ಬಿಜಾಪುರ ಜಿಲ್ಲೆಯಲ್ಲಿ 17 ಕೆಂಪು ಉಗ್ರರು ಫಿನಿಶ್; ಪೂಜಾರಿ ಕಂಕೇರ್ ಅರಣ್ಯದಲ್ಲಿ ಎನ್‌ಕೌಂಟರ್
ನ್ಯೂಸ್ ಆ್ಯರೋ: ಛತ್ತೀಸ್ಗಢದ ದಕ್ಷಿಣ ಬಿಜಾಪುರ ಜಿಲ್ಲೆಯ ಅರಣ್ಯದಲ್ಲಿ ಭದ್ರತಾ ಪಡೆಗಳು ಹಾಗೂ ಮಾವೋವಾದಿಗಳ ನಡುವೆ ತೀವ್ರ ಗುಂಡಿನ ಕಾಳಗ ನಡೆದಿದೆ. ಒಂದೇ ತಿಂಗಳಲ್ಲಿ ಇದು ಎರಡನೇ ಎನ್ಕೌಂಟರ್ ನಡೆದಿದ್ದು, ಕಾರ್ಯಾಚರಣೆಯಲ್ಲಿ ನಕ್ಸಲರು ಹತರಾಗಿದ್ದಾರೆ.
ಛತ್ತೀಸ್ಗಢದಲ್ಲಿ ಗುಂಡಿನ ಸದ್ದು ಮುಂದುವರೆದಿದೆ. ದಕ್ಷಿಣ ಬಿಜಾಪುರದ ಅರಣ್ಯ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನ ಭದ್ರತಾ ಸಿಬ್ಬಂದಿ ಜಂಟಿ ತಂಡ ಆರಂಭಿಸಿ 17 ಜನ ನಕ್ಸಲರನ್ನ ಹೊಡೆದು ಹಾಕಿದ್ದಾರೆ. ಎರಡೂ ಕಡೆಯಿಂದ ಮಧ್ಯಂತರ ಗುಂಡಿನ ಚಕಮಕಿ ನಡೆದಿದೆ. ಪೂಜಾರಿ ಕಂಕೇರ್ ಅರಣ್ಯದಲ್ಲಿ ಎನ್‌ಕೌಂಟರ್ ನಡೆದಿದೆ.
ಇದೇ ತಿಂಗಳು ಜನವರಿ 6ರಂದು ಬಿಜಾಪುರದಲ್ಲಿ ನಕ್ಸಲರು ಐಇಡಿ ಬಳಸಿ ಯೋಧರ ವಾಹನವನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ದಾಂತೇವಾಡದ 8 ಡಿಆರ್ಜಿ ಯೋಧರು ಹಾಗೂ ಚಾಲಕ ಸೇರಿದಂತೆ 9 ಜನರು ಜೀವ ಕಳೆದುಕೊಂಡಿದ್ದರು.
ಜನವರಿ 12 ರಂದು ಬಿಜಾಪುರ ಜಿಲ್ಲೆಯ ಮದ್ದೇಡ್ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದ ಇದೇ ರೀತಿಯ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐದು ನಕ್ಸಲರು ಬಲಿಯಾಗಿದ್ರು. ಒಟ್ಟಾರೆ, ನಕ್ಸಲರು ಓಡಾಟ ಇದೇ ಅನ್ನೋ ಶಂಕೆ ಇದ್ದು ಸ್ಥಳದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಸಿದ್ದಾರೆ.
Leave a Comment