ಬಾಲಿವುಡ್ ಗೆ ‘ಲೇಡಿ ಸೂಪರ್ ಸ್ಟಾರ್’ ಎಂಟ್ರಿ – 10 ಕೋಟಿ ಸಂಭಾವನೆ, ಬಿಕಿನಿಯಲ್ಲಿ ಮಿಂಚಲಿದ್ದಾರೆ ನಯನತಾರಾ…!!

ಬಾಲಿವುಡ್ ಗೆ ‘ಲೇಡಿ ಸೂಪರ್ ಸ್ಟಾರ್’ ಎಂಟ್ರಿ – 10 ಕೋಟಿ ಸಂಭಾವನೆ, ಬಿಕಿನಿಯಲ್ಲಿ ಮಿಂಚಲಿದ್ದಾರೆ ನಯನತಾರಾ…!!

ನ್ಯೂಸ್ ಆ್ಯರೋ‌ : ದಕ್ಷಿಣ ಭಾರತದಲ್ಲಿ ‘ಲೇಡಿ ಸೂಪರ್ ಸ್ಟಾರ್’ ಎಂದೇ ಫೇಮಸ್ ಆಗಿರುವ ನಟಿ ನಯನತಾರಾ, ಸದ್ಯ ಮದುವೆಯಾಗಿ ತಮ್ಮ ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಇದ್ದಾರೆ. ಹಾಗೆಂದ ಮಾತ್ರಕ್ಕೆ ಅವರೇನೂ ಸಿನಿಮಾದಿಂದ ನಿವೃತ್ತಿ ಪಡೆದುಕೊಂಡಿಲ್ಲ. ಅತ್ತ ಹೊಸ ಹೊಸ ಸಿನಿಮಾಗಳಲ್ಲೂ ಅವರು ಸಖತ್ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಶಾರುಖ್ ಖಾನ್ ಅವರ ‘ಜವಾನ್‌’ ಸಿನಿಮಾದ ಮೂಲಕ ಬಾಲಿವುಡ್‌ಗೂ ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ. ಇದೆಲ್ಲದರ ಮಧ್ಯೆ ಒಂದು ನ್ಯೂಸ್ ಸಖತ್ ಸೌಂಡ್ ಮಾಡುತ್ತಿದೆ. ಏನದು? ‘ಜವಾನ್’ ನಯನತಾರಾ ಬಿಕಿನಿ ಧರಿಸುತ್ತಾರೆ!

ಹೌದು, ಇಂಥದ್ದೊಂದು ಸಿನಿ ಲೋಕದಲ್ಲಿ ಸುದ್ದಿ ಸಖತ್ ಸೌಂಡು ಮಾಡುತ್ತಿದ್ದು, ‘ಜವಾನ್‌’ ಸಿನಿಮಾದಲ್ಲಿ ನಯನತಾರಾ ಬಿಕಿನಿ ಧರಿಸುತ್ತಾರೆ ಎನ್ನಲಾಗಿದೆ. ನಯನತಾರಾ ಆರಂಭದಲ್ಲಿ ಗ್ಲಾಮರಸ್ ಪಾತ್ರಗಳಿಂದಲೇ ಹೆಚ್ಚು ಸುದ್ದಿ ಆದವರು. ಆದರೆ ಕಳೆದ ಕೆಲವು ವರ್ಷಗಳಿಂದ ಮಹಿಳಾ ಪ್ರಧಾನ ಪಾತ್ರಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದ ನಯನ ಇದೀಗ ಮತ್ತೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುಲು ರೆಡಿಯಾಗಿದ್ದಾರೆ.

ಅದು ಶಾರುಖ್ ಖಾನ್ ಅವರ ‘ಜವಾನ್‌’ ಸಿನಿಮಾದಲ್ಲಿ ನಯನತಾರಾ ಮತ್ತೆ ಗ್ಲಾಮರಸ್ ಆಗಿ ಮಿಂಚುಲಿದ್ದು, ಈ ಸಿನಿಮಾಕ್ಕಾಗಿ ಬಿಕಿನಿ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಅಲ್ಲದೇ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರಲಿರುವ ‘ಜವಾನ್’ ಸಿನಿಮಾದಲ್ಲಿ ನಟಿಸಲು ನಯನತಾರಾ ಭರ್ತಿ 10 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಸಾಮಾನ್ಯವಾಗಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದಕ್ಕೆ ನಯನತಾರಾ ಅವರು 5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಆದರೆ ‘ಜವಾನ್‌’ 10 ಕೋಟಿ ರೂ. ಪಡೆದಿರುವುದು ಅಚ್ಚರಿ ಮೂಡಿಸಿದೆ.

ಇನ್ನೂ ಈ ಹಿಂದೆ ಕೂಡ ನಯನತಾರಾ ತಮಿಳು ಸಿನಿಮಾಗಳಲ್ಲಿ ಬಿಕಿನಿ ಧರಿಸಿದ್ದರು. ಅಜಿತ್ ಕುಮಾರ್ ನಟಿಸಿದ್ದ ‘ಬಿಲ್ಲಾ’, ಸಿಂಬು ನಟನೆಯ ‘ವಲ್ಲಾವನ್’ ಸಿನಿಮಾಗಳಲ್ಲಿ ನಯನತಾರಾ ಬಿಕಿನಿ ಧರಿಸಿದ್ದರು. ಅಷ್ಟೇ ಏಕೆ, ತೆಲುಗಿನ ಜೂನಿಯರ್ ಎನ್‌ಟಿಆರ್ ಅಭಿನಯದ ‘ಅಧುರ್ಸ್’ ಚಿತ್ರದಲ್ಲೂ ನಯನತಾರಾ ಬಿಕಿನಿ ಧರಿಸಿ ಮಿಂಚಿದ್ದರು.

ಶಾರುಖ್ ಖಾನ್ ಅವರ ‘ಜವಾನ್‌’ ಸಿನಿಮಾಗೆ ತಮಿಳಿನ ಅಟ್ಲೀ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ತಮಿಳಿನ ವಿಜಯ್ ಸೇತುಪತಿ, ಯೋಗಿ ಬಾಬು, ಬಾಲಿವುಡ್ ನಟಿ ಸಾನ್ಯಾ ಮಲ್ಹೋತ್ರಾ, ಸುನೀಲ್ ಗ್ರೋವರ್ ಸೇರಿದಂತೆ ಸಾಕಷ್ಟು ಮಂದಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ‘ಜವಾನ್‌’ ಮ್ಯೂಸಿಕ್ ನೀಡುತ್ತಿದ್ದಾರೆ. ಜೂನ್ 2ರಂದು ಈ ಸಿನಿಮಾ ರಿಲೀಸ್ ಆಗಲಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *