ಇಬ್ಬರು ಪತ್ನಿಯರನ್ನು ಒಟ್ಟಿಗೆ ಗರ್ಭಿಣಿ ಮಾಡಿದ್ದ ಯುಟ್ಯೂಬರ್‌ ಅರ್ಮಾನ್‌ ಮಲಿಕ್‌ – ಗಂಡು ಮಗುವಿಗೆ ಜನ್ಮ ನೀಡಿದ ಎರಡನೇ ಪತ್ನಿ

ಇಬ್ಬರು ಪತ್ನಿಯರನ್ನು ಒಟ್ಟಿಗೆ ಗರ್ಭಿಣಿ ಮಾಡಿದ್ದ ಯುಟ್ಯೂಬರ್‌ ಅರ್ಮಾನ್‌ ಮಲಿಕ್‌ – ಗಂಡು ಮಗುವಿಗೆ ಜನ್ಮ ನೀಡಿದ ಎರಡನೇ ಪತ್ನಿ

ನ್ಯೂಸ್‌ ಆ್ಯರೋ : ತನ್ನ ಇಬ್ಬರು ಪತ್ನಿಯರನ್ನು ಒಟ್ಟಿಗೇ ಗರ್ಭಿಣಿ ಮಾಡಿದ್ದ ಹೈದರಾಬಾದ್‌ನ ಖ್ಯಾತ ಯುಟ್ಯೂಬರ್​ ಅರ್ಮಾನ್​ ಮಲಿಕ್​ ಅವರ ಎರಡನೆಯ ಪತ್ನಿ ಈಗ ಗಂಡ ಮಗುವಿಗೆ ಜನ್ಮ ನೀಡಿದ್ದಾರೆ.

ಅರ್ಮಾನ್ ಮಲಿಕ್ ಇತ್ತೀಚಿನ ದಿನಗಳಲ್ಲಿ ಬಹಳ ಸುದ್ದಿಯಲ್ಲಿದ್ದಾರೆ. ತಮ್ಮ ಇಬ್ಬರು ಪತ್ನಿಯರ ನಡುವೆ ಜಗಳ ಮಾಡಿಸುವ ನಾಟಕವಾಡಿಸಿ, ಅದನ್ನು ನಿಜವೆಂಬಂತೆ ಬಿಂಬಿಸಿ ಯೂಟ್ಯೂಬ್​ನಲ್ಲಿ ಲಕ್ಷಾಂತರ ವ್ಯೂಸ್​ಗಳನ್ನು ಪಡೆದುಕೊಳ್ಳುವಲ್ಲಿ ಅವರು ನಿಸ್ಸೀಮರು. ಅವರ ಇಬ್ಬರು ಪತ್ನಿಯರು ಕೂಡ ತಾವು ನಿಜವಾಗಿಯೂ ಜಗಳವಾಡುತ್ತಿರುವಂತೆ ಪೋಸ್​ ಕೊಡುವಲ್ಲಿ ಗಂಡನನ್ನು ಮೀರಿಸುತ್ತಾರೆ. ಈ ವಿಡಿಯೋಗಳನ್ನು ಲಕ್ಷ ಲಕ್ಷ ಮಂದಿ ವೀಕ್ಷಣೆ ಮಾಡುತ್ತಿದ್ದಾರೆ.

ಅರ್ಮಾನ್‌ ಅವರ ಪತ್ನಿಯರಂತೂ ಒಟ್ಟಿಗೇ ಗರ್ಭಿಣಿಯಾಗಿರುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಇದೀಗ ಎರಡನೆಯ ಪತ್ನಿ ಕೃತಿಕಾ ಮಲಿಕ್ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ.

ಅರ್ಮಾನ್​ ಮಲಿಕ್​ ಅವರು ಆಸ್ಪತ್ರೆಯೊಂದರಿಂದ ತಾನು ಮತ್ತು ಕುಟುಂಬದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಕುಟುಂಬಸ್ಥರು ತಮ್ಮ ಮಗುವಿನ ಆಗಮನವನ್ನು ಆನಂದಿಸುತ್ತಿರುವುದನ್ನು ನೋಡಬಹುದು. ವಿಡಿಯೋದಲ್ಲಿ, ಅರ್ಮಾನ್ ತನ್ನ ಗಂಡು ಮಗುವನ್ನು ತೋರಿಸುತ್ತಾ, ಜಚ್ಚಾ ಬಚಾ ದೋನೋ ಸಾಹಿ ಹೈ (ತಾಯಿ ಮತ್ತು ಮಗು ಚೆನ್ನಾಗಿದ್ದಾರೆ) ಎಂದು ಹೇಳಿದ್ದಾರೆ.

