ಡಿವೋರ್ಸ್ ವದಂತಿಗೆ ಮೌನ ಮುರಿದ ಚಹಾಲ್; ಪೋಸ್ಟ್ ಹಾಕಿ ಟೀಂ ಇಂಡಿಯಾ ಸ್ಟಾರ್ ಹೇಳಿದ್ದೇನು?
ನ್ಯೂಸ್ ಆ್ಯರೋ: ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಚಹಾಲ್ ಮತ್ತು ಪತ್ನಿ ಧನಶ್ರೀ ಮಧ್ಯೆ ಎಲ್ಲವೂ ಸರಿ ಇಲ್ಲ. ಡಿವೋರ್ಸ್ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ ಎಂಬ ವದಂತಿ ಇದೆ. ಇಷ್ಟು ದಿನ ನಿಗೂಢ ಪೋಸ್ಟ್ ಮಾಡುತ್ತಿದ್ದ ಚಹಾಲ್ ಇದೀಗ, ವದಂತಿಗಳ ವಿರುದ್ಧ ನೇರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ. ನಿಮ್ಮ ಬೆಂಬಲ, ಪ್ರೀತಿ ಇಲ್ಲದಿದ್ದರೆ ನಾನು ಇಲ್ಲಿಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಈ ಪಯಣ ಇನ್ನೂ ಮುಗಿದಿಲ್ಲ!!! ನನ್ನ ದೇಶಕ್ಕೆ, ನನ್ನ ತಂಡಕ್ಕೆ ಮತ್ತು ನನ್ನ ಅಭಿಮಾನಿಗಳಿಗೆ ನನ್ನಿಂದ ಇನ್ನೂ ನಂಬಲಾಗದ ಅನೇಕ ಓವರ್‌ಗಳು ಉಳಿದಿವೆ!!! ನಾನೊಬ್ಬ ಆಟಗಾರ ಎಂಬ ಹೆಮ್ಮೆ ಇದೆ. ಜೊತೆಗೆ ನಾನೊಬ್ಬ ಮಗ, ಸಹೋದರ ಮತ್ತು ಸ್ನೇಹಿತ ಕೂಡ ಹೌದು.
ಇತ್ತೀಚಿನ ಘಟನೆಗಳ ಬಗ್ಗೆ, ವಿಶೇಷವಾಗಿ ನನ್ನ ವೈಯಕ್ತಿಕ ಜೀವನದ ಬಗ್ಗೆ ಜನರಲ್ಲಿರುವ ಆಸಕ್ತಿಯನ್ನು ಅರ್ಥ ಮಾಡಿಕೊಂಡಿದ್ದೇನೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಊಹಾಪೋಹಗಳನ್ನು ನೋಡಿದ್ದೇನೆ. ಅದು ನಿಜವಾಗಿರಬಹುದು, ಇಲ್ಲದಿರಬಹುದು. ಒಬ್ಬ ಮಗನಾಗಿ, ಸಹೋದರನಾಗಿ ಮತ್ತು ಸ್ನೇಹಿತನಾಗಿ, ನಾನು ಮತ್ತು ನನ್ನ ಕುಟುಂಬಕ್ಕೆ ತುಂಬಾ ನೋವನ್ನುಂಟು ಮಾಡುತ್ತಿರುವ ವದಂತಿಗಳನ್ನು ನಂಬಬೇಡಿ ಎಂದು ವಿನಂತಿಸ್ತೇನೆ.
ಕಠಿಣ ಪರಿಶ್ರಮದ ಮೂಲಕ ಯಶಸ್ಸು ಮತ್ತು ಎಲ್ಲರಿಗೂ ಒಳ್ಳೆಯದು ಬಯಸುವುದನ್ನು ನನ್ನ ಕುಟುಂಬ ಕಲಿಸಿದೆ. ಕುಟುಂಬದ ಮೌಲ್ಯಗಳಿಗೆ ಬದ್ಧನಾಗಿದ್ದೇನೆ. ದೈವರ ಆಶೀರ್ವಾದ, ನಿಮ್ಮ ಪ್ರೀತಿ ಮತ್ತು ಬೆಂಬಲ ಪಡೆಯಲು ಪ್ರಯತ್ನಿಸುತ್ತೇನೆ, ಸಹಾನುಭೂತಿ ಅಲ್ಲ ಎಂದು ಬರೆದುಕೊಂಡಿದ್ದಾರೆ.
Leave a Comment