ಮತ್ತೊಬ್ಬ ಸ್ಟಾರ್ ಕ್ರಿಕೆಟಿಗನ ಸಂಸಾರದಲ್ಲಿ ಬಿರುಗಾಳಿ; 20 ವರ್ಷಗಳ ದಾಂಪತ್ಯ ಅಂತ್ಯ!

Virender Sehwag
Spread the love

ನ್ಯೂಸ್ ಆ್ಯರೋ: ಟೀಮ್‌ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಹಾಗೂ ಸ್ಪೋಟಕ ಬ್ಯಾಟ್ಸ್‌ಮನ್‌ ಆಗಿದ್ದ ವೀರೇಂದ್ರ ಸೆಹ್ವಾಗ್‌ ಜೀವನದಲ್ಲೂ ವಿಚ್ಚೇದನ ಬಿರುಗಾಳಿ ಎದ್ದಿದೆ. ಟೀಮ್ ಇಂಡಿಯಾ ಆಟಗಾರ ಯುಜ್ವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ವಿಚ್ಛೇದನ ವದಂತಿಗಳ ಬೆನ್ನಲ್ಲೇ, ಇದೀಗ ವೀರೇಂದ್ರ ಸೆಹ್ವಾಗ್ ವೈವಾಹಿಕ ಜೀವನಕ್ಕೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. 20 ವರ್ಷಗಳ ಸುಧೀರ್ಘ ದಾಂಪತ್ಯದ ಬಳಿಕ ವೀರೇಂದ್ರ ಸೇಹ್ವಾಗ್ ಅವರು ತಮ್ಮ ಪತ್ನಿ ಆರತಿ ಅಹ್ಲಾವತ್‌ಗೆ ವಿಚ್ಛೇದನ ನೀಡುವ ಸಾಧ್ಯತೆ ಇದೆ ಎನ್ನುವ ಸುದ್ದಿ ಹರಿದಾಡುತ್ತಿದೆ. 2004ರಲ್ಲಿ ವಿವಾಹವಾಗಿದ್ದ ಜೋಡಿ ಇನ್ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಈಗಾಗಲೇ ಅನ್‌ಫಾಲೋ ಮಾಡಿಕೊಂಡಿದ್ದಾರೆ. ಇದರೊಂದಿಗೆ ಇವರಿಬ್ಬರ ಸಂಬಂಧದ ಕುರಿತು ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ.

Virender Sehwag Aarti Sehwag 242011822 16x9 0

ಇವರ ಕುಟುಂಬದ ಆಪ್ತ ಮೂಲಗಳ ಪ್ರಕಾರ, ಈಗಾಗಲೇ ಹಲವು ತಿಂಗಳುಗಳಿಂದ ಇಬ್ಬರೂ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದು, ಶೀಘ್ರದಲ್ಲೇ ಇಬ್ಬರು ವಿಚ್ಛೇದನ ಖಚಿತವಾಗಬಹುದು ಎನ್ನಲಾಗಿದೆ. ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದಾಗಿಯೇ ಕ್ರಿಕೆಟ್‌ ವಲಯದಲ್ಲಿ ದೊಡ್ಡ ಹೆಸರು ಮಾಡಿದ್ದ ವೀರೇಂದ್ರ ಸೆಹ್ವಾಗ್‌ ಹಾಗೂ ಆರತಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

2007ರಲ್ಲಿ ಹಿರಿಯ ಪುತ್ರ ಆರ್ಯವೀರ್‌ ಜನಿಸಿದ್ದರೆ, 2010ರಲ್ಲಿ 2ನೇ ಪುತ್ರ ವೇದಾಂತ್‌ ಜನಿಸಿದ್ದ. ದೀರ್ಘ ಅವಧಿಯ ಕಾಲ ಜೊತೆಯಾಗಿಯೇ ಸಂಸಾರ ಮಾಡಿದ್ದರೂ ಕೂಡ ಇತ್ತೀಚಿನ ಬೆಳವಣಿಗಳು ಇವರಿಬ್ಬರ ನಡುವಿನ ಅಂತರ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ ಎಂದು ವರದಿಯಾಗಿದೆ.

Virendra

ಇತ್ತೀಚಿನ ಬೆಳವಣಿಗೆಗಳು ಹೆಚ್ಚುತ್ತಿರುವ ಅಂತರದ ಸುಳಿವು ನೀಡುತ್ತವೆ. ದೀಪಾವಳಿ ಆಚರಣೆಯ ಸಮಯದಲ್ಲಿ ವೀರೇಂದ್ರ ತಮ್ಮ ಪುತ್ರರು ಮತ್ತು ಅವರ ತಾಯಿಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಆದರೆ ಆ ಫೋಟೋದಲ್ಲಿ ಆರತಿಯ ಯಾವುದೇ ಉಲ್ಲೇಖ ಅಥವಾ ಚಿತ್ರಗಳು ಇರುವುದನ್ನು ಉಲ್ಲೇಖಿಸಿಲ್ಲ. ಈ ಎಲ್ಲಾ ಬೇಳವಣಿಗೆಯಿಂದ ಈ ಸ್ಟಾರ್ ದಂಪತಿ ವಿಚ್ಛೇದನ ಬಹುತೇಕ ಖಚಿತ ಎನ್ನಲಾಗಿದೆ.

Sehwag Aarti

ಸೆಹ್ವಾಗ್ ದಂಪತಿ 2000ನೇ ವರ್ಷದಲ್ಲಿ ಪ್ರೀತಿಯಲ್ಲಿ ಬೀಳುತ್ತಾರೆ. ಕೊನೆಗೆ 2004 ರಲ್ಲಿ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿವಾಸದಲ್ಲಿ ಆಯೋಜಿಸಲಾದ ಭವ್ಯ ವಿವಾಹದಲ್ಲಿ ಮದುವೆಯಾಗುತ್ತಾರೆ. ವೀರೇಂದ್ರ ಸೆಹ್ವಾಗ್ ಅವರ ಕ್ರಿಕೆಟ್ ಬದ್ಧತೆ ಮತ್ತು ಕೌಟುಂಬಿಕ ಜೀವನ ಎರಡನ್ನೂ ಸಮತೋಲನವಾಗಿ ನಿಭಾಯಿಸಿಕೊಂಡು ಬಂದಿದ್ದರು. ಅದಾಗ್ಯೂ, ಮೂಲಗಳ ಪ್ರಕಾರ ಶೀಘ್ರದಲ್ಲೇ ಅವರು ಡಿವೋರ್ಸ್ ಪಡೆಯಲಿದ್ದಾರೆ ಎಂದು ತಿಳಿಸಿವೆ.

Leave a Comment

Leave a Reply

Your email address will not be published. Required fields are marked *