ಇನ್ಮುಂದೆ ದೊರೆಯಲಿದೆ ವಿದೇಶಗಳಲ್ಲೂ ಪಾವತಿ ಸೌಲಭ್ಯ ಫೋನ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್

ಇನ್ಮುಂದೆ ದೊರೆಯಲಿದೆ ವಿದೇಶಗಳಲ್ಲೂ ಪಾವತಿ ಸೌಲಭ್ಯ ಫೋನ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್

ನ್ಯೂಸ್ ಆ್ಯರೋ : ಡಿಜಿಟಲೀಕರಣ ಹೆಚ್ಚಾದ ಮೇಲೆ ಪ್ರಪಂಚದಾದ್ಯಂತ ಜೇಬಿನಲ್ಲಿ ಹಣ ಇಟ್ಟುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಹೆಚ್ಚಿನವರು ಮೊಬೈಲ್ ಬ್ಯಾಂಕಿಂಗ್ ಮೂಲಕವೇ ವ್ಯವಹಾರ ನಡೆಸುತ್ತಾರೆ. ಅದಕ್ಕಾಗಿ ಫೋನ್‌ ಪೇ, ಗೂಗಲ್ ಪೇ, ಪೇಟಿಯಂ ಇತ್ಯಾದಿಗಳನ್ನು‌ ಬಳಸುತ್ತಾರೆ. ಇದೀಗ ಫೋನ್ ಪೇ ಬಳಸುವವರಿಗೆ ಒಂದು ಗುಡ್ ನ್ಯೂಸ್ ರೆಡಿಯಾಗಿದೆ‌. ಇನ್ಮುಂದೆ ಫೋನ್ ಪೇ‌ ಮೂಲಕ ವಿದೇಶಗಳಲ್ಲೂ ಪಾವತಿ ಸೌಲಭ್ಯ ದೊರೆಯಲಿದೆ.

ಭಾರತದ ಅತಿ ದೊಡ್ಡ ಡಿಜಿಟಲ್ ಪಾವತಿ ವೇದಿಕೆಯಾದ ಫೋನ್ ಪೇ ವಿದೇಶಗಳಲ್ಲಿಯೂ ತನ್ನ ಸೇವೆ ಆರಂಭಿಸಿದೆ. ಯುಪಿಐ ಆಧಾರಿತ ಹಣ ವರ್ಗಾವಣೆ ಆಪ್ ಫೋನ್ ಪೇ ವಿದೇಶದಲ್ಲೂ ಹಣ ಪಾವತಿಸುವ ವೈಶಿಷ್ಟವನ್ನು ಬಳಕೆದಾರರಿಗೆ ಪರಿಚಯಿಸಿದೆ. ಈ ಮಾದರಿಯ ಸೇವೆ ಒದಗಿಸುತ್ತಿರುವ ದೇಶದ ಮೊದಲ ಆ್ಯಫ್ ಎಂಬ ಹಿರಿಮೆಗೆ ಫೋನ್ ಪೇ ಪಾತ್ರವಾಗಿದೆ.

ಅಂತರರಾಷ್ಟ್ರೀಯ ಡೆಬಿಟ್ ಕಾರ್ಡ್ ರೀತಿಯಲ್ಲಿಯೇ ಫೋನ್ ಪೇ ಇನ್ನುಮುಂದೆ ಕಾರ್ಯ ನಿರ್ವಹಿಸಲಿದೆ. ಈ ಅಪ್ಲಿಕೇಶನ್ ಬಳಸಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಿದೇಶಗಳಲ್ಲಿ ಹಣ ಪಾವತಿಸಿದಾಗ ಅಲ್ಲಿನ ಹಣದ ಮೌಲ್ಯವೇ ಸಂದಾಯವಾಗುತ್ತದೆ. ಇದರಿಂದ ವಿದೇಶಿ ಪ್ರಯಾಣ ಕೈಗೊಳ್ಳುವ ಭಾರತೀಯರಿಗೆ ಅನುಕೂಲವಾಗಲಿದೆ.

ಆರಂಭಿಕವಾಗಿ ಸಿಂಗಾಪುರ, ಮಾರಿಷಸ್, ನೇಪಾಳ, ಯುಎಇ ಹಾಗೂ ಭೂತಾನ್ ದೇಶಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದ್ದು ಮುಂದಿನ ದಿನಗಳಲ್ಲಿ ಭಾರತದಲ್ಲೂ ಜಾರಿಯಾಗಲಿದೆ ಎಂಬ ಮಾಹಿತಿಯಿದೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *