ಬಾಯ್‌ಫ್ರೆಂಡ್‌ಗಾಗಿ ಬೀದಿಯಲ್ಲೇ ಕಿತ್ತಾಟ; ನಡುರಸ್ತೆಯಲ್ಲಿ ಬಟ್ಟೆ ಹರಿಯುವಂತೆ ಹುಡುಗಿಯರ ಹೊಡೆದಾಟ, ವಿಡಿಯೋ ವೈರಲ್

Uttarakhand Girls Fight Video
Spread the love

ನ್ಯೂಸ್ ಆ್ಯರೋ:‌ ಜನರು ತಮ್ಮ ಪ್ರೀತಿಯನ್ನು ಗೆಲ್ಲಲು ಯಾವುದೇ ಹಂತಕ್ಕೆ ಹೋಗಬಹುದು ಎಂಬುದಕ್ಕೆ ಉದಾಹರಣೆಯಾಗಿ ಇಲ್ಲೊಂದು ವೈರಲ್ ವಿಡಿಯೋ ಉದಾಹರಣೆಯಾಗಿದೆ. ಒಬ್ಬ ಹುಡುಗನಿಗಾಗಿ ಇಬ್ಬರು ಯುವತಿಯರು ನಡುರಸ್ತೆಯಲ್ಲೇ ಜುಟ್ಟು ಹಿಡಿದು ಜಗಳವಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಡೆಹ್ರಾಡೂನ್‌ನ ರಾಯ್‌ಪುರ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಘಟನೆಯಲ್ಲಿ ಇಬ್ಬರು ಯುವತಿಯರ ನಡುವೆ ನಡೆದ ಘರ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಬ್ಬ ಬಾಯ್‌ಫ್ರೆಂಡ್‌ಗಾಗಿ ಇಬ್ಬರು ಯುವತಿಯರ ಮಧ್ಯೆ ವಿವಾದ ಉಂಟಾಗಿ ಆ ಜಗಳವು ರಸ್ತೆಯಲ್ಲಿ ದೈಹಿಕ ಘರ್ಷಣೆಗೆ ಕಾರಣವಾಯಿತು, ಇಬ್ಬರೂ ಹುಡುಗಿಯರು ಪರಸ್ಪರ ಕೂದಲು ಎಳೆದುಕೊಂಡು ಒಬ್ಬರನ್ನೊಬ್ಬರು ಹೊಡೆದಾಡಿಕೊಂಡಿದ್ದಾರೆ.

ಇಬ್ಬರ ನಡುವಿನ ಜಗಳವನ್ನು ಅವರದೇ ಇನ್ನೊಬ್ಬಳು ಫ್ರೆಂಡ್ ವಿಡಿಯೋ ಮಾಡಿ ಇನ್ನಷ್ಟು ಹೊಡೆಯುವಂತೆ ಪ್ರಚೋದಿಸಿದ್ದಾಳೆ. ಅವರಿಬ್ಬರು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಜಗಳವಾಡಿದ್ದು, ಒಂದು ಹಂತದಲ್ಲಿ ಯುವತಿಯೊಬ್ಬಳ ಬಟ್ಟೆ ಬಿಚ್ಚುವಂತೆ ಇನ್ನೊಬ್ಬಳು ಎಳೆದಾಡಿದ್ದಾಳೆ. ಆಗ ಬಟ್ಟೆ ಯಾಕೆ ಎಳೀತೀಯಾ ಎಂದು ಇಬ್ಬರ ನಡುವೆ ಮತ್ತೆ ಜಗಳ ಜೋರಾಗಿ ರಸ್ತೆಯಲ್ಲಿ ಜುಟ್ಟು ಹಿಡಿದು ಕಿತ್ತಾಡಿಕೊಂಡಿದ್ದಾರೆ.

ಈ ವೇಳೆ ಯುವಕನೊಬ್ಬ ಮಧ್ಯೆ ಪ್ರವೇಶಿಸಿ ಜಗಳ ಬಿಡಿಸಲು ಪ್ರಯತ್ನಿಸಿದನಾದರೂ ಆತ ಅವರನ್ನು ಹುಡುಗಿಯರು ಅನ್ನೋ ಕಾರಣಕ್ಕೆ ಮುಟ್ಟೋಕೆ ಹೋಗಿಲ್ಲ, ಆತ ಜಗಳ ನಿಲ್ಲಿಸಿ ಎಂದು ಕೇಳಿಕೊಂಡರೂ ಇಬ್ಬರೂ ಅವರ ಮನವಿಗೆ ಕಿವಿಗೊಡದೆ ಮತ್ತೆ ಜಗಳವಾಡಿದ್ದಾರೆ. ಆದರೂ ವಿಡಿಯೋ ಮಾಡುತ್ತಿದ್ದ ಯುವತಿ ಮಾತ್ರ ಅವರನ್ನು ಬಿಡಿಸುವ ಯತ್ನ ಮಾಡಿಲ್ಲ.

ದೈಹಿಕವಾಗಿ ಹೊಡೆದಾಡುವ ಮೊದಲು ಇಬ್ಬರೂ ಹುಡುಗಿಯರು ಪರಸ್ಪರ ನಿಂದಿಸುವುದನ್ನು ವಿಡಿಯೋ ತೋರಿಸಿದೆ. ರಸ್ತೆಯಲ್ಲಿ ಹೋಗುತ್ತಿದ್ದವರು ಸೇರಿದಂತೆ ಅಲ್ಲಿದ್ದ ಅನೇಕರು ಮಧ್ಯಪ್ರವೇಶಿಸುವ ಬದಲು ದೃಶ್ಯವನ್ನು ರೆಕಾರ್ಡ್ ಮಾಡಲು ಮುಂದಾಗಿದ್ದಾರೆ. ಕೊನೆಗೆ ಇಬ್ಬರು ವಯಸ್ಸಾದ ಮಹಿಳೆಯರು ಬಂದು ಜಗಳವನ್ನು ಬಿಡಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!