ರಿಂಗ್ ವಾಚ್ ಪರಿಚಯಿಸಿದ ಕ್ಯಾಸಿಯೊ; ಏನಿದರ ವೈಶಿಷ್ಟ್ಯತೆ, ಬೆಲೆ ಗೊತ್ತಾ ?
ನ್ಯೂಸ್ ಆ್ಯರೋ: ಬಹುತೇಕ ಎಲ್ಲರ ಕೈಯಲ್ಲೂ ಸ್ಮಾರ್ಟ್ವಾಚ್ಗಳು ಸಾಮಾನ್ಯವಾಗಿಬಿಟ್ಟಿವೆ. ಈಗ ಅದಕ್ಕಿಂತ ಚಿಕ್ಕದಾದ ಸ್ಕ್ರೀನ್ ಅನ್ನು ಕಂಪನಿಯೊಂದು ಪ್ರಸ್ತುತಪಡಿಸಿದೆ. ನೀವೀಗ ಬೆರಳುಗಳಿಗೆ ತೊಡುವ ರಿಂಗ್‌ನಲ್ಲಿಯೂ ಸ್ಮಾರ್ಟ್ವಾಚ್ ಸೌಲಭ್ಯ ಪಡೆಯಬಹುದು. ಕ್ಯಾಸಿಯೊ ಕಂಪನಿ ಇತ್ತೀಚೆಗೆ ಏಳು-ವಿಭಾಗದ LCD ಸ್ಕ್ರೀನ್ನೊಂದಿಗೆ ಹೊಸ ರಿಂಗ್ ವಾಚ್ ರಿಲೀಸ್ ಮಾಡಿದೆ.
ಡಿಜಿಟಲ್ ವಾಚ್ಗಳಿಗೆ ಹೆಸರುವಾಸಿಯಾದ ಕ್ಯಾಸಿಯೊ, ತನ್ನ ಮೊದಲ ರಿಂಗ್ ವಾಚ್ ಅನ್ನು ಮಾರುಕಟ್ಟೆಗೆ ಬಿಟ್ಟಿದೆ. ಗಾತ್ರದಲ್ಲಿ ಒಂದು ಇಂಚಿಗಿಂತ ಕಡಿಮೆಯಿದ್ದರೂ ಹೊಸ ರಿಂಗ್ ವಾಚ್ಗಳು ಸೆವೆನ್-ಸೆಗ್ಮೆಂಟ್ ಡಿಸ್ಪ್ಲೇ ಹೊಂದಿವೆ. ಇದರಲ್ಲಿ ಗಂಟೆ, ನಿಮಿಷ ಮತ್ತು ಸೆಕೆಂಡ್ಗಳು ಕಾಣುತ್ತವೆ. ಇದು ಮೂರು ಬೌತಿಕ ಬಟ್ಗಳನ್ನು ಹೊಂದಿವೆ. ಇದರ ಸಹಾಯದಿಂದ ನೀವು ನಿಮ್ಮ ಸಮಯವನ್ನು ಅಡ್ಜೆಸ್ಟ್ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ಸ್ಟಾಪ್ವಾಚ್ ಫೀಚರ್ ಕೂಡ ಇದರಲ್ಲಿದೆ.
ರಿಂಗ್ ವಾಚ್ ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಿದ ಬೆಜೆಲ್‌ಗಳೊಂದಿಗೆ ಟಿನ್ನಿ ಕೇಸ್ ಸಹ ಹೊಂದಿದೆ. ಸ್ಕ್ರೀನ್ ಲೈಟ್ ಮೂಲ ಇದರಲ್ಲಿದೆ. ಇದು ಕತ್ತಲಲ್ಲಿ ಟೈಂ ನೋಡುವುದಕ್ಕೆ ಅನುಕೂಲ. ಮುಖ್ಯವಾಗಿ ಈ ರಿಂಗ್ ವಾಚ್ಗೆ ಸ್ಪೀಕರ್ ಇಲ್ಲ. ಆದ್ರೆ ಅಲಾರಾಂ ಆನ್ ಆದಾಗ ಸ್ಕ್ರೀನ್ ಫ್ಲ್ಯಾಷ್ ಮಾಡುತ್ತದೆ.
ಕ್ಯಾಸಿಯೊ ರಿಂಗ್ ವಾಚ್ ಗ್ಯಾಲಕ್ಸಿ ರಿಂಗ್‌ನಂತಹ ಸ್ಮಾರ್ಟ್‌ವಾಚ್‌ಗಳಿಗೆ ಉತ್ತಮ ಪರ್ಯಾಯವಾಗಿ ಕಾಣಿಸಬಹುದು. ಆದರೆ ಸ್ಲೀಪ್ ಟ್ರ್ಯಾಕಿಂಗ್, ಹಾರ್ಟ್ ರೇಟ್ ಅಥವಾ ಬ್ಲಡ್ ಆಕ್ಸಿಜನ್ ಲೆವೆಲ್ ಮಾನಿಟರಿಂಗ್‌ನಂತಹ ಯಾವುದೇ ಫಿಟ್‌ನೆಸ್ ಟ್ರ್ಯಾಕಿಂಗ್ ವೈಶಿಷ್ಟ್ಯಗಳು ಇದರಲ್ಲಿಲ್ಲ.
ಮಷಿನ್-ಟ್ರಾನ್ಸ್ಲೇಟೆಡ್ ವರ್ಶನ್ ವೆಬ್‌ಸೈಟ್ ಪ್ರಕಾರ, ಕ್ಯಾಸಿಯೊ ವಾಚ್‌ನ ಸಂಕೀರ್ಣವಾದ ಮಾಡೆಲಿಂಗ್ ಅನ್ನು ಉಂಗುರದ ಗಾತ್ರದ ಪೂರ್ಣ ಲೋಹದ ವಿನ್ಯಾಸದೊಂದಿಗೆ ವಿವರವಾಗಿ ಪುನರುತ್ಪಾದಿಸಲಾಗಿದೆ. ದೈನಂದಿನ ಬಳಕೆಗೆ ಈ ರಿಂಗ್ ವಾಚ್ಗೆ ವಾಟರ್ಪ್ರೂಫ್ ಟಚ್ ಕೊಡಲಾಗಿದೆ. ಇದು ಬ್ಯಾಟರಿ ಹೊಂದಿದ್ದು, ಬದಲಾಯಿಸಬಹುದಾಗಿದೆ. ಸುಲಭವಾಗಿ 2 ವರ್ಷಗಳವರೆಗೆ ಬಾಳಿಕೆ ಬರುತ್ತದೆ ಎಂದು ಕ್ಯಾಸಿಯೊ ಹೇಳಿದೆ. ರಿಂಗ್ ಗಾತ್ರವು 20mm ಇದೆ. ಆದರೆ ಪ್ಯಾಕೇಜ್ 19mm ಮತ್ತು 18mm ಒಳ ವ್ಯಾಸದ ಗಾತ್ರ ಹೊಂದಾಣಿಕೆಗಳಿಗಾಗಿ ಸ್ಪೇಸರ್‌ಗಳನ್ನು ಒಳಗೊಂಡಿದೆ ಎಂದು ವೆಬ್‌ಸೈಟ್ ತಿಳಿಸಿದೆ.
ಕ್ಯಾಸಿಯೊ 50ನೇ ವಾರ್ಷಿಕೋತ್ಸವವನ್ನು ಆಚರಿಸಲು ಹೊಸ ರಿಂಗ್ ವಾಚ್ ಸಿದ್ಧಪಡಿಸಿದೆ. ಡಿಸೆಂಬರ್‌ನಲ್ಲಿ ಜಪಾನ್‌ನಲ್ಲಿ 19,800 ಯೆನ್‌ಗೆ ಲಭ್ಯವಿರಲಿದೆ. ಭಾರತೀಯ ರೂಪಾಯಿಗಳಲ್ಲಿ ಇದರ ಬೆಲೆ ಸುಮಾರು 10,810 ರೂ.ಆಗುತ್ತದೆ.
Leave a Comment