ಇಂದು ಕನಕದಾಸ ಜಯಂತಿ, ಈ ದಿನ ಯಾಕಿಷ್ಟು ವಿಶೇಷ ಗೊತ್ತಾ?

Kanakadasa Jayanthi
Spread the love

ಶ್ರೀ ಕನಕದಾಸರು ಕರ್ನಾಟಕದಲ್ಲಿ 15, 16 ನೇ ಶತಮಾನ ದಲ್ಲಿ ಜನಪ್ರಿಯವಾದ ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಇವರು ಹಲವಾರು ವಚನಗಳನ್ನು ನೀಡಿದ್ದಾರೆ. ನವೆಂಬರ್​ 18 ರಂದು ಕನಕದಾಸ ಜಯಂತಿಯನ್ನು ನಾಡಿನಲ್ಲಿ ಆಚರಿಸಲಾಗುತ್ತದೆ.

ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿಟ್ಟವರು. ಬೀರಪ್ಪನಾಯಕ ಮತ್ತು ಬಚ್ಚಮ್ಮರಿಗೆ ಒಬ್ಬ ಮಗ ಜನಿಸಿದ. ತಿರುಪತಿ ತಿಮ್ಮಪ್ಪನ ಆಶೀರ್ವಾದ ಎಂದು ಅವರು ತಮ್ಮ ಮಗುವಿಗೆ ತಿಮ್ಮಪ್ಪಎಂದೇ ನಾಮಕರಣ ಮಾಡಿದರು.

Kanakadasa Jayanthi

16ನೇ ಶತಮಾನ ದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರೆ ತಪ್ಪಾಗಲಾರದು. ಕನಕದಾಸರು ವೃತ್ತಿಯಲ್ಲಿ ಸೈನಿಕರಾಗಿದ್ದರು. ಒಮ್ಮೆ ಯುದ್ಧದಲ್ಲಿ ಹೆಚ್ಚು ಗಾಯಗೊಂಡಿದ್ದಾಗ ಬೇಸರಗೊಂಡು ಯುದ್ಧವನ್ನು ಬಿಟ್ಟು ದೇವರನಾಮಗಳನ್ನು ಬರೆದು ಪರಮಾತ್ಮನನ್ನು ಧ್ಯಾನಿಸತೊಡಗಿದರು ಎಂದು ಪುರಾಣ ಸಾರುತ್ತದೆ.

ವ್ಯಾಸರಾಯರಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು, ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರಾಗಿದ್ದರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿ ಪದ್ಧತಿಯ ತಾರತಮ್ಯಗಳನ್ನು ತೊಡೆದು ಹಾಕಿದರು. ಇವರ ಕೀರ್ತನೆಗಳ ಅಂಕಿತನಾಮ “ಕಾಗಿನೆಲೆಯ ಆದಿಕೇಶವ ರಾಯ” ಎಂಬುದಾಗಿದೆ.

ಕನಕದಾಸರ ಕೃತಿಗಳು ಯಾವುವು.?

ಕನಕದಾಸರ ಕಾವ್ಯಗಳು ಕರ್ನಾಟಕ ಶೈಲಿಯಲ್ಲಿ ರಚನೆಯಾದ ಕಾವ್ಯಗಳಾಗಿವೆ. ಅವರು ತಮ್ಮ ಎಲ್ಲಾ ಹಾಡುಗಳಿಗೆ ‘ಕಾಗಿನೆಲೆ ಆದಿಕೇಶವ’ ಎಂಬ ಕಾವ್ಯನಾಮವನ್ನು ಬಳಸಿದ್ದಾರೆ. ನಳಚರಿತ್ರೆ, ಹರಿಭಕ್ತಿಸಾರ, ನೃಸಿಂಹಸ್ತವ, ರಾಮಧಾನ್ಯಚರಿತ್ರೆ ಮತ್ತು ಮೋಹನತರಂಗಿಣಿ ಅವರ ಕೆಲವು ಪ್ರಸಿದ್ಧ ಕೃತಿಗಳು.

FExxk3VVgAMgy0R

ಉಡುಪಿಯ ಶ್ರೀಕೃಷ್ಣನಿಗೂ ಕನಕದಾಸರಿಗೂ ಅವಿನಾಭಾವ ಸಂಬಂಧ. ಒಮ್ಮೆ ಕನಕದಾಸರು ಶ್ರೀಕೃಷ್ಣನ ದರ್ಶನಕ್ಕೆ ಉಡುಪಿಗೆ ಹೋದಾಗ ಕರ್ಮಠ ಪೂಜಾರಿಗಳು ಅವರನ್ನು ಒಳಗೆ ಬಿಡಲಿಲ್ಲವಂತೆ. ಆಗ ಕನಕದಾಸರು ದೇವಸ್ಥಾನದ ಹಿಂದಿನಿಂದ ಶ್ರೀಕೃಷ್ಣನ ಕೀರ್ತನೆಯನ್ನು ಹಾಡಲು ಆರಂಭಿಸಿದರು. ಆದಾಗ ಆದ ಪವಾಡ ಅಂದ್ರೆ ಶ್ರೀಕೃಷ್ಣ ಹಿಂದೆ ತಿರುಗಿ ಗೋಡೆಯ ಕಿಂಡಿಯ ಮೂಲಕ ದರ್ಶನ ನೀಡಿದನಂತೆ. ಈಗಲೂ ಉಡುಪಿ ಶ್ರೀ ಕೃಷ್ಟ ಮಠಕ್ಕೆ ಭೇಟಿ ನೀಡಿದರೆ ಅಲ್ಲಿ ಕನಕನ ಕಿಂಡಿ ಎಂದು ಕಾಣಬಹುದಾಗಿದೆ.

New Project 6

ಭಕ್ತಿ, ಕವಿತ್ವ ಮತ್ತು ಸಂಗೀತದಲ್ಲಿಯ ಸಾಧನೆಗೆ ಜಾತಿ ಎಂದೂ ತೊಡಕಾಗುವುದಿಲ್ಲ ಎನ್ನುವುದಕ್ಕೆ ಕನಕದಾಸರ ಜೀವನ ಒಂದು ಉದಾಹರಣೆ ಎನ್ನಬಹುದು. ತಮ್ಮ ಲೌಕಿಕ ಜೀವನದಿಂದ ಆದ್ಯಾತ್ಮ ಜೀವನಕ್ಕೆ ಸಾಗುತ್ತಾರೆ. ಕನಕದಾಸರು ನಡೆದ ಭಕ್ತಿ ಆಂದೋಲನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಯಾಕೆಂದರೆ ಅವರಿಗೆ ದೇವರ ಪೂಜೆಯಲ್ಲಿ, ದೇವಸ್ಥಾನಗಳ ನಿಯಮಗಳಲ್ಲಿ ಜಾತಿಗಳನ್ನು ತರುವುದು ಇಷ್ಟವಿರಲಿಲ್ಲ. ಧಾರ್ಮಿಕ ಆಚರಣೆಗಳಲ್ಲಿ ಜಾತಿ ಪದ್ಧತಿಯನ್ನು ಅವರು ತಿರಸ್ಕರಿಸಿದ್ದರು.

ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಉಗಾಭೋಗಗಳು, ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸುವುದು ಅಲ್ಲದೆ ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ಮೂಲಕ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಅವರು ಐದು ಮುಖ್ಯ ಕಾವ್ಯ ಕೃತಿಗಳು ಮೋಹನ ತರಂಗಿಣಿ, ನಳ ಚರಿತ್ರೆ, ರಾಮ ಧಾನ್ಯ ಚರಿತೆ, ಹರಿ ಭಕ್ತ ಸಾರ ಇತ್ಯಾದಿ ರಚಿಸಿದ್ದಾರೆ. 1109ರಲ್ಲಿ ತುಂಬು 100 ವರ್ಷ ಪೂರ್ಣವಾದ ನಂತರ ಮರಣ ಹೊಂದಿದರು ಎಂಬುದು ಇತಿಹಾಸವಿದೆ.

ಕರ್ನಾಟಕ ಸರ್ಕಾರ ಕನಕದಾಸರ ಜಯಂತಿ ಆಚರಣೆಯನ್ನು ಸರ್ಕಾರಿ ಆಚರಣೆಯನ್ನಾಗಿ 2008ರಲ್ಲಿ ಘೋಷಿಸಿತು. ಹೀಗಾಗಿ ಪ್ರತಿ ವರ್ಷ ಕನಕದಾಸ ಜಯಂತಿ ಅಧಿಕೃತವಾಗಿ ಸರ್ಕಾರವೇ ಆಚರಿಸುತ್ತ ಬಂದಿದೆ.

Leave a Comment

Leave a Reply

Your email address will not be published. Required fields are marked *

error: Content is protected !!