ಕ್ಲಾಸ್‌ ರೂಂನಲ್ಲೇ ವಿದ್ಯಾರ್ಥಿ ಜೊತೆ ಪ್ರೊಫೆಸರ್‌ ವಿವಾಹ; ವೀಡಿಯೋ ಹಿಂದಿರುವ ಅಸಲಿಯತ್ತೇನು ಗೊತ್ತಾ ?

New Project
Spread the love

ನ್ಯೂಸ್ ಆ್ಯರೋ: ಪ್ರಾಧ್ಯಾಪಕರೊಬ್ಬರು ಕಾಲೇಜು ವಿದ್ಯಾರ್ಥಿಯನ್ನು ತರಗತಿಯಲ್ಲೇ ವಿವಾಹ ಆಗುತ್ತಿರುವ ವೀಡಿಯೋ ವೈರಲ್‌ ಆಗಿದ್ದು, ತನಿಖೆಗೆ ಆದೇಶ ಹೊರಡಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿದೆ.

ಕೋಲ್ಕತ್ತಾದಿಂದ ಸುಮಾರು 150 ಕಿಮೀ ದೂರದಲ್ಲಿರುವ ನಾಡಿಯಾದಲ್ಲಿರುವ ಹರಿಂಗಟಾ ಟೆಕ್ನಾಲಜಿ ಕಾಲೇಜಿನ ಸೈಕಾಲಜಿ ವಿಭಾಗದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೌಲಾನಾ ಅಬುಲ್ ಕಲಾಂ ಆಜಾದ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (MAKAUT) ಅಡಿಯಲ್ಲಿ ಕಾಲೇಜು ಕಾರ್ಯನಿರ್ವಹಿಸುತ್ತದೆ.

ಪ್ರೊಫೆಸರ್‌ ಪಾಯಲ್ ಬ್ಯಾನರ್ಜಿ ವಧುವಿನ ಉಡುಗೆ ತೊಟ್ಟು ಹೂಮಾಲೆ ಧರಿಸಿರುವುದು ವೀಡಿಯೋದಲ್ಲಿದೆ. ಆದರೆ, ಇದು ನಿಜವಾದ ಮದುವೆಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಶೈಕ್ಷಣಿಕ ಉದ್ದೇಶಕ್ಕಾಗಿ ಈ ರೀತಿಯ ಮಾದರಿ ತೋರಿಸಲಾಗಿದೆ ಎಂದು ಹೇಳಿದ್ದಾರೆ.

ಆಕೆಯನ್ನು ತನಿಖೆಗಾಗಿ ರಜೆಯ ಮೇಲೆ ಕಳುಹಿಸಲಾಗಿದೆ. ಇದಕ್ಕಾಗಿ ಅಧಿಕಾರಿಗಳು ಮೂರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ. ಸೂಕ್ತ ತನಿಖೆ ಇಲ್ಲದೆ ನಾವು ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ, ಹಿಂದೂ ವಿವಾಹ ಪದ್ಧತಿಯಂತೆ ವಿದ್ಯಾರ್ಥಿಯ ಮೇಲೆ ‘ಹಲ್ದಿ’ ಬಳಿದಿರುವುದನ್ನು ತೋರಿಸಲಾಗಿದೆ. ಇನ್ನೊಂದರಲ್ಲಿ, ಇಬ್ಬರು ಹೂಮಾಲೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಪವಿತ್ರ ಅಗ್ನಿಯನ್ನು ಸೂಚಿಸುವ ಮೇಣದಬತ್ತಿಯ ಸುತ್ತಲೂ ಏಳು ಹೆಜ್ಜೆ ಹಾಕುತ್ತಿದ್ದಾರೆ.

ಒಬ್ಬರನ್ನೊಬ್ಬರು ತಮ್ಮ ಸಂಗಾತಿಯಾಗಿ ಸ್ವೀಕರಿಸುವ ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿಯ ಸಹಿಯೊಂದಿಗೆ ವಿಶ್ವವಿದ್ಯಾಲಯದ ಲೆಟರ್‌ಹೆಡ್ ಕೂಡ ವೈರಲ್ ಆಗಿದೆ. ಪತ್ರ ಮೂರು ಸಾಕ್ಷಿಗಳ ಸಹಿಯನ್ನು ಹೊಂದಿದೆ.

Leave a Comment

Leave a Reply

Your email address will not be published. Required fields are marked *