3ನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ; ಭಯಾನಕ ವಿಡಿಯೋ ಸೆರೆ!
ನ್ಯೂಸ್ ಆ್ಯರೋ: ಹೃದಯಾಘಾತದಿಂದ 8 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಗುಜರಾತ್ನ ಅಹಮದಾಬಾದ್ನಶಾಲೆಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು 3ನೇ ತರಗತಿ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದ್ದು, ಹೆಸರನ್ನು ಬಹಿರಂಗ ಪಡಿಸಿಲ್ಲ. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಬಾಲಕಿಗೆ ಹೃದಯಾಘಾತವಾಗುವ ದೃಶ್ಯ ಶಾಲೆಯಲ್ಲಿದ್ದ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ.
ದೃಶ್ಯದಲ್ಲಿ ಶಾಲೆಯ ಕಾರಿಡಾರ್ನಲ್ಲಿ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ನಿಂತಲ್ಲಿಯೇ ನಿಲ್ಲುತ್ತಾಳೆ. ಬಳಿಕ ಮತ್ತೆ ಮುಂದೆ ಹೋಗಿ ಪಕ್ಕದಲ್ಲಿದ್ದ ಬೆಂಚ್ನಲ್ಲಿ ಕುಳಿತುಕೊಳ್ಳುತ್ತಾಳೆ. ಸ್ವಲ್ಪ ಹೊತ್ತು ಕುಳಿತುಕೊಂಡವಳೆ ದಿಢೀರ್ ನೆಲಕ್ಕೆ ಕುಸಿಯುತ್ತಾಳೆ. ಆಗ ಅಲ್ಲೇ ನಿಂತಿದ್ದ ಶಿಕ್ಷಕಿಯರು ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಿದರು. ಆಸ್ಪತ್ರೆಯಲ್ಲಿ ವೈದ್ಯರ ತಪಾಸಣೆಯ ಬಳಿಕ ಮೃತಪಟ್ಟಿರುವುದಾಗಿ ತಿಳಿಸಿದರು.
ಶಾಲೆಯ ಪ್ರಾಂಶುಪಾಲೆ ಶರ್ಮಿಷ್ಠ ಸಿನ್ಹಾ ಪ್ರಕಾರ, ಬಾಲಕಿಗೆ ಉಸಿರಾಟದ ತೊಂದರೆ ಇತ್ತು. ಅಸ್ವಸ್ಥಳಾಗಿದ್ದ ಆಕೆ ಶಾಲೆಯ ಕಾರಿಡಾರ್ನಲ್ಲಿ ಕುಸಿದು ಬಿದ್ದಿದ್ದಾಳೆ ಎಂದು ತಿಳಿಸಿದರು.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಬಾಲಕಿ ಹೃದಯಘಾತದಿಂದ ಸಾವನ್ನಪ್ಪಿದ್ದಾಳೆ. ಬಾಲಕಿಯ ಪೋಷಕರು ಮುಂಬೈನಲ್ಲಿ ವಾಸಿಸುತ್ತಿದ್ದು, ಆಕೆ ಅಹಮದಾಬಾದ್ನಲ್ಲಿ ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದಳು ಎಂದು ತಿಳಿದು ಬಂದಿದೆ.
Leave a Comment