ದರ್ಶನ್​ಗೆ ಮತ್ತೊಂದು ಶಾಕ್​ ಕೊಟ್ಟ ಪೊಲೀಸರು; ಆರೋಪಿ ಸ್ಥಾನದಲ್ಲಿರುವ ದಾಸನಿಗೆ ಖಾಕಿಯಿಂದ ಸೂಚನೆ

darshans
Spread the love

ನ್ಯೂಸ್ ಆ್ಯರೋ: ರೇಣುಕಾ ಸ್ವಾಮಿ ಕೇಸ್​ನಲ್ಲಿ ಅರೆಸ್ಟ್ ಆಗಿ ಜಾಮೀನಿನ ಮೇಲೆ ಆಚೆ ಇರುವ ನಟ ದರ್ಶನ್​ಗೆ ಬೆಂಗಳೂರು ಪೊಲೀಸರು ಮತ್ತೊಂದು ಶಾಕ್ ಕೊಟ್ಟಿದ್ದಾರೆ. ದರ್ಶನ್​ನ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಟ್ಟಿದ್ದಾರೆ ಪೊಲೀಸರು. ಕೇಸ್ ಮುಗಿಯುವವರೆಗೂ ಲೆಸೆನ್ಸ್ ಬಳಸವುಂತಿಲ್ಲ ಎಂದು ಸ್ಟ್ರಿಕ್ಟ್ ವಾರ್ನಿಂಗ್ ನೀಡಿದ್ದಾರೆ. ದರ್ಶನ್ ಕೊಟ್ಟ ಕಾರಣ ಪರಿಗಣಿಸಿಯೂ ಗನ್ ಅಮಾನತ್ತಿನಲ್ಲಿಡಲಾಗಿದೆ.

ಇದು ಮಾತ್ರವಲ್ಲ ಕೂಡಲೇ ಎರಡು ಗನ್ ಆರ್​ ಆರ್​ ನಗರ ಪೊಲೀಸರಿಗೆ ಹಸ್ತಾಂತರ ಮಾಡಬೇಕು ಎಂದು ದರ್ಶನ್​ಗೆ ಸೂಚನೆ ನೀಡಲಾಗಿದೆ. ದರ್ಶನ್ ರೇಣುಕಾಸ್ವಾಮಿ ಕೇಸ್​ನಲ್ಲಿ ಆರೋಪಿಯಾಗಿದ್ದರಿಂದ ಗನ್ ಲೈಸೆನ್ಸ್ ಕ್ಯಾನ್ಸಲ್​್ಗೆ ಪೊಲೀಸರು ಪತ್ರ ಬರೆದಿದ್ದರು. ಈ ಹಿಂದೆ ಪೊಲೀಸ್​ ನೋಟಿಸ್​ಗೆ ದರ್ಶನ್ ಉತ್ತರವನ್ನು ಕೂಡ ನೀಡಿದ್ದರು.

“ನನಗೆ ಗನ್ ಬೇಕೇ ಬೇಕು. ನಾನೊಬ್ಬ ಸೆಲೆಬ್ರೆಟಿ, ನಾನು ಹೋದ ಕಡೆ ಬಂದ ಕಡೆ ಸಾಕಷ್ಟು ಜನ ಸೇರುತ್ತಾರೆ. ಈ ವೇಳೆ ನನ್ನ ಆತ್ಮರಕ್ಷಣೆಗೆ ಗನ್ ಬೇಕು” ಎಂದಿದ್ದರು. ಈ ಬಗ್ಗೆ ಪರಶೀಲನೆ ನಡೆಸಿದ ಪೊಲೀಸರು ಪ್ರಮುಖ ಕೇಸ್​​ನಲ್ಲಿ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಗನ್​​ ಲೈಸೆನ್ಸ್​​ನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಡಲು ನಿರ್ಧಾರ ಮಾಡಿದ್ದಾರೆ.

ಕೊಲೆ ಕೇಸ್ ಮುಗಿದು ಆರೋಪ‌ ಮುಕ್ತವಾಗವವರೆಗೂ ಗನ್ ಬಳಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆರೋಪಿ ಸ್ಥಾನದಲ್ಲಿರುವ ನಟ ದರ್ಶನ್ ಸಾಕ್ಷಿಗಳಿಗೆ ಬೆದರಿಕೆಯೊಡ್ಡುವ ಸಾಧ್ಯತೆ ಇರುವ ಕಾರಣ ಗನ್ ವಾಪಸ್ ಪಡೆದು ಸ್ಟೇಷನ್​ನಲ್ಲಿ ಇಟ್ಟುಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *