ಮುದ್ದಿನ ನಾಯಿ ಸಾವು ಕಂಡ ನೋವು; ಅದರದ್ದೇ ಚೈನ್ ಬಳಸಿ ತನ್ನ ಜೀವನವನ್ನೇ ಮುಗಿಸಿದ ಯುವಕ

Dog
Spread the love

ನ್ಯೂಸ್ ಆ್ಯರೋ: ಬೆಂಗಳೂರು ಉತ್ತರ ತಾಲೂಕು ಹೆಗ್ಗಡದೇವನಪುರ ಗ್ರಾಮದ ರಾಜಶೇಖರ್ (33) ಎಂಬವರು ಸಾಕುನಾಯಿ ಸಾವನ್ನಪ್ಪಿದ ಬೇಸರದಲ್ಲಿ ಅದೇ ನಾಯಿಯ ಚೈನ್ (ಸಂಕೋಲೆ) ಬಳಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ. ರಾಜಶೇಖರ್ ಅವರ ಬಳಿ ಇದ್ದ ಜರ್ಮನ್ ಶಫರ್ಡ್ ತಳಿಯ ಸಾಕುನಾಯಿ ‘ಬೌನ್ಸಿ’ ಮಂಗಳವಾರ ಮೃತಪಟ್ಟಿತ್ತು.

ರಾಜಶೇಖರ್ 9 ವರ್ಷಗಳ ಹಿಂದೆ ‘ಬೌನ್ಸಿ’ ಎಂಬ ಹೆಸರು ನೀಡಿ ನಾಯಿಯನ್ನು ಖರೀದಿಸಿ ತಂದಿದ್ದರು. ಮಂಗಳವಾರ ‘ಬೌನ್ಸಿ’ ಅನಾರೋಗ್ಯದಿಂದ ಮೃತಪಟ್ಟಿತ್ತು.

ತಮ್ಮ ಜಮೀನಿನಲ್ಲಿ ‘ಬೌನ್ಸಿ’ಯ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ಬಂದಿದ್ದ ರಾಜಶೇಖರ್ ಬುಧವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೆಳಗಿನ ಜಾವದಲ್ಲಿ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಮತ್ತು ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!