ಸಾವಿನ ಮನೆಯಲ್ಲೂ ಕುಟುಂಬಸ್ಥರ ಬಾಂಧವ್ಯವನ್ನೇ ಅಪವಿತ್ರವಾಗಿಸಿದ್ರಾ ಪವಿತ್ರಾ ಲೋಕೇಶ್? – ಸೂತಕದ ಮನೆಯಲ್ಲಿ ನರೇಶ್ ಜೊತೆ ಹಿಂಗಾ ಮಾಡೋದು…!?

ಸಾವಿನ ಮನೆಯಲ್ಲೂ ಕುಟುಂಬಸ್ಥರ ಬಾಂಧವ್ಯವನ್ನೇ ಅಪವಿತ್ರವಾಗಿಸಿದ್ರಾ ಪವಿತ್ರಾ ಲೋಕೇಶ್? – ಸೂತಕದ ಮನೆಯಲ್ಲಿ ನರೇಶ್ ಜೊತೆ ಹಿಂಗಾ ಮಾಡೋದು…!?

ನ್ಯೂಸ್ ಆ್ಯರೋ : ಕೆಲ ತಿಂಗಳ ಹಿಂದೆ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಅವರ ಬಗ್ಗೆ ಸಾಕಷ್ಟು ಸುದ್ದಿಗಳು ಓಡಾಡಿದ್ದವು. ಇಬ್ಬರು ಮದುವೆ ಆಗಿದ್ದಾರೆ, ಆಗಲಿದ್ದಾರೆ ಎಂಬೆಲ್ಲ ಚರ್ಚೆಗಳು ನಡೆದಿದ್ದವು. ಅಲ್ಲದೆ, ಸಾಕಷ್ಟು ಕಾಂಟ್ರವರ್ಸಿ ಕೂಡ ಆಗಿತ್ತು. ಆದರೆ ಇದೀಗ ಅದೆಲ್ಲದಕ್ಕೂ ಬ್ರೇಕ್ ಬಿದ್ದಿದೆ. ಅಧಿಕೃತವಾಗಿ ನಟ ನರೇಶ್ ಈ ಬಗ್ಗೆ ಸ್ಪಷ್ಪನೆ ನೀಡಿದ್ದು, ಶೀಘ್ರದಲ್ಲೇ ಅವರು ಪವಿತ್ರಾ ಲೋಕೇಶ್ ಅವರೊಂದಿಗೆ ಮದುವೆ ಆಗಲಿದ್ದಾರೆ. ಹೊಸ ವರ್ಷ ಇಂಥದ್ದೊಂದು ಗುಡ್ ನ್ಯೂಸ್ ಅನ್ನು ಅವರು ಹಂಚಿಕೊಂಡಿದ್ದಾರೆ.

ಪವಿತ್ರಾ ಲೋಕೇಶ್ ಜೊತೆಗೆ ಮದುವೆ ಆಗುತ್ತಿರುವ ವಿಚಾರವನ್ನು ಒಂದು ಸ್ಪೆಷಲ್ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ ನಟ ನರೇಶ್. ಆ ವಿಡಿಯೋದಲ್ಲಿ ಕೇಕ್ ಕತ್ತರಿಸಲಾಗಿದೆ. ನಂತರ ಲಿಪ್‌ಲಾಕ್ ಕೂಡ ಮಾಡಿದ್ದಾರೆ. ತುಂಬ ಕಲರ್‌ಫುಲ್ ಆಗಿರುವ ಈ ವಿಡಿಯೋದಲ್ಲಿ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೂಡ ಹೇಳಲಾಗಿದೆ. ಜೊತೆಗೆ ಶೀಘ್ರದಲ್ಲೇ ಮದುವೆ ಆಗುವುದಾಗಿಯೂ ಈ ವಿಡಿಯೋದಲ್ಲಿ ತಿಳಿಸಿದ್ದಾರೆ. ಆದರೆ ಮದುವೆ ದಿನಾಂಕದ ಬಗ್ಗೆ ಏನೊಂದು ಮಾಹಿತಿ ಇಲ್ಲ. ‘ಹೊಸ ವರ್ಷ, ಹೊಸ ಆರಂಭ, ನಿಮ್ಮೆಲ್ಲರ ಆಶೀರ್ವಾದ ಬೇಕು..’ ಎನ್ನುತ್ತ ಮದುವೆ ಬಗ್ಗೆ ಮಾಹಿತಿ ಹಂಚಿಕೊಂಡ ಪವಿತ್ರಾ ಲೋಕೇಶ್ ಮತ್ತು ನರೇಶ್.

ಕಳೆದ ಕೆಲ ತಿಂಗಳ ಹಿಂದೆ ಪವಿತ್ರಾ ಲೋಕೇಶ್‌ ಮತ್ತು ನರೇಶ್‌ ನಡುವಿನ ಸಂಬಂಧದ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದವು. ಪವಿತ್ರಾ ಮತ್ತು ನರೇಶ್ ಮದುವೆಯಾಗಿದ್ದಾರಂತೆ, ಮದುವೆಯಾಗ್ತಾರಂತೆ ಎಂಬ ಅಂತೆ-ಕಂತೆ ಟಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್‌ ತುಂಬೆಲ್ಲಾ ಹರಿದಾಡಿದ್ದವು. ಕೊನೆಗೆ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಕೂಡ ಸಾಕಷ್ಟು ಆರೋಪ ಮಾಡಿದ್ದರು.

‘ನನ್ನ ಪತಿ ನರೇಶ್ ನನಗೆ ಮೋಸ ಮಾಡಿದ್ದಾರೆ. ನರೇಶ್‌ಗೆ ಮೂರು ಮಕ್ಕಳಿದ್ದಾರೆ. ಮೂರು ಮದುವೆಯಿಂದಲೂ ಒಂದೊಂದು ಮಗು ಆಗಿದೆ.. ನನಗೆ ಡಿವೋರ್ಸ್ ನೋಟಿಸ್‌ ಕಳಿಸಿದ್ದಾರೆ. ನಾನು ಕಾನೂನು ಮೂಲಕ ಹೋರಾಡುತ್ತೇನೆ. ಖಂಡಿತ ಇದಕ್ಕೆಲ್ಲ ನಾನು ಉತ್ತರ ನೀಡುತ್ತೇನೆ. ಮದುವೆ ಆದಾಗಿನಿಂದ ಇದೇ ಕರ್ಮ ಆಗಿದೆ. ಸಂಸಾರ ಅಂದಮೇಲೆ ಏರುಪೇರು ಇರೋದು ಸಹಜ. ಅವರು ಹೇಗೆಲ್ಲ ನಡೆದುಕೊಂಡಿದ್ದಾರೆ ಎಂಬುದನ್ನು ಹೇಳಿದ್ದೇನೆ. ನಾನು ಮಾಡಿದ ಆರೋಪಗಳನ್ನು ಸಾಬೀತುಪಡಿಸಿದ್ದೇನೆ. ನಮ್ಮತ್ತೆ ಇದ್ದಿದ್ದರೆ ಈ ಪರಿಸ್ಥಿತಿಯೇ ಬರುತ್ತಿರಲಿಲ್ಲ. ನನಗೆ ಅನ್ಯಾಯ ಆಗಿದೆ, ನಾನು ಕೇಳುತ್ತಿದ್ದೇನೆ’ ಎಂದೆಲ್ಲ ಹೇಳಿದ್ದರು.

ಇದೀಗ ನರೇಶ್- ಪವಿತ್ರಾ ಲಿಪ್‌ಲಾಕ್ ವಿಡಿಯೋ ವೈರಲ್ ಆಗುತ್ತಿದ್ದಂತೆ ನರೇಶ್ ಮೂರನೇ ಪತ್ನಿ ರಮ್ಯಾ ಮತ್ತೆ ಮಾಧ್ಯಮಗಳ ಮುಂದೆ ಎಂಟ್ರಿ ನೀಡಿದ್ದು, ಸಾವಿನ ಮನೆಯಲ್ಲೂ ನರೇಶ್-ಪವಿತ್ರಾ ಲೋಕೇಶ್ ಅಸಹ್ಯ ನಡೆ ತೋರಿದ್ದರು ಎಂದು ಕಿಡಿ ಕಾರಿದ್ದಾರೆ.

ಆ ವಿಡಿಯೋ ನೋಡಿ ನನಗೆ ಆಶ್ಚರ್ಯ ಆಗಲಿಲ್ಲ ಎಂದ ರಮ್ಯಾ ರಘುಪತಿ ” ಈ ಹಿಂದೆ ನರೇಶ್ ನಮ್ಮ ಮನೆಯ ಕೆಲಸದವಳ ಜೊತೆ ಇದ್ದಾಗ ನೋಡಿ ಮೊದಲು ಶಾಕ್ ಆಗಿತ್ತು. ಅವರ ಫೋನ್‌ನಲ್ಲಿ ಕಾಲ್ ರೆಕಾರ್ಡಿಂಗ್ ಎಲ್ಲಾ ಕೇಳಿದ್ದಾಗ ಅಘಾತವಾಗಿತ್ತು. ಆದರೀಗ ಅವರ ಬಂಡವಾಳ ಬಯಲು ಆಗಿದೆ ದಿನಕ್ಕೊಂದು ಸತ್ಯ ಹೊರಬೀಳುತ್ತಿದ್ದು, ದಿನ ಇಂತಹ ಸನ್ನಿವೇಶಗಳನ್ನು ನೋಡಿ ಅಭ್ಯಾಸ ಆಗಿದೆ, ಇಂತಹ ಸಾಕಷ್ಟು ಸೀನ್ ಗಳನ್ನು ನಾನು ನೋಡಿದ್ದೇನೆ. ನನಗೆ ಲಿಪ್ ಲಾಕ್ ವಿಡಿಯೋ ನೋಡಿ ಅಚ್ಚರಿ ಆಗಲಿಲ್ಲ. ಇವತ್ತು ವಿಡಿಯೋ ನೋಡಿದ್ದೇವೆ ಅಷ್ಟೆ. ನಾನು ಇದನ್ನೆಲ್ಲಾ ಬಹಳ ನೋಡಿದ್ದೇನೆ. ಹಾಗಾಗಿ ಅಚ್ಚರಿ ಅನ್ನಿಸಲಿಲ್ಲ” ಎಂದಿದ್ದಾರೆ.

ನರೇಶ್ ಅವರ ತಂದೆ ಕೃಷ್ಣ ಅಂತಿಮ ದರ್ಶನಕ್ಕೆ ಪವಿತ್ರ ಅವರನ್ನು ಕರೆದುಕೊಂಡು ಬಂದಿದ್ದು ಘಟ್ಟಮನೇನಿ ಕುಟುಂಬಕ್ಕೂ ಇಷ್ಟವಾಗಿಲ್ಲ. ಚಿತ್ರರಂಗದವರು ಕೂಡ ಅಂತಿಮ ನಮನ ಸಲ್ಲಿಸಲು ಬಂದಿದ್ದರು. ಆಕೆ ಕೂಡ ನಟಿ ಎನ್ನುವ ಕಾರಣಕ್ಕೆ ಕೆಲವರು ಸುಮ್ಮನಿದ್ದರು. ಇನ್ನು ಸೂತಕದ ಮನೆಯಲ್ಲಿ ನರೇಶ್ ಬಿಹೇವಿಯರ್, ಅವರಿಬ್ಬರ ಎಕ್ಸ್‌ಪ್ರೇಷನ್ ಸ್ಕ್ರೀನ್‌ ಶಾಟ್ ತೆಗೆದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ನೀರು ಕುಡಿತೀರಾ? ಇನ್ನು ಎಷ್ಟು ಹೊತ್ತು? ಎನ್ನುವಂತೆ ಪವಿತ್ರಾ ಲೋಕೇಶ್ ಕಣ್ಸನ್ನೆ ಕೆಲವರಿಗೆ ಬೇಸರ ತರಿಸಿತ್ತು. ನರೇಶ್ ಆಕೆಯ ಭುಜದ ಮೇಲೆ ಕೈ ಹಾಕುವುದು, ಆಕೆ ನರೇಶ್ ಕಡೆ ನೋಡುವುದು ಹೀಗೆ ಭಾರೀ ಡ್ರಾಮಾ ನಡೀತು ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಇನ್ನು ಕೃಷ್ಣ ಪಾರ್ಥೀವ ಶರೀರದ ಅಂತಿಮ ಯಾತ್ರೆಯಲ್ಲೂ ನಟಿ ಪವಿತ್ರಾ ಲೋಕೇಶ್ ಕಾಣಿಸಿಕೊಂಡಿದ್ದರು. ನೆಟ್ಟಿಗರು ಮಾತ್ರವಲ್ಲ ಘಟ್ಟಮನೇನಿ ಫ್ಯಾಮಿಲಿ ಆಪ್ತರಿಗೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ವರ್ತನೆ ಇಷ್ಟವಾಗಲಿಲ್ಲ. ಈ ಬಗ್ಗೆ ಕೆಲವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ಬಗ್ಗೆ ಮಾತನಾಡದೇ ಇರುವುದೇ ಒಳ್ಳೆಯದು ಎನ್ನುವಂತೆ ಬೇಸರ ವ್ಯಕ್ತಪಡಿಸಿದ್ದು, ತಮ್ಮಿಬ್ಬರ ಆತ್ಮೀಯ ಅನುಬಂಧದ ಬಗ್ಗೆ ಜಗಜಾಹೀರು ಮಾಡಲು ಬೇಕೆಂದೇ ಹೀಗೆಲ್ಲಾ ಮಾಡಿದರು ಎಂದು ಕೆಲವರು ಹೇಳಿದ್ದರು ಎಂದಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *