ವಾಯ್ಸ್ ಮೆಸೇಜ್ ಟ್ರಾನ್ಸ್‌ಸ್ಕ್ರಿಪ್ಟ್; ಮತ್ತೊಂದು ಹೊಸ ಫೀಚರ್​ ಪರಿಚಯಿಸಿದ ವಾಟ್ಸ್‌ಆ್ಯಪ್​

Whatsapp
Spread the love

ನ್ಯೂಸ್ ಆ್ಯರೋ: ಮೆಟಾ ಒಡೆತನ ವಾಟ್ಸ್‌ಆ್ಯಪ್ ವಾಯ್ಸ್ ಮೆಸೇಜ್ ಟ್ರಾನ್ಸ್‌ಸ್ಕ್ರಿಪ್ಟ್ಸ್​ ಎಂಬ​ ಹೊಸ ಫೀಚರ್​ ಹೊರತಂದಿದೆ. ಇದರ​ ಸಹಾಯದಿಂದ ನೀವು ವಾಯ್ಸ್​ ಮೆಸೇಜ್​ ಅನ್ನು ಟೆಕ್ಸ್ಟ್​ ರೂಪದಲ್ಲಿ ಬದಲಾಯಿಸಬಹುದು. ಮುಂದಿನ ವಾರದಲ್ಲಿ ಬಳಕೆಗೆ ಲಭ್ಯವಾಗಲಿದ್ದು, ಕೆಲ ಆಯ್ದ ಭಾಷಗಳು ಮಾತ್ರ ಇದರಲ್ಲಿ ಕಾಣಿಸುತ್ತವೆ.

ಬ್ಲಾಗ್ ಪೋಸ್ಟ್‌ನಲ್ಲಿ, ಧ್ವನಿ ಸಂದೇಶ ಕಳುಹಿಸುವುದರಿಂದ ಸ್ನೇಹಿತರು ಮತ್ತು ಕುಟುಂಬದೊಂದಿಗಿನ ಬಂಧ ಇನ್ನಷ್ಟು ವೈಯಕ್ತಿಕಗೊಳ್ಳಲಿದೆ ಎಂದು ವಾಟ್ಸ್‌ಆ್ಯಪ್​ ಹೇಳಿದೆ. ನೀವು ನಿಮ್ಮ ಕುಟುಂಬ, ಸ್ನೇಹಿತರಿಂದ ದೂರವಿದ್ದಾಗ ಪ್ರೀತಿಪಾತ್ರರ ಧ್ವನಿ ಕೇಳುವುದರಿಂದ ಸಂತೋಷ ಇಮ್ಮುಡಿಗೊಳ್ಳುತ್ತದೆ. ಆದ್ರೆ ಕೆಲವೊಮ್ಮೆ ಪ್ರಯಾಣ ಅಥವಾ ಇನ್ನಿತರ ಚಟುವಟಿಕೆಗಳ ಮಧ್ಯೆ ಕಾರ್ಯ ನಿರ್ವಹಿಸುತ್ತಿರುವಾಗ ಅವರ ಧ್ವನಿಯನ್ನು ಕೇಳಲು ಸಾಧ್ಯವಾಗುವುದಿಲ್ಲ.

ಅಂತಹ ಸಂದರ್ಭಗಳಲ್ಲಿ ‘ವಾಯ್ಸ್ ಮೆಸೇಜ್ ಟ್ರಾನ್ಸ್‌ಕ್ರಿಪ್ಟ್‌’ಗಳನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ವೈಯಕ್ತಿಕ ಮೆಸೇಜ್​ಗಳನ್ನು ನೀವು ಅಲ್ಲದೇ ಬೇರೆಯಾರಿಂದಲೂ ಓದಲು ಮತ್ತು ಕೇಳಲು ಸಾಧ್ಯವಿಲ್ಲ ಎಂದು ಭದ್ರತೆಯ ಕುರಿತು ಕಂಪನಿ ತಿಳಿಸಿದೆ.

ಈ ಫೀಚರ್​ ಅನ್ನು ಆನ್​ ಮಾಡಲು ಮೊದಲು ಸೆಟ್ಟಿಂಗ್​​ಗೆ ಎಂಟ್ರಿ ಕೊಡಿ ನಂತರ ಚಾಟ್ಸ್​ ವಿಭಾಗಕ್ಕೆ ತೆರಳಿ ಅಲ್ಲಿವಾಯ್ಸ್ ಮೆಸೇಜ್ ಟ್ರಾನ್ಸ್‌ಕ್ರಿಪ್ಟ್ಸ್‌ಗೆ ಹೋಗಬೇಕು. ಅಲ್ಲಿ ಸುಲಭವಾಗಿ ಟ್ರಾನ್ಸ್‌ಕ್ರಿಪ್ಟ್ಸ್ ಆನ್ ಅಥವಾ ಆಫ್ ಮಾಡಬಹುದು. ನಿಮ್ಮ ಪ್ರತಿಲಿಪಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಮೆಸೇಜ್​ ಮೇಲೆ ದೀರ್ಘವಾಗಿ ಒತ್ತುವ ಮೂಲಕ ಮತ್ತು ‘transcribe’ ಮೇಲೆ ಟ್ಯಾಪ್ ಮಾಡುವ ಮೂಲಕ ಈ ಫೀಚರ್​ ಅನ್ನು ಆಯ್ಕೆ ಮಾಡಬಹುದು. ಈ ಅನುಭವವನ್ನು ನಿರ್ಮಿಸಲು, ಅದನ್ನು ಇನ್ನಷ್ಟು ಉತ್ತಮಗೊಳಿಸಲು ಮತ್ತು ಹೆಚ್ಚು ತಡೆರಹಿತವಾಗಿಸಲು ನಾವು ಉತ್ಸುಕರಾಗಿದ್ದೇವೆ ಎಂದು ವಾಟ್ಸ್‌ಆ್ಯಪ್​ ಹೇಳಿದೆ. ಮೆಟಾ ಮಾಲೀಕತ್ವದ ಕಂಪನಿ ಇತ್ತೀಚೆಗೆ ಮೆಸೇಜ್​ ಡ್ರಾಫ್ಟ್‌ಗಳ ವೈಶಿಷ್ಟ್ಯ ಪರಿಚಯಿಸಿತ್ತು.

Leave a Comment

Leave a Reply

Your email address will not be published. Required fields are marked *

error: Content is protected !!