ದಿನ ಭವಿಷ್ಯ 20-11-2024; ಇಂದು ಯಾವ ರಾಶಿಯವರಿಗೆ ಶುಭ ? ಅಶುಭ ತಿಳಿಯಿರಿ
ಮೇಷ : ನೀವು ಕೈ ಹಾಕಿದ ಕೆಲಸ ಕೈಗೂಡಲಿಲ್ಲವೆಂದ ಮಾತ್ರಕ್ಕೆ ಅದೃಷ್ಟ ಕೈ ಕೊಟ್ಟಿತು ಎಂದುಕೊಳ್ಳಬೇಡಿ. ಪ್ರಯತ್ನ ತಪ್ಪಾಗಿರಬಹುದು ಎಂದು ಭಾವಿಸಿ. ಅವಿವಾಹಿತರಿಗೆ ಸಂಬಂಧ ಅರಸಿ ಬರಲಿದೆ. ಬೇಡದ ವಾಗ್ವಾದಗಳಿಂದ ಮನಸ್ಸು ಹಾಳು. ಸೂರ್ಯನಿಗೆ ಅರ್ಘ್ಯ ಬಿಡಿ.
ವೃಷಭ : ಕೆಲಸ ಕಾರ್ಯಗಳೇನೇ ಇರಲಿ, ಸ್ನೇಹಿತರು, ಸಹೋದರರ ಸಹಕಾರ ಸಿಗಲಿದೆ. ಪ್ರೇಮ ವ್ಯವಹಾರಗಳಿಗೆ ಕೂಡಾ ಸ್ನೇಹಿತರ ಸಹಕಾರ ಸಿಗಲಿದೆ. ಪಿತ್ರಾರ್ಜಿತ ಆಸ್ತಿ ಸಂಬಂಧ ಧನಾತ್ಮಕ ಬೆಳವಣಿಗೆಗಳು ಕಂಡುಬರಲಿವೆ. ವಿಷ್ಣು ಸಹಸ್ರನಾಮ ಪಠಿಸಿ.
ಮಿಥುನ : ಆರೋಗ್ಯದಲ್ಲಿ ಶೀತ, ಕೆಮ್ಮು, ಗಂಟಲ ಕಿರಿಕಿರಿ ಕಂಡು ಬರಬಹುದು. ಮನೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗುವಿರಿ. ಬೇಡದ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿ. ಅವುಗಳು ವಾಸ್ತು ದೋಷ ತರುತ್ತಿರಬಹುದು. ಹೊರಗೆ ಸುತ್ತಾಡುವ ಅವಕಾಶವಿದೆ. ಆದಿತ್ಯ ಹೃದಯ ಪಠಣ ಮಾಡಿ.
ಕಟಕ: ಪೂರೈಕೆಯಾಗದ ಕೆಲಸಗಳ ಬಗ್ಗೆ ಚಿಂತೆ ಬೇಡ. ಗಡುವು ವಿಸ್ತರಣೆಯಾಗಲಿದೆ. ಸಾಮಾಜಿಕ ಕೆಲಸಗಳಲ್ಲಿ ತೊಡಗಿದವರಿಗೆ ಸಂತಸ ಹೆಚ್ಚಲಿದೆ. ರೈತರು, ಸಣ್ಣ ವ್ಯಾಪಾರಿಗಳಿಗೆ ಆದಾಯ ಹೆಚ್ಚಲಿದೆ. ಧೀರ್ಘ ಕಾಲೀನ ಆರೋಗ್ಯ ಸಮಸ್ಯೆಗಳು ಬಾಧಿಸುವುವು. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ.
ಸಿಂಹ : ಇಂದು ಉದಾಸೀನದಲ್ಲಿ ದಿನ ಕಳೆಯುವಿರಿ. ಮಾಡಬೇಕಾದ ಕೆಲಸಗಳು ಸಾಕಷ್ಟಿದ್ದರೂ ಯಾವುದೂ ಮಾಡದೆ ಕಳೆದು ದಿನಾಂತ್ಯದಲ್ಲಿ ಪಶ್ಚಾತ್ತಾಪ ಅನುಭವಿಸುವಿರಿ. ಗೆಳೆಯರಿಂದ ಸಂತಸ ಇರಲಿದೆ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಜೀವನಶೈಲಿ ಉತ್ತಮ ಪಡಿಸಿಕೊಳ್ಳುವ ಬಗ್ಗೆ ಗಮನ ಹರಿಸಿ. ಗೋ ಗ್ರಾಸ ನೀಡಿ.
ಕನ್ಯಾ : ನಿಮ್ಮ ಭವಿಷ್ಯ ಬದಲಾಗುವಂಥ ಘಟನೆಗಳು, ನಿರ್ಧಾರಗಳು ಇಂದು ಆಗಬಹುದು. ಯುವಕರಲ್ಲಿ ಉತ್ಸಾಹ ಹೆಚ್ಚಲಿದೆ. ವ್ಯಾಪಾರಿಗಳಿಗೆ ಉತ್ತಮ ಆದಾಯವಿದೆ. ಉದ್ಯೋಗಿಗಳಿಗೆ ದೇಹ, ಮನಸ್ಸಿಗೆ ಕೊಂಚ ಬಿಡುವು ದೊರೆತು ನಿರಾಳವೆನಿಸುವುದು. ಗೃಹ ಕೆಲಸಗಳಲ್ಲಿ ಭಾಗವಹಿಸುವಿರಿ. ಸೂರ್ಯ ದೇವನನ್ನು ಸ್ಮರಿಸಿ.
ತುಲಾ : ಸಣ್ಣಪುಟ್ಟ ಪ್ರವಾಸದಿಂದ ಸಂತೋಷ, ಧಾರ್ಮಿಕ ಕೆಲಸಕಾರ್ಯಗಳಲ್ಲಿ ಭಾಗಿಯಾಗುವಿರಿ. ಮನೆಯಲ್ಲಿ ಶುಭ ಕಾರ್ಯಗಳು ನಡೆವ ಸೂಚನೆಗಳು ಸಿಗಲಿವೆ. ಹೊಸಬರ ಭೇಟಿ ಲಾಭದಾಯಕವಾಗುವುದು. ಹವ್ಯಾಸಗಳು ಮನಸ್ಸಿಗೆ ಮುದ ತರಲಿವೆ. ಹಳದಿ ಹಾಗೂ ಬಿಳಿಯ ಧಾನ್ಯಗಳನ್ನು ದಾನ ಮಾಡಿ.
ವೃಶ್ಚಿಕ : ಆಸ್ತಿ ಖರೀದಿಗೆ ಸುದಿನ. ಗೆಳೆಯರು, ನೆಂಟರಿಷ್ಟರಲ್ಲಿ ನಿಮ್ಮ ಬಗ್ಗೆ ಉಂಟಾಗಿರುವ ತಪ್ಪು ತಿಳಿವಳಿಕೆಗಳು, ಗೊಂದಲಗಳು ನಿವಾರಣೆಯಾಗಿ ಮನಸ್ಸು ಹಗುರಾಗುವುದು. ಹೊಸ ಹವ್ಯಾಸದಿಂದ ಸಂತಸ. ತಾಯಿಯ ಸಹಕಾರದಿಂದ ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು. ಲಕ್ಷ್ಮೀ ವೆಂಕಟೇಶ್ವರ ಸ್ಮರಣೆ ಮಾಡಿ.
ಧನುಸ್ಸು : ವಿಶ್ರಾಂತಿ ಸಿಗಲಿದೆ. ಪೋಷಕರ ಅನಾರೋಗ್ಯ ಕಂಗೆಡಿಸಬಹುದು. ದೂರ ಪ್ರಯಾಣಗಳು ಉತ್ತಮ ಅನುಭವಗಳನ್ನು ನೀಡಲಿವೆ. ನಿರುದ್ಯೋಗಿಗಳು ಹೊಸ ಕೌಶಲ್ಯಗಳ ಕಲಿಕೆಯತ್ತ ಗಮನ ಹರಿಸಿ. ಮನೆಯ ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಆದಿತ್ಯ ಹೃದಯ ಪಠಿಸಿ.
ಮಕರ : ದೇಹಕ್ಕೆ ವೈದ್ಯಕೀಯ ಆರೈಕೆ ಬೇಕಾಗಬಹುದು. ಮನಸ್ಸಿನ ಹಳೆಯ ಗಾಯಗಳನ್ನು ಕೆದಕಿ ಮತ್ತಷ್ಟು ನೋವು ಅನುಭವಿಸುವಿರಿ. ಮಕ್ಕಳಿಂದ ಮನಸ್ಸಿಗೆ ಸಮಾಧಾನ ಸಿಗಲಿದೆ. ಆಸ್ತಿ ವ್ಯವಹಾರಗಳು ಲಾಭ ತರಲಿವೆ. ಮನೆಯ ಸ್ಥಳಾಂತರ ಕಾರ್ಯ ನಡೆಯಬಹುದು. ಕುಲದೇವರಿಗೆ ತುಪ್ಪದ ದೀಪ ಹಚ್ಚಿ.
ಕುಂಭ : ಹೊಸ ವಸ್ತುಗಳ ಖರೀದಿಯಿಂದ ಸಂತಸ. ಉದ್ಯೋಗದ ವಿಷಯದಲ್ಲಿ ಅಸ್ಥಿರತೆ ಕಾಡಲಿದೆ. ಮನೋರಂಜನೆಗಾಗಿ ವ್ಯಯಿಸುವಿರಿ. ಹಳೆ ಸ್ನೇಹಿತರಿಂದ ಅಚ್ಚರಿ ಕಾದಿದೆ. ನಿಮ್ಮ ಒಳ್ಳೆಯ ಮನಸ್ಸಿನ ಕೆಲಸಗಳಿಗೆ ಉತ್ತಮ ಫಲ ದೊರೆಯಲಿದೆ. ಮನೆದೇವರನ್ನು ಸ್ಮರಿಸಿ.
ಮೀನ : ಪ್ರೇಮಿಗಳಿಗೆ ಸಂತಸದ ದಿನ. ವಿವಾಹಿತರು ಸಂಗಾತಿಯೊಂದಿಗೆ ತಿರುಗಾಟ ಮಾಡುವರು. ಸವಿ ಮಾತುಗಳು ದಾಂಪತ್ಯ ಜೀವನದ ಸಿಹಿ ಹೆಚ್ಚಿಸಲಿವೆ. ಮಕ್ಕಳ ಆರೋಗ್ಯದ ಬಗ್ಗೆ ಜಾಗರೂಕತೆ ಅಗತ್ಯ. ಅಪರಿಚಿತರ ವಿಷಯದಲ್ಲಿ ಹೆಚ್ಚಿನ ಎಚ್ಚರಿಕೆಯಿಂದ ಮುಂದುವರಿಯಿರಿ. ಸೂರ್ಯನಿಗೆ ಅರ್ಘ್ಯ ಬಿಡಿ.
Leave a Comment