ʼಬಿಜೆಪಿ ಪರ ಪ್ರಚಾರ ಮಾಡುವೆʼ ಎಂದ ಕೇಜ್ರಿವಾಲ್; ​​ಆದ್ರೆ ಪಿಎಂ ಮೋದಿ ಈ ಕೆಲಸ ಮಾಡಬೇಕಂತೆ

Arvind Kejriwal
Spread the love

ನ್ಯೂಸ್ ಆ್ಯರೋ: ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಸವಾಲು ಹಾಕಿದ್ದಾರೆ. “ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಉಚಿತ ವಿದ್ಯುತ್​ ನೀಡಿದಲ್ಲಿ ಕೇಸರಿ ಪಡೆಯ ಪರವಾಗಿಯೇ ಚುನಾವಣಾ ಪ್ರಚಾರ” ಮಾಡುವುದಾಗಿ ಹೇಳಿದ್ದಾರೆ.

ಆಪ್​ ಪಕ್ಷದಿಂದ ಭಾನುವಾರ ಹಮ್ಮಿಕೊಂಡಿದ್ದ ಜನತಾ ಕಿ ಅದಾಲತ್​​ನಲ್ಲಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಗಳು ವಿಫಲವಾಗಿವೆ. ಹರಿಯಾಣ ಮತ್ತು ಜಮ್ಮು-ಕಾಶ್ಮೀರದಲ್ಲಿ ಸೋಲಾಗಲಿದೆ. ನವೆಂಬರ್‌ನಲ್ಲಿ ಜಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅವುಗಳ ಜೊತೆಗೆ ದೆಹಲಿ ವಿಧಾನಸಭಾ ಚುನಾವಣೆಯನ್ನೂ ನಡೆಸಿ. ಇದಕ್ಕೆ ಎಎಪಿ ಸಿದ್ಧವಾಗಿದೆ ಎಂದು ಹೇಳಿದರು.

22 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಹಣದುಬ್ಬರ, ಭ್ರಷ್ಟಾಚಾರ ಮತ್ತು ನಿರುದ್ಯೋಗ ಆ ರಾಜ್ಯಗಳಲ್ಲಿ ಹೆಚ್ಚಾಗಿದೆ. ಶೀಘ್ರದಲ್ಲೇ ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲೂ ಡಬಲ್​ ಎಂಜಿನ್​ ಪತನವಾಗಲಿದೆ. ಇದಕ್ಕೆ ಇಂಬು ನೀಡುವಂತೆ ಎಕ್ಸಿಟ್​​ ಪೋಲ್​​ ಸಮೀಕ್ಷೆಗಳು ಬಂದಿವೆ ಎಂದರು.

ಡಬಲ್ ಇಂಜಿನ್ ಮಾದರಿಯ ಸರ್ಕಾರವನ್ನು ಡಬಲ್ ಲೂಟಿ ಮತ್ತು ಡಬಲ್ ಭ್ರಷ್ಟಾಚಾರ ಎಂದು ಲೇವಡಿ ಮಾಡಿದ ಮಾಜಿ ಸಿಎಂ, ದೆಹಲಿಯ ಬಸ್ ಚಾಲಕರು, ಡೇಟಾ ಎಂಟ್ರಿ ಆಪರೇಟರ್‌ಗಳು, ಹೋಮ್ ಗಾರ್ಡ್‌ಗಳ ಸಂಬಳವನ್ನು ಸ್ಥಗಿತಗೊಳಿಸಿರುವ ಬಿಜೆಪಿ ಬಡವರ ವಿರೋಧಿ ಎಂದು ಆರೋಪಿಸಿದರು.

Leave a Comment

Leave a Reply

Your email address will not be published. Required fields are marked *

error: Content is protected !!