ಕೊಳೆಯಾದ ಬಟ್ಟೆ ತೊಳೆಯೋಕೆ ಪೆಯ್ನ್ ಕಿಲ್ಲರ್ ಬಳಸಿ – ಅಚ್ಚರಿಯಾದ್ರೂ ಇದು ಸತ್ಯ..!!

ಕೊಳೆಯಾದ ಬಟ್ಟೆ ತೊಳೆಯೋಕೆ ಪೆಯ್ನ್ ಕಿಲ್ಲರ್ ಬಳಸಿ – ಅಚ್ಚರಿಯಾದ್ರೂ ಇದು ಸತ್ಯ..!!

ನ್ಯೂಸ್‌ ಆ್ಯರೋ : ಮಹಿಳೆಯರಿಗೆ ದೈನಂದಿನ ಜೀವನದಲ್ಲಿ ಮನೆ ಸ್ವಚ್ಛ ಮಾಡುವುದು ಹಾಗೂ ಬಟ್ಟೆ ಒಗೆಯುವುದು ಪ್ರಮುಖ ಕೆಲಸವಾಗಿದೆ. ಸದ್ಯ ಇದಕ್ಕೆಲ್ಲ ಮಿಷನ್‌ಗಳಿದ್ದರೂ ಎಲ್ಲವೂ ಕೈಯಲ್ಲಿ ಮಾಡಿದ ಹಾಗೇ ಫಲಿತಾಂಶ ನೀಡುವುದಿಲ್ಲ. ಅದರಲ್ಲಿ ವಾಷಿಂಗ್ ಮಿಷನ್‌ಗೆ ನಮ್ಮ ಗುಣಮಟ್ಟದ ಬಟ್ಟೆಗಳನ್ನು ಹಾಕುವಂತಿಲ್ಲ. ಕೆಲವೊಂದು ಬಾರಿ ಮಷಿನ್‌ನಲ್ಲಿ ಬಟ್ಟೆಗಳು ಸರಿಯಾಗಿ ಸ್ವಚ್ಛವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಪೇಯ್ನ್‌ ಕಿಲ್ಲರ್ ಅನ್ನು ಬಳಸಿ ಬಟ್ಟೆಯನ್ನು ಸ್ವಚ್ಛ ಮಾಡಬಹುದು.

ಹೌದು.. ನೋವನ್ನು ಹೋಗಲಾಡಿಸಲು ನಾವು ಸಾಮಾನ್ಯವಾಗಿ ಆಸ್ಪಿರಿನ್ ಅನ್ನು ಬಳಸುತ್ತೇವೆ. ಅದೇ ಮಾತ್ರೆಯಿಂದ ಬಟ್ಟೆಯನ್ನು ಪಳ ಪಳ ಹೊಳೆಯುವಂತೆ ಮಾಡಬಹುದು. ಇದನ್ನು ಬಟ್ಟೆಯ ಡಾಕ್ಟರ್‌ ಅಂತ ಹೇಳಿದರೂ ತಪ್ಪಾಗಲಾರದು.

ಅಸ್ಪಿರಿನ್‌ ಮಾತ್ರೆಗಳನ್ನು ಬಳಸಿ ಬಟ್ಟೆಗಳಿಂದ ಕಲೆಗಳನ್ನು ತೆಗೆಯಬಹುದು. ಆಸ್ಪಿರಿನ್ ಶುದ್ಧೀಕರಣ ಪ್ರಕ್ರಿಯೆಗಳೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ. ಬಟ್ಟೆ ಒಗೆಯುವಾಗ ಕೆಲವು ಆಸ್ಪಿರಿನ್ ಮಾತ್ರೆಗಳನ್ನು ವಾಷಿಂಗ್ ಮಷಿನ್‌ನಲ್ಲಿ ಹಾಕಿ. ಇದರಿಂದ ಬಟ್ಟೆ ಸ್ವಚ್ಛವಾಗುತ್ತದೆ.

ಉಪಯೋಗಿಸುವ ಕ್ರಮ ಹೀಗಿದೆ:

ಮಾತ್ರೆಗಳನ್ನು ಪುಡಿಮಾಡಿ ನೀರಿನಲ್ಲಿ ಬೆರೆಸಬಹುದು ಇಲ್ಲದಿದ್ದರೆ ನೀರಿನಲ್ಲಿ ಕರಗಿಸಿ ಮಷಿನ್‌ಗೆ ಹಾಕಬಹುದು. ಕಲೆಗಳಾಗಿರುವ ಬಟ್ಟೆಗಳಿಂದರೆ ಬಟ್ಟೆ ಕೂಡ ಹೊಸದರಂತೆ ಹೊಳೆಯುತ್ತದೆ. ವಾಷಿಂಗ್‌ ಮಷಿನ್‌ ಬಳಸದೆ ಇರುವವರು ಕೂಡ ಕಲೆಗಳನ್ನು ಹೊಡೆದೋಡಿಸಲು ಆಸ್ಪಿರಿನ್‌ ಬಳಕೆ ಮಾಡಬಹುದು. ಬಟ್ಟೆಗಳನ್ನು ನೆನೆಸುವ ಬಕೆಟ್‌ನಲ್ಲಿ ಮಾತ್ರೆಗಳನ್ನು ಬೆರೆಸಿ ಜೊತೆಗೆ ಡಿಟರ್ಜೆಂಟ್ ಕೂಡ ಸೇರಿಸಿ ತೊಳೆಯಬಹುದು.

ಇದು ಬಟ್ಟೆಯ ಕಲೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದ್ದು, ಉತ್ತಮ ಫಲಿತಾಂಶವನ್ನು ನೀಡುತ್ತದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *