ಮುಂಬೈನತ್ತ ಹೊರಟ ʼಟಾಕ್ಸಿಕ್ʼ : ರಾಕಿ ಭಾಯ್-ಕಿಯಾರಾ ರೊಮ್ಯಾನ್ಸ್
ನ್ಯೂಸ್ ಆ್ಯರೋ: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ದೊಡ್ಡ ದೊಡ್ಡ ತಾರಾ ಬಳಗವೇ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದೆ. ಕಳೆದ 30 ದಿನಗಳಿಂದ ಬೆಂಗಳೂರಿನ ಹೊರವಲಯದಲ್ಲಿ ಬೃಹತ್ ಸೆಟ್ ಹಾಕಿ ಚಿತ್ರೀಕರಣ ಮಾಡಿತ್ತು ಚಿತ್ರತಂಡ. ಈ ವೇಳೆ ನಯನತಾರಾ, ಬಾಲಿವುಡ್ ನಟ, ಹಾಲಿವುಡ್ ನಟರುಗಳು ಬೆಂಗಳೂರಿಗೆ ಬಂದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ಇದೀಗ ಟಾಕ್ಸಿಕ್ ಟೀಂ ಮುಂಬೈನತ್ತ ಮುಖ ಮಾಡಿದೆ. ಮುಂಬೈನಲ್ಲಿ 45 ದಿನಗಳ ಕಾಲ ಸತತವಾಗಿ ಚಿತ್ರೀಕರಣ ನಡೆಸಲಿದೆ. ಮುಂಬೈನಲ್ಲಿ ಕೆಲವು ನಟ-ನಟಿಯರು ‘ಟಾಕ್ಸಿಕ್’ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಅದರಲ್ಲೂ ವಿಶೇಷವಾಗಿ ಸಿನಿಮಾದ ನಾಯಕಿ ಕಿಯಾರಾ ಅಡ್ವಾಣಿ, ‘ಟಾಕ್ಸಿಕ್’ ಚಿತ್ರತಂಡವನ್ನು ಸೇರಿಕೊಳ್ಳಲಿದ್ದು, ಕಿಯಾರಾ ಅವರು 45 ದಿನವೂ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.
ಕಿಯಾರಾ ನಟಿಸಲಿರುವ ಎಲ್ಲ ದೃಶ್ಯಗಳ ಚಿತ್ರೀಕರಣವನ್ನು ಈ 45 ದಿನಗಳಲ್ಲಿಯೇ ಪೂರ್ಣಗೊಳಿಸಲಿದೆ ಚಿತ್ರತಂಡ. ಯಶ್ ಸಹ ಲುಕ್ ಬದಲಾಯಿಸಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಖ್ಯವಾಗಿ ಯಶ್ ಮತ್ತು ಕಿಯಾರಾ ನಡುವಿನ ರೋಮ್ಯಾಂಟಿಕ್ ದೃಶ್ಯಗಳನ್ನು ಮುಂಬೈನಲ್ಲಿ ಚಿತ್ರೀಕರಣ ನಡೆಸಲು ನಿರ್ದೇಶಕ ಗೀತು ಮೋಹನ್ ದಾಸ್ ಅವರು ಬಯಸಿದ್ದು,. ಮಳೆ ವಾತಾವರಣ ನೋಡಿಕೊಂಡು ದೀಪಾವಳಿ ಮೊದಲು ಅಥವಾ ನಂತರ ಚಿತ್ರೀಕರಣ ಪ್ರಾರಂಭಿಸಲು ಚಿತ್ರತಂಡ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
Leave a Comment