ಬಿಗ್ಬಾಸ್ನಲ್ಲಿ ಮಿಡ್ ವೀಕ್ ಎಲಿಮಿನೇಷನ್; ಮಧ್ಯರಾತ್ರಿ ದೊಡ್ಮನೆಯಿಂದ ಹೊರ ಬಂದವರು ಇವರೇ ?!
ನ್ಯೂಸ್ ಆ್ಯರೋ: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11 ಇನ್ನೇನೂ ಎರಡು ವಾರದಲ್ಲಿ ಮುಕ್ತಾಯಗೊಳ್ಳಲಿದೆ. ಇದೇ ಹೊತ್ತಲ್ಲಿ ಬಿಗ್‌ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದರು.
ಹೀಗಾಗಿ 7 ಸ್ಪರ್ಧಿಗಳು ನಾಮಿನೇಷನ್ನಿಂದ ಪಾರಾಗಲು ಬಿಗ್‌ಬಾಸ್ ಕಾಲ ಕಾಲಕ್ಕೆ ಟಾಸ್ಕ್ ನೀಡಿದ್ದರು. ಬಿಗ್‌ಬಾಸ್ ಕೊಟ್ಟ ಕೊನೆಯ ಟಾಸ್ಕ್ನಲ್ಲಿ ಧನರಾಜ್ ಗೆದ್ದು ಬೀಗಿದ್ದಾರೆ. ಜೊತೆಗೆ ಈ ವಾರದ ನಾಮಿನೇಷನ್ನಿಂದ ಪಾರಾಗಿದ್ದಾರೆ.
ಇನ್ನೂ, ಈ ವಾರ ಬಿಗ್‌ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಪ್ರಸ್ತುತವಾಗಿ ಬಿಗ್‌ಬಾಸ್ ಮನೆಯಲ್ಲಿ ಒಟ್ಟು 8 ಸ್ಪರ್ಧಿಗಳು ಉಳಿದು ಕೊಂಡಿದ್ದು, ಈ ಪೈಕಿ ಒಬ್ಬರು ಮಿಡ್ ವೀಕ್ ಎಲಿಮಿನೇಟ್ ಆಗಲಿದ್ದಾರೆ. ಈಗ ರಿಲೀಸ್ ಆಗಿರೋ ಹೊಸ ಪ್ರೋಮೋದಲ್ಲಿ ಮಧ್ಯರಾತ್ರಿ ಬಿಗ್‌ಬಾಸ್ ಸ್ಪರ್ಧಿಗಳು ಬೆಚ್ಚಿ ಬಿದ್ದಿದ್ದಾರೆ.
ಮಧ್ಯರಾತ್ರಿ ನಡುವಾರದ ಎಲಿಮಿನೇಟ್ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಒಬ್ಬರಿಗೆ ಮುಖ್ಯದ್ವಾರದ ಬಾಗಿಲು ತೆರೆಯಲಾಗಿದೆ. ಗೌತಮಿ, ಮಂಜು, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ ಹಾಗೂ ರಜತ್ ಈ 6 ಮಂದಿ ತಮ್ಮ ಗಂಟು ಮೂಟೆ ಕಟ್ಟಿಕೊಂಡು ರೆಡಿಯಾಗಿದ್ದಾರೆ. ಈ ವಾರ ಮಧ್ಯ ರಾತ್ರಿ ಮನೆಯಿಂದ ಹೊರಗೆ ಹೋದವರು ಗೌತಮಿ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಆದರೆ ಈ ಸುದ್ದಿಗೆ ಇಂದು ರಾತ್ರಿ ಸ್ಪಷ್ಟ ಉತ್ತರ ಸಿಗಲಿದೆ.
Leave a Comment