ರಾಯಲ್‌ ಎನ್‌ಫೀಲ್ಡ್‌ನ ಡಿಸೆಂಬರ್‌ನ ಮಾರಾಟ ವರದಿ ಪ್ರಕಟ – ಕಳೆದ ತಿಂಗಳು ಎಷ್ಟು ಬೈಕ್ ಮಾರಾಟವಾಗಿದೆ ಗೊತ್ತಾ…!?

ರಾಯಲ್‌ ಎನ್‌ಫೀಲ್ಡ್‌ನ ಡಿಸೆಂಬರ್‌ನ ಮಾರಾಟ ವರದಿ ಪ್ರಕಟ – ಕಳೆದ ತಿಂಗಳು ಎಷ್ಟು ಬೈಕ್ ಮಾರಾಟವಾಗಿದೆ ಗೊತ್ತಾ…!?

ನ್ಯೂಸ್ ಆ್ಯರೋ : ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್‌ ಮೋಟಾರ್‌ ಸೈಕಲ್‌ ಮೇಲೆ ಈಗಲೂ ಅದೇ ಕ್ರೇಜ್‌ ಉಳಿದುಕೊಂಡಿದೆ. ಅತ್ಯಂತ ಹಳೆಯ ಮೋಟಾರ್‌ ಸೈಕಲ್‌ ಆಗಿದ್ದರು, ಹೊಸ ಶೈಲಿಯಲ್ಲಿ ಬರುತ್ತಿರುವ ರಾಯಲ್‌ ಎನ್‌ಫೀಲ್ಡ್‌ ಈಗಲೂ ಬಹು ಬೇಡಿಕೆಯಲ್ಲಿರುವ ಬೈಕ್‌ಗಳಲ್ಲಿ ಒಂದಾಗಿದೆ.

ಇದೀಗ 2022ರ ಡಿಸೆಂಬರ್ ತಿಂಗಳಲ್ಲಿ ರಾಯಲ್‌ ಎನ್‌ಫೀಲ್ಡ್‌ ಮಾರಾಟದ ವರದಿಯನ್ನು ಬಹಿರಂಗಪಡಿಸಿದ್ದು, ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ 8%ರಷ್ಟು ಕುಸಿತಗೊಂಡಿದೆ. ಡಿಸೆಂಬರ್‌ ತಿಂಗಳಿನಲ್ಲಿ 68,400 ಮೋಟಾರ್‌ ಸೈಕಲ್‌ಗಳು ಮಾರಾಟವಾಗಿದೆ.

ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 73,739 ಮೋಟಾರ್‌ ಸೈಕಲ್‌ಗಳನ್ನು ಮಾರಾಟ ಮಾಡಿತ್ತು. ದೇಶಿಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು 59,821 ಯುನಿಟ್ ಗಳನ್ನು ಮಾರಾಟ ಮಾಡಿದೆ. ಇನ್ನು ಕಳೆದ ವರ್ಷ ರಾಯಲ್ ಎನ್‌ಫೀಲ್ಡ್ ಕಂಪನಿಯು 65,187 ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿತ್ತು. ಇದನ್ನು ಕಳೆದ ತಿಂಗಳ ದೇಶಿಯ ಮಾರುಕಟ್ಟೆಯ ಮಾರಾಟಕ್ಕೆ ಹೋಲಿಸಿದರೆ ಶೇ.8 ರಷ್ಟು ಕುಸಿತವನ್ನು ಕಂಡಿದೆ.

ಇನ್ನು 2022ರ ಡಿಸೆಂಬರ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 8,579 ಮೋಟಾರ್‌ಸೈಕಲ್‌ಗಳನ್ನು ರಫ್ತು ಮಾಡಿದೆ. ಇನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯು 2021ರ ಡಿಸೆಂಬರ್ ತಿಂಗಳಿನಲ್ಲಿ 8,552 ಮೋಟಾರ್‌ಸೈಕಲ್‌ಗಳನ್ನು ರಫ್ತು ಮಾಡಿತು. ಇನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯು ವಾರ್ಷಿಕ ಮಾರಾಟದ ವರದಿಯನ್ನು ಕೂಡ ಪ್ರಕಟಿಸಿದೆ.

