ಹಳೆಯ ಲೋಗೋ‌ ಬದಲಾಯಿಸಿದ ಪೆಪ್ಸಿ ಕಂಪನಿ – ಹೊಸ ಲೋಗೋ ಹೇಗಿದೆ ಗೊತ್ತಾ…!?

ಹಳೆಯ ಲೋಗೋ‌ ಬದಲಾಯಿಸಿದ ಪೆಪ್ಸಿ ಕಂಪನಿ – ಹೊಸ ಲೋಗೋ ಹೇಗಿದೆ ಗೊತ್ತಾ…!?

ನ್ಯೂಸ್ ಆ್ಯರೋ : ತಂಪು ಪಾನೀಯವೆಂದಾಗ ನಮ್ಮ ಯೋಚನೆಗೆ ಬರುವ ಮೊದಲ ಹೆಸರೇ ಪೆಪ್ಸಿ.‌ ನಮ್ಮ ಬಾಲ್ಯದ ದಿನಗಳಿಂದಲೂ ಜನಪ್ರಿಯವಾಗಿರುವ ಪೆಪ್ಸಿ ಬ್ರ್ಯಾಂಡ್ ಇದೀಗ ತನ್ನ ಲಾಂಛನವನ್ನು ಬದಲಿಸುವ ಯೋಜನೆಯಲ್ಲಿದೆ. ಯಶಸ್ವೀ 125 ವರ್ಷಗಳನ್ನು ಪೂರೈಸಿರುವ ಕಂಪೆನಿ ಇದೀಗ ಹೊಸ ಲಾಂಛನವನ್ನು ಉತ್ತರ ಅಮೇರಿಕಾದಲ್ಲಿ ಪರಿಚಯಿಸಿದ್ದು, 2024ರ ಒಳಗೆ ಪ್ರಪಂಚದಾದ್ಯಂತ ಹೊಸ ಲೋಗೋ ಚಾಲ್ತಿಗೆ ಬರಲಿದೆ ಎಂಬ ಸುದ್ದಿಯನ್ನು ಪೆಪ್ಸಿ ಕಂಪೆನಿಯು ಅಮೇರಿಕಾದ ಮಾಧ್ಯಮಗಳಲ್ಲಿ ಪ್ರಕಟಪಡಿಸಿದೆ.

ನಮ್ಮೆಲ್ಲರಿಗೂ ತಿಳಿದಿರುವಂತೆ ಈಗಿರುವ ಲೋಗೋ ಒಂದು ವೃತ್ತವಾಗಿದ್ದು, ಅದರಲ್ಲಿ ಕೆಂಪು,ಬಿಳಿ ಮತ್ತು ನೀಲಿ ಬಣ್ಣಗಳ ಪಟ್ಟಿಗಳಿವೆ. ಜೊತೆಗೆ ಅದರ ಪೆಪ್ಸಿ ಎಂಬ ಪದವನ್ನು ಸೇರಿಸಬಹುದು.

ಆದರೆ ಈಗಿರುವ ಲಾಂಛನಕ್ಕೂ, ಮುಂದೆ ಬರಲಿರುವ ಲಾಂಛನಕ್ಕೂ ಕೊಂಚಮಟ್ಟಿಗೆ ಭಿನ್ನತೆಗಳಿವೆ. ಈಗಿರುವ ಲೋಗೋದ ವೃತ್ತಾಕಾರವು ಕೇವಲ ಮೂರು ಬಣ್ಣಗಳಿಂದ ಕೂಡಿದ್ದು, ಕಂಪೆನಿಯ ಹೆಸರು ವೃತ್ತದ ಹೊರಭಾಗದಲ್ಲಿದೆ. ಮುಂದೆ ಬರಲಿರುವ ಲೋಗೋದಲ್ಲಿ ಕಂಪೆನಿಯ ಹೆಸರನ್ನು ವೃತ್ತದ ಮಧ್ಯಭಾಗದಲ್ಲಿಯೇ ಬರೆಯಲಾಗಿದ್ದು, ಪಾನೀಯವು ಶೀಘ್ರದಲ್ಲಿಯೇ ಹೊಸ ಲಾಂಛನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಪೆಪ್ಸಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವದಕ್ಕೆ ಸಾಕಷ್ಟು ಸರ್ಕಸ್ ಗಳನ್ನು ಮಾಡುತ್ತಲೇ ಇರುತ್ತದೆ. ಅದರಲ್ಲಿ ಈ ಲೋಗೋ ಬದಲಾವಣೆಯೂ ಒಂದು. 1898ರಲ್ಲಿ ಪ್ರಾರಂಭವಾದ ಪೆಪ್ಸಿ ತನ್ನ ಸುದೀರ್ಘ ಜರ್ನಿಯಲ್ಲಿ ಹಲವಾರು ಬಾರಿ ಲೋಗೋವನ್ನು ಬದಲಾಯಿಸಿಕೊಂಡಿದೆ. ಈಗ ಬಳಕೆಯಲ್ಲಿರುವ ಲೋಗೋ ಹದಿನೈದು ವರ್ಷಗಳ ಹಿಂದೆ,ಅಂದರೆ 2008ರಲ್ಲಿ ಪರಿಚಯಿಸಿದ್ದು. ಇದೀಗ ಮತ್ತೆ ಲಾಂಛನ ಹೊಸರೂಪ ಪಡೆಯುತ್ತಿದೆ.

ಸದ್ಯ ಈ ವಿಚಾರವನ್ನು ಪೆಪ್ಸಿ ಕಂಪೆನಿಯ ಮಾರ್ಕೆಟಿಂಗ್ ಅಧಿಕಾರಿ ಟಾಡ್ ಕಪ್ಲಾನ್ ಅವರು ಹೊಸ ಲೋಗೋ ಸಮೇತ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು “ಪೆಪ್ಸಿಯ ಹೊಸ ಪರ್ವಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ.ನಮ್ಮ ಪೆಪ್ಸಿ ಕಂಪನಿಯ ಹೊಸ ಲೋಗೋ ಮತ್ತು ವಿಷುವಲ್ ಐಡೆಂಟಿಟಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಹೆಮ್ಮೆ ಪಡುತ್ತೇನೆ. ಈ ಬದಲಾವಣೆ ಸದ್ಯ ಅಮೇರಿಕಾದಲ್ಲಿ ಪ್ರಾರಂಭಗೊಳ್ಳುತ್ತಿದೆ” ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.

ಪ್ರಸ್ತುತ ಹೊಸ ಲೋಗೋ ಉತ್ತರ ಅಮೇರಿಕಾದ ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ. 2024ರಲ್ಲಿ ಜಗತ್ತಿನಾದ್ಯಂತ ಇದು ವಿಸ್ತರಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಹೊಸ ಲೋಗವು 1990ರಲ್ಲಿ ಚಾಲ್ತಿಯಲ್ಲಿದ್ದ ಲೋಗವನ್ನೇ ಹೋಲುತ್ತಿದ್ದು, ಬಹುಶಃ ಅದು ಆ ಕಾಲದಲ್ಲಿ ಜನರಿಗೆ ಬಹಳಷ್ಟು ಆಪ್ತವಾಗಿತ್ತು ಎಂದು ತೋರುತ್ತದೆ.ಹಾಗಾಗಿ ಅಸ್ತಿತ್ವದಲ್ಲಿರುವ ಲೋಗೋವನ್ನು ಕೊಂಚ ಮಾರ್ಪಾಡು ಮಾಡಿ ಕಂಪೆನಿಯ ಹೆಸರನ್ನು ದಪ್ಪಕ್ಷರಗಳಲ್ಲಿ ಬರೆಯಲಾಗಿದೆ ಎಂದು ಪೆಪ್ಸಿಕೋದ ಮುಖ್ಯ ವಿನ್ಯಾಸಗಾರ
ಮೌರೊ ಪೊರ್ಸಿನಿ ಹೇಳಿಕೊಂಡಿರುವುದಾಗಿ CNN ವರದಿ ಮಾಡಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *