Rare Case : ಪತಿಯ ಜೊತೆ ದೈಹಿಕ ಸಂಪರ್ಕ ನಡೆಸಲು ಶುಲ್ಕ ವಿಧಿಸಿದ ಪತ್ನಿ – ಕೋರ್ಟ್ ಮೊರೆ ಹೋದ ಪತಿಗೆ ಕೋರ್ಟ್ ಹೇಳಿದ್ದೇನು?
ನ್ಯೂಸ್ ಆ್ಯರೋ : ಮದುವೆಯಾದ ಬಳಿಕ ದಂಪತಿಗಳ ನಡುವೆ ದೈಹಿಕ ಸಂಪರ್ಕ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಅದನ್ನು ಪತಿ ಅಥವಾ ಪತ್ನಿ ಯಾರೂ ವಿರೋಧಿಸುವಂತಿಲ್ಲ. ಆದರೆ ಪತ್ನಿಯೊಬ್ಬಳು ತನ್ನ ಪತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಶುಲ್ಕ ವಿಧಿಸುತ್ತಿದ್ದ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದ್ದು, ಪತ್ನಿಯ ಈ ನಡೆಯಿಂದ ಬೇಸತ್ತ ಪತಿ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಅದಕ್ಕೆ ಈಗ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ.
2014ರಲ್ಲಿ ಈ ಜೋಡಿ ವಿವಾಹವಾಗಿದ್ದು ಇಬ್ಬರು ಮಕ್ಕಳು ಸಹ ಇದ್ದಾರೆ. ಮೂರು ವರ್ಷಗಳ ಕಾಲ ಎಲ್ಲವೂ ಸರಿ ಇದ್ದು 2017 ರಲ್ಲಿ ಆತನ ಪತ್ನಿ ತಿಂಗಳಿಗೆ ಒಮ್ಮೆ ಮಾತ್ರ ಲೈಂಗಿಕ ಕ್ರಿಯೆ ಎಂಬ ಷರತ್ತನ್ನು ವಿಧಿಸಿದ್ದಳಂತೆ. ಆನಂತರ 2019 ರಲ್ಲಿ ಪತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ನಿರಾಕರಿಸಿದ್ದು, ಮಾತನಾಡುವುದನ್ನೂ ಬಿಟ್ಟಿದ್ದಾಳೆ.
ಆದರೆ ಪತಿಯ ಬಲವಂತದ ಮೇರೆಗೆ ಸಮ್ಮತಿ ಸೂಚಿಸಿದ ಆಕೆ ಒಮ್ಮೆ ಲೈಂಗಿಕ ಸಂಪರ್ಕ ಹೊಂದಲು 1,500 ರೂಪಾಯಿ ಶುಲ್ಕ (ಅಂದಾಜು 15 ಡಾಲರ್) ವಿಧಿಸಲು ಆರಂಭಿಸಿದ್ದಳಂತೆ. ಇದರಿಂದ ಬೇಸತ್ತ ಪತಿ, ಆ ಸಂದರ್ಭದಲ್ಲಿ ನ್ಯಾಯಾಲಯದ ಮೆಟ್ಟಿಲು ಏರಿದ್ದು, ಬಳಿಕ ಪರಸ್ಪರ ಮಾತುಕತೆ ಮೇರೆಗೆ ಪ್ರಕರಣ ಸುಖಾಂತ್ಯಗೊಂಡಿತ್ತು.
ಆದರೆ ಪರಿಸ್ಥಿತಿ ಮತ್ತೆ ವಿಕೋಪಕ್ಕೆ ತಿರುಗಿದ್ದು, ಪತಿಯೊಂದಿಗೆ ಸಂಪರ್ಕ ಸಾಧಿಸಲು ಆಕೆ ಮೊಬೈಲ್ ಮೆಸೇಜ್ ಹಾಗೂ ಸನ್ನೆಯ ಭಾಷೆ ಉಪಯೋಗಿಸುತ್ತಿದ್ದಳಂತೆ. ಇದರಿಂದ ಬೇಸತ್ತ ಪತಿ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದೀಗ ಆತನ ವಿಚ್ಛೇದನ ಅರ್ಜಿಯನ್ನು ಮನ್ನಿಸಿರುವ ನ್ಯಾಯಾಲಯ ವಿವಾಹ ಬಂಧ ಕಡಿದುಕೊಳ್ಳಲು ಸಮ್ಮತಿ ಸೂಚಿಸಿದೆ.
Leave a Comment