ಹಳೇ ಗೆಳೆಯನನ್ನೇ ವರಿಸಲು ಹೊರಟ ನಟಿ ವನಿತಾ ವಿಜಯ್ಕುಮಾರ್
ನ್ಯೂಸ್ ಆ್ಯರೋ: ಸದಾ ವಿವಾದಗಳಿಂದ ಸುದ್ದಿಯಾಗುವ ನಟಿ ವನಿತಾ ವಿಜಯ್ಕುಮಾರ್ ಅವರು ಈಗ ಒಂದು ಅಚ್ಚರಿಯ ವಿಷಯ ಹಂಚಿಕೊಂಡಿದ್ದಾರೆ. ಸದ್ಯ ವನಿತಾ ಅವರಿಗೆ 43 ವರ್ಷ ವಯಸ್ಸು. ಈ ಪ್ರಾಯದಲ್ಲಿ ಅವರು ಮದುವೆ ಆಗಲು ಸಜ್ಜಾಗಿದ್ದಾರೆ. ಇದು ಅವರ ಮೊದಲ ಮದುವೆ ಅಲ್ಲ. ಈಗಾಗಲೇ 3 ಬಾರಿ ಮದುವೆ ಆಗಿ ವಿಚ್ಛೇದನ ಪಡೆದಿರುವ ಅವರಿಗೆ ಇದು 4ನೇ ಮದುವೆ! ಆ ಕಾರಣದಿಂದ ಎಲ್ಲರಿಗೂ ಅಚ್ಚರಿ ಆಗಿದೆ. ಹಳೇ ಗೆಳೆಯ ರಾಬರ್ಟ್ಗೆ ವನಿತಾ ಅವರು ಪ್ರಪೋಸ್ ಮಾಡಿದ್ದಾರೆ. ಈ ಫೋಟೋವನ್ನು ಕೂಡ ಅವರು ಹಂಚಿಕೊಂಡಿದ್ದಾರೆ.
ಕಡಲ ತೀರದಲ್ಲಿ ವನಿತಾ ವಿಜಯ್ಕುಮಾರ್ ಅವರು ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಈ ಫೋಟೋದಲ್ಲಿ ರಾಬರ್ಟ್ ಅವರು ನಗು ಬೀರಿದ್ದಾರೆ. ‘ದಿನಾಂಕ ನೆನಪಿಟ್ಟುಕೊಳ್ಳಿ. 5 ಅಕ್ಟೋಬರ್ 2024. ವನಿತಾ ವಿಜಯ್ ಕುಮಾರ್ ಲವ್ಸ್ ರಾಬರ್ಟ್’ ಎಂದು ಈ ಫೋಟೋಗೆ ಕ್ಯಾಪ್ಷನ್ ನೀಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ. ಈ ಫೋಟೋವನ್ನು ರಾಬರ್ಟ್ ಕೂಡ ಶೇರ್ ಮಾಡಿಕೊಂಡಿದ್ದು, ‘ವಿಆರ್. ದೊಡ್ಡ ಘೋಷಣೆ. 5 ಅಕ್ಟೋಬರ್ 2024’ ಎಂದು ಬರೆದುಕೊಂಡಿದ್ದಾರೆ.
ವನಿತಾ ವಿಜಯ್ಕುಮಾರ್ ಅವರು 2000ನೇ ಇಸವಿಯಲ್ಲಿ ಮೊದಲ ಮದುವೆ ಆಗಿದ್ದರು. ಆದರೆ 2007ರಲ್ಲಿ ಅವರು ವಿಚ್ಛೇದನ ಪಡೆದರು. ಬಳಿಕ 2007ರಲ್ಲಿ ರಾಜನ್ ಆನಂದ್ ಜೊತೆ ಅವರ ಎರಡನೇ ಮದುವೆ ನೆರವೇರಿತು. ಆ ವಿವಾಹ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. 2012ರಲ್ಲಿ ಈ ಮದುವೆ ಕೂಡ ಮುರಿದುಬಿತ್ತು. 2020ರಲ್ಲಿ ಪೀಟರ್ ಪೌಲ್ ಜೊತೆ ವನಿತಾ ಅವರು 3ನೇ ಮದುವೆಯಾದರು. ಕೆಲವೇ ದಿನಗಳಲ್ಲಿ ಅವರಿಬ್ಬರ ದಾಂಪತ್ಯ ಹಳಸಿತು.
ಅಂದಹಾಗೆ, ರಾಬರ್ಟ್ ಮತ್ತು ವನಿತಾ ಗೆಳೆತನ ಹೊಸದೇನೂ ಅಲ್ಲ. 2013ರಲ್ಲೇ ವನಿತಾ ಮತ್ತು ರಾಬರ್ಟ್ ಅವರು ಡೇಟಿಂಗ್ ಮಾಡಿದ್ದರು. ಬಳಿಕ ಬ್ರೇಕಪ್ ಆಗಿತ್ತು. ಈಗ ಮತ್ತೆ ಹಳೇ ಗೆಳೆಯನನ್ನೇ ವರಿಸಲು ಹೊರಟಿದ್ದಾರೆ.
Leave a Comment