ಅರ್ಮಾನ್‌ ಕುಟುಂಬಕ್ಕೆ ಅಭಿಮಾನಿಗಳು ಮತ್ತು ಅನುಯಾಯಿಗಳು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ. ಹಲವು ಅಭಿಮಾನಿಗಳು ಈ ಇಬ್ಬರು ಸವತಿಯರು ಜಗಳವಾಡುವುದನ್ನು ನಿಜ ಎಂದು ತಿಳಿದುಕೊಂಡಿದ್ದು, ಇನ್ನು ಮುಂದೆ ಜಗಳವಾಡಬೇಡಿ. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ ಎಂದು ಸಂದೇಶ ಕಳಿಸುತ್ತಿದ್ದಾರೆ. ವಿಶ್ರಾಂತಿ ಮತ್ತು ಮಾತೃತ್ವವನ್ನು ಆನಂದಿಸಿ ಎಂದು ಬರೆದಿದ್ದಾರೆ.

ಅಷ್ಟಕ್ಕೂ ಅರ್ಮನ್​ ಮಲಿಕ್​ ಅವರ ಇತಿಹಾಸ ಕುತೂಹಲಕಾರಿಯಾಗಿದೆ. ಅದೇನೆಂದರೆ, ಅಸಲಿಗೆ ಗಾಯಕ ಅರ್ಮಾನ್​ ಮಲಿಕ್​ ಮೂಲತಃ ಹಿಂದೂ ವ್ಯಕ್ತಿ. ಹೆಸರು ಸಂದೀಪ್​ ಎಂದು. ಆದರೆ, ಮೊದಲ ಹೆಂಡತಿ ಇರುವಾಗಲೇ ಇನ್ನೊಂದು ಮದುವೆಯಾದರು. ಹಿಂದೂ ಸಂಪ್ರದಾಯದಲ್ಲಿ ಎರಡು ಮದುವೆಗೆ ಅವಕಾಶ ಇಲ್ಲದ ಕಾರಣ, ಇಸ್ಲಾಂಗೆ ಮತಾಂತರಗೊಂಡರು. ಈಗ ಅವರು ಕಾನೂನುಬದ್ಧವಾಗಿ ಎರಡು ಪತ್ನಿಯನ್ನು ಪಡೆದಂತಾಗಿದೆ. ಮೊದಲ ಪತ್ನಿಯಿಂದ ಒಂದು ಗಂಡು ಮಗುವನ್ನು ಹೊಂದಿರುವ ಅವರು, ಈಗ ಇಬ್ಬರೂ ಪತ್ನಿಯರನ್ನು ಒಟ್ಟಿಗೆ ಗರ್ಭಿಣಿ ಮಾಡಿದ್ದಾರೆ.

ಖ್ಯಾತ ಗಾಯಕ ಅರ್ಮಾನ್​ ಮಲಿಕ್​ ಅವರು ಈ ಯೂಟ್ಯೂಬರ್​ ಹೆಸರಿನ ಕುರಿತು ಈ ಹಿಂದೆ ಕೆಂಡಾಮಂಡಲವಾಗಿದ್ದರು. ಇಬ್ಬರನ್ನು ಮದುವೆಯಾಗುವ ಸಲುವಾಗಿ ಮತಾಂತರಗೊಂಡು ಅರ್ಮಾನ್‌ ಮಲಿಕ್‌ ಎಂದು ಹೆಸರು ಬದಲಿಸಿರುವುದು ನನಗೆ ಅಸಹ್ಯ ಮೂಡಿಸಿದೆ. ದಯವಿಟ್ಟು ಯಾರೂ ಅವರನ್ನು ನನ್ನ ಹೆಸರಿನಲ್ಲಿ ಕರೆಯಬೇಡಿ ಎಂದು ಅರ್ಮನ್​ ಮನವಿ ಮಾಡಿಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಯುಟ್ಯೂಬರ್, ನಾನು ಯಾರ ಹೆಸರನ್ನೂ ನಕಲು ಮಾಡಿಲ್ಲ. ಜಗತ್ತಿನಲ್ಲಿ ಒಂದೇ ಹೆಸರಿನ ಅನೇಕ ಜನರಿರಬಹುದು. ಹೆಸರಿನ ಮೇಲೆ ಯಾರಿಗೂ ಪೇಟೆಂಟ್ ಇಲ್ಲ. ನೀವು ಪ್ರಸಿದ್ಧ ಕುಟುಂಬಕ್ಕೆ ಸೇರಿದವರಾಗಿರುವುದರಿಂದ ನೀವು ಪ್ರಸಿದ್ಧರಾಗಿದ್ದೀರಿ, ಆದರೆ ನಾನು ಯೂಟ್ಯೂಬರ್​ ಆಗಿ ಸ್ವಂತ ಬಲದ ಮೇಲೆ ಹೆಸರು ಮಾಡಿರುವವನು. ಅದನ್ನು ಕೇಳಲು ನೀವು ಯಾರು ಎಂದು ಪ್ರಶ್ನಿಸಿದ್ದರು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *