“ನನ್ನ ಭಾವನೆಗೆ ಮೋಸ ಮಾಡಬೇಡ”; ತ್ರಿವಿಕ್ರಮ್​ಗೆ ಉದಾಹರಣೆ ಮೂಲಕ ಅಮ್ಮ ಹೇಳಿದ್ದೇನು?

Trivikram
Spread the love

ನ್ಯೂಸ್ ಆ್ಯರೋ: ಕನ್ನಡದ ಬಿಗ್​ಬಾಸ್​ ಸೀಸನ್​ 11 ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್​ ಪಡೆದುಕೊಂಡು ಮುನ್ನುಗ್ಗುತ್ತಿದೆ. ಇದೇ ಹೊತ್ತಲ್ಲಿ ಈ ವಾರ ಬಿಗ್​ಬಾಸ್​ ಸ್ಪರ್ಧಿಗಳು ಸಖತ್ ಖುಷಿಯಲ್ಲಿ ಇರಲಿದ್ದಾರೆ. ಏಕೆಂದರೆ 94 ದಿನಗಳ ಕಾಲ ಸ್ಪರ್ಧಿಗಳು ತಮ್ಮ ತಮ್ಮ ಕುಟುಂಬಸ್ಥರನ್ನು ಮಿಸ್ ಮಾಡಿಕೊಂಡಿದ್ದರು. ಹೀಗಾಗಿ ಸ್ಪರ್ಧಿಗಳಿಗೆ ಬಿಗ್​ಬಾಸ್​ ಸರ್ಪ್ರೈಸ್​ ನೀಡಿದ್ದಾರೆ.

ನಿನ್ನೆಯ ಎಪಿಸೋಡ್​ನಲ್ಲಿ ಬಿಗ್​ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಎಂಟ್ರಿ ಕೊಟ್ಟಿದ್ದಾರೆ. ಮೊದಲು ಬಿಗ್​ಬಾಸ್​ ಮನೆಗೆ ಭವ್ಯಾ ಗೌಡ ತಾಯಿ ಹಾಗೂ ಅಕ್ಕ ಎಂಟ್ರಿ ಕೊಟ್ಟಿದ್ದಾರೆ. ಇದಾದ ಬಳಿಕ ತ್ರಿವಿಕ್ರಮ್​ ತಾಯಿ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆದ್ರೆ, ಈ ವೇಳೆ ತ್ರಿವಿಕ್ರಮ್​ಗೆ ಬಿಗ್​ಬಾಸ್ ಟಾಸ್ಕ್​ವೊಂದನ್ನು ಕೊಟ್ಟಿದ್ದರು.

​​ಈ ಟಾಸ್ಕ್ ಅನ್ನು 10 ನಿಮಿಷದಲ್ಲಿ ಪೂರ್ಣಗೊಳಿಸಿದ್ರೆ ಅಮ್ಮನನ್ನು ಭೇಟಿ ಮಾಡಬಹುದು ಎಂದು ಬಿಗ್ ಬಾಸ್ ಹೇಳಿದ್ದರು. ಅದರಂತೆ ಮನೆಯಲ್ಲಿ ತ್ರಿವಿಕ್ರಮ್ ಅವರು, ಪಜಲ್ (ಒಂದು ಚಿತ್ರವನ್ನು ಜೋಡಿಸುವುದು) ಅನ್ನು ಫುಲ್ ಟೆನ್ಷನ್​​ನಲ್ಲಿ ಬೇಗ ಬೇಗ ಮಾಡಲು ಹೋಗಿದ್ದಾರೆ. ಆದ್ರೆ ಈ ವೇಳೆ ಎಲ್ಲವೂ ಉಲ್ಟಾ ಪಲ್ಟಾ ಮಾಡಿ ಮಿಸ್​ ಮಾಡಿಕೊಂಡಿದ್ದರು. ಇದಾದ ಬಳಿಕ ಮತ್ತೆ ಬಿಗ್​ಬಾಸ್​ ತ್ರಿವಿಕ್ರಮ್​ ತಾಯಿಯನ್ನು ಮನೆಗೆ ಕಳುಹಿಸಿದ್ದಾರೆ.

ಇದಾದ ಬಳಿಕ ತ್ರಿವಿಕ್ರಮ್​ ತಾಯಿ ಮಗನಿಗೆ ಬುದ್ಧಿ ಮಾತು ಹೇಳಿದ್ದಾರೆ. ಈಗ ಚೆನ್ನಾಗಿ ಆಡುತ್ತಿದ್ದೀಯಾ. ಈಗ ನಾವು ಸಂತೆಗೆ ಹೋಗಿದ್ದೀವಿ ಅನ್ಕೋ, ಸಂತೆಗೆ ಹೋದಾಗ ನಮ್ಮ ಬ್ಯಾಗ ತೆಗೆದು ಇನ್ನೊಬ್ಬರಿಗೆ ಕೊಟ್ಟರೆ ಅವರು ತಿಂದು ರುಚಿ ನೋಡ್ತಾರೆ. ನೀನು ನಿನ್ನ ಜನಗಳಿಗಾಗಿ ಗೆದ್ದು ಬಾ. ನಿನ್ನ ಬೆನ್ನು ಹಿಂದಿನ ಸಮಸ್ಯೆಯನ್ನು ಬಿಟ್ಟು ಬಿಟ್ಟು ಮುಂದೆ ಬಾ. ಇದೊಂದು ನನ್ನ ಭಾವನೆಗೆ ಮೋಸ ಮಾಡಬೇಡ ತುಂಬಾ ಆಸೆ ಇಟ್ಟುಕೊಂಡಿದ್ದೀನಿ ಗೆದ್ದು ಬಾ ಅಂತ ಹೇಳಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!