ಒಬಾಮಾ ದಂಪತಿ ವಿಚ್ಛೇದನ ಪಡೆಯುತ್ತಾರಾ?; ಸುಳಿವು ನೀಡಿದ ಮಿಚೆಲ್‌ ?!

Michelle, Barack
Spread the love

ನ್ಯೂಸ್ ಆ್ಯರೋ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಪತ್ನಿ ಮಿಚೆಲ್‌ ಒಬಾಮಾ ವಿಚ್ಛೇದನ ಪಡೆದುಕೊಳ್ಳುವತ್ತ ಸಾಗಿದ್ದಾರೆ. ಹೀಗೊಂದು ವದಂತಿ ಹರಿದಾಡುತ್ತಿದೆ.

ಮುಂದಿನ ಸೋಮವಾರ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಗೈರು ಹಾಜರಾಗುವ ಬಗ್ಗೆ ಮಿಚೆಲ್‌ ಖಚಿತ ಪಡಿಸಿರುವುದು ದಂಪತಿ ಬೇರ್ಪಡುವಿಕೆಯ ಊಹಾಪೋಹಾಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಪತಿ ಒಬಾಮಾ ಭಾಗಿಯಾಗುವ ಅಧಿಕೃತ ಕಾರ್ಯಕ್ರಮದಿಂದ ಮಿಚೆಲ್‌ ಅಂತರ ಕಾಯ್ದುಕೊಳ್ಳುತ್ತಿರುವುದು ತಿಂಗಳಲ್ಲಿ ಇದು ಎರಡನೇ ಬಾರಿಯಾಗಿದೆ.

ಇದಕ್ಕೂ ಮುನ್ನ ಈ ತಿಂಗಳು ನಡೆದ ಅಮೆರಿಕದ ಮಾಜಿ ಅಧ್ಯಕ್ಷ ಜಮ್ಮಿ ಕಾರ್ಟರ್ ಅವರ ಅಂತ್ಯಕ್ರಿಯೆಯಲ್ಲೂ ಬರಾಕ್ ಒಬಾಮಾ ಏಕಾಂಗಿಯಾಗಿ ಕಾಣಿಸಿಕೊಂಡಿದ್ದರು. ಜಿಮ್ಮಿ ಕಾರ್ಟರ್ ಅಂತ್ಯ ಸಂಸ್ಕಾರಕ್ಕೂ ಮಿಚೆಲ್‌ ಗೈರಾಗಿದ್ದರು. ಇದಕ್ಕೂ ಮೊದಲು ಕೂಡಾ ದಂಪತಿ ವಿವಿಧ ವಿಷಯಗಳಲ್ಲಿ ತಮ್ಮಿಬ್ಬರ ನಡುವಣ ಭಿನ್ನಾಭಿಪ್ರಾಯದ ಕುರಿತು ಸುಳಿವು ನೀಡಿದ್ದರು.

ಬರಾಕ್ ಒಬಾಮಾ ಶ್ವೇತ ಭವನದ ಮೊದಲ ಕಪ್ಪು ವರ್ಣದ ಅಧ್ಯಕ್ಷರಾಗಿದ್ದರು. 1989ರಲ್ಲಿ ಕಾನೂನಿನ ಸಂಸ್ಥೆಯೊಂದರಲ್ಲಿ ಬರಾಕ್ ಒಬಾಮಾ ಮತ್ತು ಮಿಚೆಲ್‌ ಭೇಟಿಯಾಗಿದ್ದರು. ಪರಿಚಯ ಸ್ನೇಹವಾಗಿ ಬದಲಾಗಿತ್ತು. ಸ್ನೇಹ ಪ್ರೀತಿಯಾಗಿ ಬದಲಾಗಲು ಹೆಚ್ಚು ಸಮಯ ಬೇಕಿರಲಿಲ್ಲ.

ಪರಸ್ಪರ ಪ್ರೀತಿಸಿದ ಬರಾಕ್ ಒಬಾಮಾ ಮತ್ತು ಮಿಚೆಲ್ 1992ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ದಂಪತಿಗೆ ಮಲೀಹಾ ಮತ್ತು ಸಶಾ ಎಂಬ ಎರಡು ಹೆಣ್ಣು ಮಕ್ಕಳಿದ್ದಾರೆ. ಆದ್ರೆ ಕಳೆದ ಕೆಲವು ದಿನಗಳಿಂದ ಇಬ್ಬರ ವಿಚ್ಚೇದನ ಕುರಿತ ವದಂತಿಗಳು ಹರಿದಾಡುತ್ತಿವೆ.

ಬರಾಕ್ ಒಬಾಮ ಮತ್ತು ಪತ್ನಿ ಮಿಚೆಲ್ ಇಬ್ಬರೂ ಈ ಸಂಬಂಧ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ವದಂತಿಗಳ ಬಗ್ಗೆಯೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

Leave a Comment

Leave a Reply

Your email address will not be published. Required fields are marked *