ಇಂದು ವಿಶ್ವ ದೂರದರ್ಶನ ದಿನ; ಈ ದಿನದ ಆಚರಣೆ, ಇತಿಹಾಸದ ಬಗ್ಗೆ ಮಾಹಿತಿ ಇಲ್ಲಿದೆ
ನ್ಯೂಸ್ ಆ್ಯರೋ: ಪ್ರತಿ ವರ್ಷ ನವೆಂಬರ್ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಣೆ ಮಾಡಲಾಗುತ್ತದೆ. ಅಂತರ್ಜಾಲದ ಸಂಪರ್ಕದಿಂದಾಗಿ ಲ್ಯಾಪ್ ಟಾಪ್ ಮತ್ತು ಮೊಬೈಲ್ ಸ್ಕ್ರೀನ್‌ಗಳಲ್ಲೇ ಅತೀ ಹೆಚ್ಚು ಸಮಯ ಕಳೆಯುತ್ತಿರುವ ಇಂದಿನ ಯುಗದಲ್ಲಿ, ಟೆಲಿವಿಷನ್ ಅಥವಾ ದೂರದರ್ಶನ ಇನ್ನು ತನ್ನ ಮಹತ್ವವನ್ನು ಉಳಿಸಿಕೊಂಡಿದೆ ಎಂದರೆ ನಂಬಲೇಬೇಕು.
ವಿಶ್ವ ದೂರದರ್ಶನ ದಿನ ಅಥವಾ ವಿಶ್ವ ಟೆಲಿವಿಷನ್ ದಿನವನ್ನು ನಮ್ಮ ಜೀವನದಲ್ಲಿ ದೂರದರ್ಶನದ ಮೌಲ್ಯವನ್ನು ಮತ್ತು ಪ್ರಭಾವವನ್ನು ಗುರುತಿಸುವ ದಿನವಾಗಿದೆ. ದೂರದರ್ಶನವು ಸಮಾಜದಲ್ಲಿ ಮತ್ತು ವ್ಯಕ್ತಿಯ ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ದೂರದರ್ಶನವನ್ನು ಅವಿಷ್ಕಾರದಿಂದಾಗಿ ಜಗತ್ತನ್ನು ಕ್ರಾಂತಿಗೊಳಿಸುವುದರ ಜೊತೆಗೆ ಮನರಂಜನೆ, ಶಿಕ್ಷಣ, ಸುದ್ದಿ ಮತ್ತು ರಾಜಕೀಯ ಚಟುವಟಿಕೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆಯುವ ಸಮೂಹ ಸಂವಹನದ ಪ್ರಬಲ ಮಾಧ್ಯಮವಾಗಿ ದೂರದರ್ಶನ ಬೆಳೆದುನಿಂತಿದೆ.
ವಿಶ್ವ ದೂರದರ್ಶನ ದಿನದ ಇತಿಹಾಸ
ವಿಶ್ವದ ಮೊದಲ ಟೆಲಿವಿಷನ್ ಪೋರಂ ಡಿಸೆಂಬರ್, 1996 ರಲ್ಲಿ ನಡೆಯಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನವೆಂಬರ್ 21ನ್ನು ವಿಶ್ವ ದೂರದರ್ಶನ ದಿನವನ್ನಾಗಿ ಆಚರಿಸುವುದಕ್ಕೆ ತಿರ್ಮಾನ ಮಾಡಲಾಯಿತು. ಸಂಹವನ ಮತ್ತು ಜಾಗತೀಕರಣದಲ್ಲಿ ದೂರದರ್ಶನ ವಹಿಸುವ ಪಾತ್ರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಜೊತೆಗೆ ಜಾಗತಿಕವಾಗಿ ಸಾಕಷ್ಟು ಭೇಟಿಗಳು ಮತ್ತು ಸಭೆಗಳು ಈ ದಿನದಂದು ನಡೆಯುತ್ತವೆ. 1927 ರಲ್ಲಿ ಅಮೇರಿಕನ್ ಸಂಶೋಧಕ ಫಿಲೋ ಟೇಲರ್ ಫಾನ್ಸ್ ವರ್ತ್ ವಿಶ್ವದ ಮೊದಲ ಎಲೆಕ್ಷ್ರಾನಿಕ್ ದೂರದರ್ಶನವನ್ನು ಕಂಡುಹಿಡಿದರು. ಒಂದು ವರ್ಷದ ನಂತರ ಚಾರ್ಲ್ಸ್ ಫ್ರಾನ್ಸಿಸ್ ಜೆಂಕಿನ್ಸ್ ರಚಿಸಿದ ಮೊದಲ ಮೆಕ್ಯಾನಿಕಲ್ ಟೆಲಿವಿಷನ್ ಸ್ಟೇಷನ್ ತನ್ನ ಮೊದಲ ಪ್ರಸಾರವನ್ನು ಪ್ರಸಾರ ಮಾಡಿತು.
