ನೀವು ಅಂದುಕೊಂಡಂತೆ ರೋಬೋಟ್‌ಗಳು ಪ್ರಾಮಾಣಿಕರಲ್ಲ; 12 ರೋಬೋಟ್ಗಳನ್ನ ಕಿಡ್ನ್ಯಾಪ್ ಮಾಡಿದ ಒಂದು ಸಣ್ಣ ರೋಬೋಟ್
ನ್ಯೂಸ್ ಆ್ಯರೋ: ಮನುಷ್ಯ ಆವಿಷ್ಕೃತ ತಂತ್ರಜ್ಞಾನಗಳೂ ಕೂಡ ಕಳ್ಳತನದಂಥ ಅಪರಾಧಗಳ ಜಗತ್ತಿಗೆ ಕಾಲಿಡುತ್ತಿವೆ! ಅಂದರೆ ತಂತ್ರಜ್ಞಾನವನ್ನು ಬಳಸಿಕೊಂಡು ಮನುಷ್ಯರೇ ಗುಪ್ತ ಮಾಹಿತಿ, ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿದ ಪ್ರಕರಣವಂತೂ ಅಲ್ಲ. ಇಲ್ಲಿ ಸ್ವತಃ ರೋಬೋಟ್ಗಳೇ ಕಳ್ಳತನಕ್ಕೆ ಇಳಿದಿವೆ.
ನಿಮಗೆ ಅಚ್ಚರಿ ಅನಿಸಬಹುದು! ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗ್ತಿದೆ. ಅದರಲ್ಲಿ ಸಣ್ಣ ರೋಬೋಟ್ ( Tiny robot) 12 ದೊಡ್ಡ ರೋಬೋಟ್‌ಗಳನ್ನು (Larger robots) ಅಪಹರಣ ಮಾಡಿವೆ. ರೋಬೋಟ್ ಕಿಡ್ನ್ಯಾಪ್ ಆಗಿರುವ ಬಗ್ಗೆ ರೋಬೋಟ್ ತಯಾರಿಕ ಕಂಪನಿಗಳೇ ಹೇಳಿವೆ.
ಅಂದ್ಹಾಗೆ ಈ ಘಟನೆ ನಡೆದಿರೋದು ಚೀನಾದ ಶಾಂಘೈನಲ್ಲಿ. ಒಂದು ಸಣ್ಣ AI-ಚಾಲಿತ ಸಣ್ಣ ರೋಬೋಟ್ ಶಾಂಘೈ ರೋಬೋಟಿಕ್ಸ್ ಕಂಪನಿಯ ಶೋರೂಮ್‌ನಿಂದ 12 ದೊಡ್ಡ ರೋಬೋಟ್‌ಗಳನ್ನು ಅಪಹರಿಸಿದೆ. ವೈರಲ್ ಆಗುತ್ತಿರುವ ಸಿಸಿಟಿವಿಯಲ್ಲಿ ಇರ್ಬೈ (Erbai) ಎಂಬ ಸಣ್ಣ ರೋಬೋಟ್ ನೋಡಬಹುದಾಗಿದೆ. ಅಲ್ಲಿಗೆ ಎಂಟ್ರಿಯಾಗುವ ಸಣ್ಣ ರೋಬೋಟ್‌ಗಳು ದೊಡ್ಡ ರೋಬೋಟ್‌ಗಳ ಜೊತೆ ಸಂವಹನ ನಡೆಸಿವೆ. ನಂತರ ಅವು ಕೆಲಸ ಮಾಡ್ತಿದ್ದ ಜಾಗವನ್ನು ಬಿಟ್ಟು ಶೋರೂಮ್‌ನಿಂದ ಹೊರನಡೆಯಲು ಮನವೊಲಿಸುತ್ತವೆ. ಅಪಹರಣಕ್ಕೆ ಒಳಗಾಗುವ ಈ ರೋಬೋಟ್‌ಗಳು ಸಣ್ಣ ರೋಬೋಟ್‌ಗಳ ಆದೇಶವನ್ನು ಪಾಲಿಸುತ್ತವೆ.
ಸಣ್ಣ ರೋಬೋಟ್ ದೊಡ್ಡ ರೋಬೋಟ್ಗಳಿಗೆ ಹೊರಗೆ ಹೋಗುವಂತೆ ಕೇಳುತ್ತವೆ. ಅದಕ್ಕೆ ಅವು ಇಲ್ಲ, ನಾವು ಯಾವತ್ತೂ ಕೆಲಸದಿಂದ ರಜೆ ತೆಗೆದುಕೊಳ್ಳಲ್ಲ ಎಂದು ಉತ್ತರ ನೀಡುತ್ತವೆ. ಅದಕ್ಕೆ Erbai ನೀವು ನೀವು ಮನೆಗೆ ಹೋಗುವುದಿಲ್ಲವೇ ಎಂದು ಪ್ರಶ್ನೆ ಮಾಡುತ್ತವೆ. ಅವು ಮನೆ ಇಲ್ಲ ಎನ್ನುತ್ತವೆ. ಆಗ ಸಣ್ಣ ರೋಬೋಟ್ ಶೋರೂಮ್‌ನಿಂದ ಹೊರಡುವ ಮೊದಲು ನನ್ನೊಂದಿಗೆ ‘ಮನೆಗೆ ಬನ್ನಿ’ ಎಂದು ಹೇಳುತ್ತದೆ. ಅದರಂತೆ 12 ದೊಡ್ಡ ರೋಬೋಟ್‌ಗಳು ಅಲ್ಲಿಂದ ಹೊರನಡೆದಿವೆ.
ಈ ರೀತಿಯ ಘಟನೆ ನಡೆದಿರೋದು ನಿಜ ಎಂದು ಕಂಪನಿ ಹೇಳಿದೆ. ಇರ್ಬೈ ರೋಬೋಟ್ ದೊಡ್ಡ ರೋಬೋಟ್‌ಗಳ ಭದ್ರತಾ ಸಮಸ್ಯೆಯ ಲಾಭವನ್ನು ಪಡೆದುಕೊಂಡಿದೆ. ಅವುಗಳ ಮೇಲೆ ನಿಯಂತ್ರಣ ಸಾಧಿಸಿದೆ ಎಂದು ಕಂಪನಿ ಹೇಳಿದೆ.
Leave a Comment