‘ಗ್ರ್ಯಾಮಿ ಪ್ರಶಸ್ತಿ’ ವೇದಿಕೆಗೆ ನಗ್ನವಾಗಿ ಎಂಟ್ರಿ ಕೊಟ್ಟ ಮಾಡೆಲ್; ವಿಡಿಯೋ ವೈರಲ್‌, ವೇದಿಕೆಯಲ್ಲಿ ಆಗಿದ್ದೇನು?

Bianca Censori
Spread the love

ನ್ಯೂಸ್ ಆ್ಯರೋ: ಹಾಲಿವುಡ್‌ನ 67ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 3ರಂದು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಿತು. ಹಾಲಿವುಡ್‌ನ ಅನೇಕ ದೊಡ್ಡ ಗಾಯಕರು ಅದರ ಭವ್ಯತೆಯನ್ನು ಹೆಚ್ಚಿಸಲು ಆಗಮಿಸಿದ್ದರು.

ಅನೇಕ ದೊಡ್ಡ ಸಂಗೀತ ದಿಗ್ಗಜರಿಗೆ ಇಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಆದರೆ ಎಲ್ಲೆಡೆ ಚರ್ಚೆಯಾಗುತ್ತಿರುವ ಒಂದು ವಿಷಯವೆಂದರೆ, ಅದು ರ‍್ಯಾಪರ್ ಕಾನ್ಯೆ ವೆಸ್ಟ್ ಮತ್ತು ಅವರ ಪತ್ನಿ ಆಸ್ಟ್ರೇಲಿಯಾದ ಮಾಡೆಲ್ ಬಿಯಾಂಕಾ ಸೆನ್ಸೋರಿ ವೇಷ.

ಅಮೇರಿಕನ್ ರ‍್ಯಾಪರ್ ಕಾನ್ಯೆ ವೆಸ್ಟ್ ಅವರ ಪತ್ನಿ ಆಸ್ಟ್ರೇಲಿಯಾದ ಮಾಡೆಲ್ ಬಿಯಾಂಕಾ ಸೆನ್ಸೋರಿ ಅವರೊಂದಿಗೆ ಆಗಮಿಸಿದರು. ಸಮಾರಂಭಕ್ಕೆ ಹೋಗುವ ಮೊದಲು ಇಬ್ಬರೂ ರೆಡ್ ಕಾರ್ಪೆಟ್ ಗೆ ಬಂದಿದ್ದು ಅಲ್ಲಿ ಅವರು ತಮ್ಮ ಲುಕ್ ನಿಂದ ಎಲ್ಲರನ್ನೂ ಅಚ್ಚರಿಗೊಳಿಸಿದರು.

ಕಾನ್ಯೆ ಮತ್ತು ಬಿಯಾಂಕಾ ಮೊದಲು ರೆಡ್ ಕಾರ್ಪೆಟ್ ಮೇಲೆ ಸಂಪೂರ್ಣವಾಗಿ ಕಪ್ಪು ಲುಕ್‌ನಲ್ಲಿ ಕಾಣಿಸಿಕೊಂಡರು. ಬಿಯಾಂಕಾ ಕಪ್ಪು ನಿಲುವಂಗಿಯನ್ನು ಧರಿಸಿದ್ದರು. ಆದರೆ ಮುಂದೆ ಸಾಗುತ್ತಿದ್ದಂತೆ ಬಿಯಾಂಕಾ ತನ್ನ ನಿಲುವಂಗಿಯನ್ನು ತೆಗೆದಳು. ಅದರ ನಂತರ ಅಲ್ಲಿ ಒಂದು ಸಂಚಲನ ಉಂಟಾಯಿತು. ಬಿಯಾಂಕಾ ಒಳಗೆ ಪಾರದರ್ಶಕ ಉಡುಪನ್ನು ಧರಿಸಿ ಬಂದಿದ್ದಳು.

ಆ ಉಡುಪಿಯನ್ನು ಆಕೆ ಸಂಪೂರ್ಣ ಬೆತ್ತಲಾದಂತೆ ಕಾಣುತ್ತಿತ್ತು. ಇದನ್ನು ನೋಡಿದ ಕ್ಯಾಮೆರಾಮನ್ ಗಳು ತಾ ಮುಂದು ನಾ ಮುಂದು ಎಂದು ಫೋಟೋಗಳನ್ನು ಕ್ಲಿಕ್ಕಿಸಲು ಮುಂದಾಗಿದ್ದು ಕಾರ್ಯಕ್ರಮದ ವಾತಾವರಣವೂ ಹಾಳಾಗಿ ಹೋಯಿತು. ಅವರಿಬ್ಬರ ಫೋಟೋಗಳು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೇಗವಾಗಿ ವೈರಲ್ ಆಗಿವೆ. ಈ ಘಟನೆಯ ನಂತರ, ಕಾನ್ಯೆ ಮತ್ತು ಅವರ ಪತ್ನಿಯನ್ನು ಪ್ರಶಸ್ತಿ ಪ್ರದಾನ ಸಮಾರಂಭದಿಂದ ಹೊರಹಾಕಲಾಯಿತು.

Leave a Comment

Leave a Reply

Your email address will not be published. Required fields are marked *