ವಿಶ್ವ ದೂರದರ್ಶನ ದಿನ 2022 ನ್ನು ಯಾವುದೇ ಅಧಿಕೃತ ಥೀಮ್‌ನೊಂದಿಗೆ ಆಚರಣೆ ಮಾಡುತ್ತಿಲ್ಲ. ಟೆಲಿವಿಷನ್ ಅವಿಷ್ಕಾರವನ್ನು ನೆನಪು ಮಾಡಿಕೊಳ್ಳುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
ದೂರದರ್ಶನ ಪ್ರವರ್ತಕ ಫಿಲೋ ಟೇಲರ್ ಫಾನ್ಸ್ ವರ್ತ್:
ಅಮೇರಿಕಾದ ವಿಜ್ಞಾನಿ ಫಿಲೋ ಟೇಲರ್ ಫಾನ್ಸ್ ವರ್ತ್ 1927 ರಲ್ಲಿ ಮೊದಲ ಬಾರಿಗೆ ಸಂಪೂರ್ಣ ಕ್ರಿಯಾತ್ಮಕ ವಿಡಿಯೋ ಕ್ಯಾಮರಾ ಟ್ಯೂಬ್‌ನ ಅವಿಷ್ಕಾರ ಮಾಡಿದರು, 21 ವರ್ಷದ ಈ ವ್ಯಕ್ತಿ ತನ್ನ ಹದಿನಾಲ್ಕನೇ ವಯಸ್ಸಿನವರೆಗೂ ಮನೆಯಲ್ಲಿ ವಿದ್ಯುತ್ ಇಲ್ಲದೆ ವಾಸವಿದ್ದರಂತೆ. ಇಂದು ಸಂಪೂರ್ಣ ಎಲೆಕ್ಟ್ರಾನಿಕ್ ಟೆಲಿವಿಷನ್ ಸಿಸ್ಟಮ್ ಆಗಿತ್ತು. ಅದೇ ಕಾರಣಕ್ಕೆ ಈ ವ್ಯಕ್ತಿಯನ್ನು ದೂರದರ್ಶನದ ಪ್ರವರ್ತಕ ಎಂದು ಕರೆಯಲಾಗುತ್ತದೆ.
ವಿಶ್ವ ದೂರದರ್ಶನ ದಿನದ ಮಹತ್ವ ಹಾಗೂ ಆಚರಣೆ
ಇಂದು ಮಾನವನ ಜೀವನದಲ್ಲಿ ದೂರದರ್ಶನದ ಪಾತ್ರ ಬಹುಮುಖ್ಯವಾಗಿದೆ. ಟೆಲಿವಿಷನ್ ಮನರಂಜನೆಗೆ ಮೂಲ ಸೀಮಿತವಾಗಿಲ್ಲ, ದೇಶ ವಿದೇಶಗಳಲ್ಲಿ ನಡೆಯುವ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುತ್ತದೆ. ಈ ದೂರದರ್ಶನದ ಆವಿಷ್ಕಾರ ಮತ್ತು ನಮ್ಮ ದೈನಂದಿನ ಜೀವನದಲ್ಲಿ ಅದು ವಹಿಸುವ ಪಾತ್ರವನ್ನು ಗುರುತಿಸಲು ವಿಶ್ವ ದೂರದರ್ಶನ ದಿನವನ್ನು ಸ್ಮರಿಸಲಾಗುತ್ತದೆ. ಮುದ್ರಣ ಮಾಧ್ಯಮ, ಪ್ರಸಾರ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ದೂರದರ್ಶನದ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬರಹಗಾರರು ಹಂಚಿಕೊಳ್ಳುತ್ತಾರೆ. ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಸಂಸ್ಥೆಗಳು ಉಪನ್ಯಾಸ ಕಾರ‍್ಯಕ್ರಮಗಳು ಸೇರಿದಂತೆ ಇನ್ನಿತ್ತರ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ
Leave a Comment