ಅಮೆರಿಕ 47ನೇ ಅಧ್ಯಕ್ಷರ ಅಧಿಕೃತ ದರ್ಬಾರ್ ಆರಂಭ; ತುರ್ತು ಪರಿಸ್ಥಿತಿ ಘೋಷಣೆ

Trump 1
Spread the love

ನ್ಯೂಸ್ ಆ್ಯರೋ: ವಿಶ್ವದ ದೊಡ್ಡಣ್ಣ ಅಂತಾ ಕರೆಸಿಕೊಳ್ಳೋ ಅಮೆರಿಕಾಕ್ಕೆ ನಿನ್ನೆ ಮಹತ್ವದ ದಿನ. ಅಮೆರಿಕಾದ ಆಡಳಿತ ಚುಕ್ಕಾಣಿಯನ್ನ ಹಿಡಿಯೋಕೆ ಡೊನಾಲ್ಡ್‌ ಟ್ರಂಪ್ ಮತ್ತು ಜೋ ಬೈಡೆನ್ ಮಧ್ಯೆ ಭಾರೀ ಪೈಪೋಟಿ ನಡೆದಿತ್ತು. ಕೊನೆಗೆ ಡೊನಾಲ್ಡ್‌ ಟ್ರಂಪ್ ಮೇಲುಗೈ ಸಾಧಿಸಿ ಅಧ್ಯಕ್ಷ ಗಾದಿಯನ್ನ ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದರು. ಇದೀಗ ಅಮೆರಿಕಾ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್​ಗೆ ಪಟ್ಟಾಭಿಶೇಕ ನಡೆದಿದೆ. ಈ ಮೂಲಕ ಜೋ ಬೈಡೆನ್ ಆಡಳಿತಕ್ಕೆ ಕೊನೆ ಬಿದ್ದಿದೆ.

ಭಾರೀ ಕುತೂಹಲ ಮೂಡಿಸಿದ್ದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್ ಎರಡನೇ ಬಾರಿಗೆ ಗೆದ್ದು ಬೀಗಿದ್ರು. ಮತ್ತೊಮ್ಮೆ ವಿಶ್ವದ ದೊಡ್ಡಕ್ಕನಾಗುವ ಕಮಲಾ ಹ್ಯಾರಿಸ್ ಕನಸು ಕಮರಿ ಹೋಗಿದೆ. ಇದೀಗ ಅಮೆರಿಕಾದ ನೂತನ ಅಧ್ಯಕ್ಷರಾಗಿ 78 ವರ್ಷದ ಡೊನಾಲ್ಡ್‌ ಟ್ರಂಪ್‌ ಪ್ರಮಾಣವಚನ ಸ್ವೀಕರಿಸೋ ಮೂಲಕ ಅಮೆರಿಕಾದ ಆಡಳಿತದ ಚುಕ್ಕಾಣಿಯನ್ನ ಹಿಡಿದಿದ್ದಾರೆ.

ಅಮೆರಿಕದ 47 ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್ ಮತ್ತು 50 ನೇ ಉಪಾಧ್ಯಕ್ಷರಾಗಿ ಜೆಡಿ ವ್ಯಾನ್ಸ್ ಅಧಿಕಾರ ವಹಿಸಿಕೊಂಡಿದ್ದಾರೆ. ವಾಷಿಂಗ್ ಟನ್ ಡಿಸಿಯ ಕ್ಯಾಪಿಟಲ್ ಹಿಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಜಾನ್ ರಾಬರ್ಟ್ಸ್ ಅವರು ಪ್ರಮಾಣ ವಚನ ಬೋಧಿಸಿದ್ರು. ಟ್ರಂಪ್​ಗೂ ಮುನ್ನ ಉಪಾಧ್ಯಕ್ಷರಾಗಿ ಜೆಡಿ ವ್ಯಾನ್ಸ್ ಪ್ರಮಾಣ ವಚನ ಸ್ವೀಕರಿಸಿದ್ರು. ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಜೋ ಬೈಡನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಭಾರತದ ಉದ್ಯಮಿ ಮುಖೇಶ್ ಅಂಬಾನಿ, ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಅಮೇರಿಕಾದ ಉದ್ಯಮಿಗಳು ಟ್ರಂಪ್ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಟ್ರಂಪ್ ಪ್ರಮಾಣವಚನ ಸಮಾರಂಭ ನಡೆದಿದ್ದು, ಇದರಲ್ಲಿ ಪಾಲ್ಗೊಳ್ಳಲು ನಿನ್ನೆ ಮುಂಜಾನೆಯಿಂದಲೇ ಜನರು ಕಿಕ್ಕಿರಿದು ಸೇರಿದ್ದರು. ಅಮೆರಿಕದ ಶ್ವೇತಭವನಕ್ಕೆ ಭಾರೀ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಡೀ ಕಟ್ಟಡವನ್ನು ಸುತ್ತುವರಿದ್ದ ಭದ್ರತಾ ಸಿಬ್ಬಂದಿ, ಕಟ್ಟುನಿಟ್ಟಿನ ಎಚ್ಚರಿಕಾ ಕ್ರಮಗಳ ಮಧ್ಯೆ ಪದಗ್ರಹಣ ಕಾರ್ಯಕ್ರಮ ನಡೀತು. ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡಿದ ಡೊನಾಲ್ಡ್ ಟ್ರಂಪ್, ಮೆಕ್ಸಿಕೋ ಗಡಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಎಲ್ಲಾ ಅಕ್ರಮ ಪ್ರವೇಶವನ್ನು ತಕ್ಷಣವೇ ನಿಲ್ಲಿಸಲಾಗುವುದು.. ಲಕ್ಷಾಂತರ ಮತ್ತು ಲಕ್ಷಾಂತರ ಕ್ರಿಮಿನಲ್ ವಿದೇಶಿಯರನ್ನು ಅವರು ಬಂದ ಸ್ಥಳಗಳಿಗೆ ಹಿಂದಿರುಗಿಸುವ ಪ್ರಕ್ರಿಯೆಯನ್ನು ನಾವು ಪ್ರಾರಂಭಿಸುತ್ತೇವೆ.. ನಾವು ನನ್ನ ರಿಮೇನ್ ಇನ್ ಅನ್ನು ಮೆಕ್ಸಿಕೋದಲ್ಲಿ ಮರುಸ್ಥಾಪಿಸುತ್ತೇವೆ ಎಂದು ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅಧಿಕಾರ ಹಿಡಿದಿದ್ದು ಕೆಲ ದೇಶಗಳಿಗೆ ಬಂಪರ್​ ಆಫರ್​ ಸಿಗುವ ಹೆಚ್ಚಿಸಿದೆ.. ಇನ್ನೂ ಕೆಲವು ದೇಶಗಳಿಗೆ ಬೆವರು ಹುಟ್ಟಿಸಿದೆ.

Leave a Comment

Leave a Reply

Your email address will not be published. Required fields are marked *