ಆಡಳಿತ ವೈಫಲ್ಯ ಒಪ್ಪಿಕೊಂಡ ಟಿಟಿಡಿ; ಸರ್ಕಾರದಿಂದ ಪರಿಹಾರ ಘೋಷಣೆ
ನ್ಯೂಸ್ ಆ್ಯರೋ: ತಿರುಪತಿಯಲ್ಲಿ ಕಾಲ್ತುಳಿತ ದುರಂತಕ್ಕೆ ಟಿಟಿಡಿ ಬೇಸರ ವ್ಯಕ್ತಪಡಿಸಿದೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಬಿ.ಆರ್.ನಾಯ್ಡು.. ಟಿಕೆಟ್ ಪಡೆಯುವಾಗ 6 ಜನ ಮೃತಪಟ್ಟಿದ್ದು ದುರಾದೃಷ್ಟಕರ ಎಂದಿದ್ದಾರೆ.
ಸಂಜೆ ವೇಳೆಗೆ ಪೊಲೀಸರ ತನಿಖಾ ವರದಿ ಟಿಟಿಡಿಗೆ ಸಿಗಲಿದೆ. ಆಮೇಲೆ ಏನ್ ಮಾಡ್ಬೇಕೆಂದು ಸಿಎಂ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ತೇವೆ. ತಿರುಪತಿ ಕಾಲ್ತುಳಿತದ ಹಿಂದೆ ಅಧಿಕಾರಿಗಳ ವೈಫಲ್ಯವಿದೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಸೇವೆ ನೀಡಬೇಕು ಎಂದು ಸೂಚಿಸಿದ್ದೇವೆ. ಸಂತ್ರಸ್ತ ಕುಟುಂಬಗಳಿಗೆ ಟಿಟಿಡಿ ಬೆಂಬಲ ನೀಡಲಿದೆ. ಡಿಎಸ್ಪಿ ಗೇಟ್ ತೆರೆದಿದ್ದರಿಂದ ಘಟನೆ ನಡೆದಿದೆ ಎಂದಿದ್ದಾರೆ.
ಪ್ರತಿ ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರವನ್ನು ಆಂಧ್ರಪ್ರದೇಶ ಸರ್ಕಾರ ಘೋಷಣೆ ಮಾಡಿದೆ. ಗೃಹ ಸಚಿವೆ ಅನಿತಾ ಅವರು ದುರ್ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಿದ್ದಾರೆ.
ಆದರೆ ಸರ್ಕಾರದ ಪರಿಹಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಭಕ್ತರು ಒಂದು ಕೋಟಿ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
Leave a Comment