VIDEO : ಗಗನಸಖಿಯ ಮೈಮುಟ್ಟಿ ಅನುಚಿತ ವರ್ತನೆ – ತಪ್ಪೊಪ್ಪಿಗೆ ಬರೆಸಿ ಪ್ರಯಾಣಿಕನನ್ನು ಕೆಳಗಿಳಿಸಿದ ಸ್ಪೈಸ್ ಜೆಟ್..!!

VIDEO : ಗಗನಸಖಿಯ ಮೈಮುಟ್ಟಿ ಅನುಚಿತ ವರ್ತನೆ – ತಪ್ಪೊಪ್ಪಿಗೆ ಬರೆಸಿ ಪ್ರಯಾಣಿಕನನ್ನು ಕೆಳಗಿಳಿಸಿದ ಸ್ಪೈಸ್ ಜೆಟ್..!!

ನ್ಯೂಸ್ ಆ್ಯರೋ: ಸ್ಪೈಸ್ ಜೆಟ್‌ ವಿಮಾನದ ಮಹಿಳಾ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿದ ಪ್ರಯಾಣಿಕನ್ನು ಕೆಳಗಿಳಿಸಿದ ಘಟನೆ ಸೋಮವಾರ ನಡೆದಿದೆ. ಇದೀಗ ಪ್ರಯಾಣಿಕ ಅನುಚಿತವಾಗಿ ವರ್ತಿಸಿರುವ ವಿಡಿಯೋ ತುಣಕನ್ನು ಬಿಡುಗಡೆ ಮಾಡಲಾಗಿದೆ.

ಈ ಸಂಬಂಧ ಸ್ಪೈಸ್‌ಜೆಟ್‌ ಹೇಳಿಕೆ ನೀಡಿ, ‘ಜನವರಿ 23, 2023ರಂದು ದೆಹಲಿ-ಹೈದರಾಬಾದ್ ಸ್ಪೈಸ್​ಜೆಟ್ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದ ಬೋರ್ಡಿಂಗ್ ವೇಳೆ ಒಬ್ಬ ಪ್ರಯಾಣಿಕ ಮಹಿಳಾ ಸಿಬ್ಬಂದಿಯ ಮೈಮುಟ್ಟಿ ಅನುಚಿತವಾಗಿ ವರ್ತಿಸಿ, ಹಿಂಸೆ ನೀಡಿದ್ದಾನೆ. ತಕ್ಷಣ ಮಹಿಳಾ ಸಿಬ್ಬಂದಿ ಈ ಕುರಿತು ಭದ್ರತಾ ದಳ ಹಾಗೂ ಇತರ ಸಿಬ್ಬಂದಿಗೆ ಮಾಹಿತಿ ನೀಡಿದರು. ನಂತರ ಆರೋಪಿ ಪ್ರಯಾಣಿಕ ಹಾಗೂ ಸಹಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ, ಭದ್ರತಾ ಸಿಬ್ಬಂದಿಯ ವಶಕ್ಕೆ ಒಪ್ಪಿಸಲಾಯಿತು’ ಎಂದಿದ್ದಾರೆ.

ಈ ಸಂಬಂದ ಪ್ರತಿಕ್ರಿಯಿಸಿದ ಆರೋಪಿ ಪ್ರಯಾಣಿಕ, ನಾನು ಬೇಕು ಅಂತ ಆ ರೀತಿ ನಡೆದುಕೊಂಡಿಲ್ಲ. ಅಚಾನಕ್​ ಆಗಿ ನನ್ನ ಕೈ ಅವರನ್ನು ಮುಟ್ಟಿತು. ವಿಮಾನದಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ಹೀಗಾಯಿತೇ ವಿನಃ ಇದು ಉದ್ದೇಶಪೂರ್ವಕ ಕೃತ್ಯ ಅಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಘಟನೆ ಬಳಿಕ ಪ್ರಯಾಣಿಕ ಬಳಿ ತಪ್ಪೊಪ್ಪಿಗೆ ಪತ್ರ ಬರೆದು ಕ್ಷಮೆಯಾಚಿಸಲಾಯಿತು. ಮುಂದೆ ಪ್ರಯಾಣದಲ್ಲಿಯೂ ಈತ ತೊಂದರೆಯನ್ನು ಮಾಡಬಹುದೆಂದು ಅಂದಾಜಿಸಿದ ಸ್ಪೈಸ್​ಜೆಟ್​ ವ್ಯವಸ್ಥಾಪಕರು ಆರೋಪಿ ಪ್ರಯಾಣಿಕನನ್ನು ಕೆಳಗಿಳಿಸಲು ನಿರ್ಧರಿಸಿದರು.

ಏರ್​ ಇಂಡಿಯಾದಲ್ಲಿ ಪ್ರಯಾಣಿಕರು ಅನುಚಿತವಾಗಿ ವರ್ತಿಸಿದ ಘಟನೆಗಳು ಒಂದಾದ ಮೇಲೊಂದರಂತೆ ವರದಿಯಾಗಿದೆ. ಇದೀಗ ನಾಗರಿಕ ವಿಮಾನಯಾನದ ಮಹಾನಿರ್ದೇಶಕರು ಏರ್ ​ಇಂಡಿಯಾದ ವ್ಯವಸ್ಥಾಪಕರಿಗೆ ಕಟುವಾಗಿ ನೊಟೀಸ್ ಜಾರಿ ಮಾಡಿದ್ದಾರೆ.

ಈ ಹಿಂದೆ ಏರ್​ ಇಂಡಿಯಾದ ಓರ್ವ ಪ್ರಯಾಣಿಕ ಶೌಚಾಲಯದಲ್ಲಿ ಸಿಗರೇಟ್ ಸೇದುತ್ತಿದ್ದಕ್ಕೆ ಪ್ರಶ್ನಿಸಿದ್ದಕ್ಕೆ ಯಾವುದೇ ಬೆಲೆಯನ್ನು ಕೊಟ್ಟಿರಲಿಲ್ಲ. ಅದಲ್ಲದೆ ಮತ್ತೋರ್ವ ಪ್ರಯಾಣಿಕ ಮಹಿಳಾ ಸಹಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಈ ಎರಡೂ ಪ್ರಕರಣಗಳನ್ನು ಡಿಜಿಸಿಎ ಗಂಭೀರವಾಗಿ ಪರಿಗಣಿಸಿತ್ತು.

Related post

ದಿನ‌ ಭವಿಷ್ಯ 10-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 10-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಾಧ್ಯವಾದರೆ ದೀರ್ಘ ಪ್ರಯಾಣವನ್ನು ತಪ್ಪಿಸಿ. ಏಕೆಂದರೆ ನೀವು ಪ್ರಯಾಣಿಸು ತುಂಬಾ ದುರ್ಬಲರಾಗಿದ್ದೀರಿ ಹಾಗೂ ಇದು ಮತ್ತಷ್ಟು ನಿಮ್ಮನ್ನು ದುರ್ಬಲಗೊಳಿಸುತ್ತದೆ. ಇಂದು ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವವರು ತಮ್ಮ…
7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್. ಡಿ. ರೇವಣ್ಣ; ಮೇ 14 ರವರೆಗೆ ನ್ಯಾಯಾಂಗ ಬಂಧನ

7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್.…

ನ್ಯೂಸ್ ಆ್ಯರೋ : ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ (Hassan Pen Drive) ಹಾಗೂ ಸಂತ್ರಸ್ತೆಯನ್ನು…
TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

ನ್ಯೂಸ್ ಆ್ಯರೋ : ಮನಸ್ಸಿಗೆ ಕಿರಿಕಿರಿ ನೀಡುವ ಮತ್ತು ತಮ್ಮ ಕೆಲಸದ ವೇಳೆಯಲ್ಲಿ ಅಡಚಣೆ ಉಂಟು ಮಾಡುವ ಸ್ಪ್ಯಾಮ್ ಕರೆಗಳನ್ನು (Spam call) ತಡೆಯುವುದು ಇಂದು ದೊಡ್ಡ ಸಾಹಸ…

Leave a Reply

Your email address will not be published. Required fields are marked *