2022ರ ಏಪ್ರಿಲ್-ಡಿಸೆಂಬರ್ ತಿಂಗಳುಗಳಲ್ಲಿ 6,16,370 ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿದೆ. ಇನ್ನು 2021ರ ಅದೇ ಅವಧಿಯಲ್ಲಿ 4,16,593 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

ರಾಯಲ್ ಎನ್‌ಫೀಲ್ಡ್ ಸಿಇಒ ಬಿ. ಗೋವಿಂದರಾಜನ್ ಬಗ್ಗೆ ಮಾತನಾಡಿ, ಬ್ರೆಜಿಲ್‌ನಲ್ಲಿ ಭಾರತದ ಹೊರಗೆ ನಾಲ್ಕನೇ ಸಿಕೆಡಿ ಸೌಲಭ್ಯವನ್ನು ಉದ್ಘಾಟಿಸುವುದರೊಂದಿಗೆ ಕಂಪನಿಯು ಸಾಗರೋತ್ತರ ಮಾರುಕಟ್ಟೆಯಲ್ಲಿ ತನ್ನ ನೆಲೆಯನ್ನು ಭದ್ರಗೊಳಿಸಿದೆ ಎಂದರು.

ರಾಯಲ್ ಎನ್‌ಫೀಲ್ಡ್ ಇಟಲಿಯ ಮಿಲನ್‌ನಲ್ಲಿ ನಡೆದ 2022ರ EICMA ಶೋನಲ್ಲಿ ಸೂಪರ್ ಮಿಟಿಯೊರ್ 650 ಬೈಕ್ ಅನ್ನು ಅನಾವರಣಗೊಳಿಸಲಾಗಿತ್ತು. ಈ ಹೊಸ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಬೈಕ್ ಅನ್ನು ಸ್ಟ್ಯಾಂಡರ್ಡ್ ಮತ್ತು ಟೂರರ್ ಎಂಬ ಎರಡೂ ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ.

ಈ ಬೈಕ್ ಸ್ಟ್ಯಾಂಡರ್ಡ್ ವೇರಿಯಂಟ್‌ಗೆ ಸುಮಾರು ₹3.5 ಲಕ್ಷ ಮತ್ತು ಟೂರರ್ ವೇರಿಯಂಟ್‌ಗೆ ₹4 ಲಕ್ಷ ಬೆಲೆಯನ್ನು ನಿರೀಕ್ಷಿಸಲಾಗಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಬೈಕ್ ಅನ್ನು ಹಲವಾರು ಭಾರೀ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿತ್ತು. ಈ ಹೊಸ ಬೈಕಿನಲ್ಲಿ 648 ಸಿಸಿ ಏರ್ ಮತ್ತು ಆಯಿಲ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 47 ಬಿಹೆಚ್‍ಪಿ ಪವರ್ ಮತ್ತು 52 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಈ ಸಸ್ಪೆಕ್ಷನ್ ಸೆಟ್-ಅಪ್ ಅನ್ನು ಮೊದಲ ಬಾರಿಗೆ ಬಳಸಿದ ದಪ್ಪನಾದ 43 ಎಂಎಂ ಯುಎಸ್‌ಡಿ ಫೋರ್ಕ್ ಅನ್ನು ಹೊಂದಿದೆ. ಈ ರಾಯಲ್ ಎನ್‌ಫೀಲ್ಡ್ ಮತ್ತೊಂದು ಮೊದಲನೆಯದು ಸೂಪರ್ ಮಿಟಿಯೊರ್ 650 ನಲ್ಲಿ ಫುಲ್ ಎಲ್ಇಡಿ ಹೆಡ್‌ಲೈಟ್ ಆಗಿದೆ.

ಈ ಬೈಕಿನ ರಾಯಲ್ ಎನ್‌ಫೀಲ್ಡ್ ತನ್ನ ಇವಿ ಮೂಲ ಮಾದರಿಗಳನ್ನು ಟೆಸ್ಟ್ ಮಾಡಲು ಪ್ರಾರಂಭಿಸಿದೆ. ಈ ಟೆಸ್ಟ್ ಗಳನ್ನು ಜಗತ್ತಿನಾದ್ಯಂತ ವಿವಿಧ ಸ್ಥಳಗಳಲ್ಲಿ ನಡೆಸಲಾಗುತ್ತಿದೆ.

ಇದು ತನ್ನ ಎಲೆಕ್ಟ್ರಿಕ್ ಬೈಕ್‌ಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದ್ದರೂ, ಮೊದಲ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು 2025ರ ಮೊದಲು ಬಿಡುಗಡೆ ಮಾಡಲಾಗುವುದಿಲ್ಲ. ಏಕೆಂದರೆ ಕಂಪನಿಯು ವಿಭಿನ್ನ ಉತ್ಪನ್ನದ ಕೊಡುಗೆಯೊಂದಿಗೆ ಬರಲು ಬಯಸುತ್ತಿದೆ. ರಾಯಲ್ ಎನ್‌ಫೀಲ್ಡ್ 350ccನಿಂದ 650ಸಿಸಿ ವಿಭಾಗದಲ್ಲಿ ವ್ಯಾಪಕ ಶ್ರೇಣಿಯ ಆಯ್ಕೆಗಳೊಂದಿಗೆ ಸತತವಾಗಿ ವಿತರಿಸಲ್ಪಟ್ಟಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *