದನ್ನೆಲ್ಲ ಯಾರೂ ಸಮರ್ಥನೆ ಮಾಡಲೇಬಾರದು’ ಎಂದಿದ್ದಾರೆ.

ಪ್ರವೀಣ್​ ತೋನ್ಸೇಖರ್ ಎಂಬುವರು ಟ್ವೀಟ್ ಮಾಡಿ ‘ದಲೈಲಾಮಾ ಅವರ ಬಗ್ಗೆ ಇದ್ದ ಗೌರವ ಎಲ್ಲ ನಾಶವಾಯಿತು. ಪಾಪ ಆ ಬಾಲಕನಿಗೆ ಅದೆಷ್ಟು ಗಲೀಜು ಎನ್ನಿಸಿರಬಹುದು’ ಎಂದಿದ್ದಾರೆ. ‘ಇದು ಖಂಡಿತ ನರಕಸದೃಶ. ಇದು ಕ್ರೈಂ ಅಲ್ಲವೇ? ಈ ಬಗ್ಗೆ ಹೆಚ್ಚಿನ ವಿಚಾರಣೆ ಅಗತ್ಯ’ ಎಂದು ಸಂಗೀತಾ ಮುರಳಿ ಎಂಬುವರು ಹೇಳಿದ್ದಾರೆ.

ಈ ಮಧ್ಯೆ ಡ್ರೇವ್ ಪೌಲೊ ಎಂಬುವರು ಬಿಬಿಸಿಯೊಂದು ಈ ಹಿಂದೆ ಬರೆದಿದ್ದ ಲೇಖನ​ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ‘ಟಿಬೆಟ್​​ನಲ್ಲಿ ನಾಲಿಗೆಯನ್ನು ಹೊರಚಾಚುವುದು ಪರಸ್ಪರ ಗ್ರೀಟ್ ಮಾಡಿಕೊಳ್ಳುವ ಒಂದು ವಿಧಾನ. 9ನೇ ಶತಮಾನದಿಂದಲೂ ಇದು ಚಾಲ್ತಿಯಲ್ಲಿದೆ. ಆಗ ಲಾಂಗ್​ ದರ್ಮಾ ಎಂಬ ರಾಜನಿದ್ದ. ಆತ ರಾಕ್ಷಸಿ ಗುಣಗಳನ್ನು ಹೊಂದಿದ್ದು, ಕಪ್ಪದಾದ ನಾಲಿಗೆ ಹೊಂದಿದ್ದ. ಅವನು ಸತ್ತ ಬಳಿಕ ಪುನರ್ಜನ್ಮ ತಾಳಿದ್ದಾನೆ ಎಂದು ಅಲ್ಲಿನ ಜನ ನಂಬಿದ್ದರು. ಇದೇ ಕಾರಣಕ್ಕೆ ನಾಲಿಗೆಯನ್ನು ಹೊರಚಾಚಿ ತಮ್ಮ ಎದುರಿಗಿನ ವ್ಯಕ್ತಿಗಳಿಗೆ ತೋರಿಸುವ ಮೂಲಕ, ತಾವು ಆ ದುಷ್ಟರಾಜನ ಪುನರ್ಜನ್ಮ ಅಲ್ಲ ಎಂದು ಹೇಳುತ್ತಿದ್ದರು. ಆದರೆ ಬರುಬರುತ್ತ ಅದು ಸಂಪ್ರದಾಯವಾಗಿ ಬೆಳೆದುಹೋಯಿತು’ ಎಂಬುದು ಆ ಲೇಖನದ ಸಾರಾಂಶ. ಆದರೆ ನಾಲಿಗೆಯನ್ನು ಚೀಪುವ ಸಂಸ್ಕೃತಿ ಇದೆ ಎಂಬ ಬಗ್ಗೆ ಉಲ್ಲೇಖವಿಲ್ಲ.

ದಲೈಲಾಮಾ ವಿವಾದ ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ. 2019ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡುತ್ತ ನನ್ನ ನಂತರ ಈ ಬೌದ್ಧ ಗುರುವಿನ ಸ್ಥಾನಕ್ಕೆ ಒಬ್ಬಳು ಮಹಿಳೆ ಬರಬೇಕು ಮತ್ತು ಆಕೆ ಅತ್ಯಂತ ಸುಂದರವಾಗಿ, ಆಕರ್ಷಕವಾಗಿ ಇರಬೇಕು ಎಂದು ಹೇಳಿದ್ದರು. ದಲೈಲಾಲಾ ಈ ಮಾತು ವಿವಾದ ಸೃಷ್ಟಿಸಿತ್ತು. ಅನೇಕರು ಅವರನ್ನು ಟೀಕಿಸಿದ್ದರು. ಅದರ ಬೆನ್ನಲ್ಲೇ ಕ್ಷಮೆ ಕೋರಿದ್ದರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *