ಈ ಚಿಕ್ಕ ಪ್ರಾಣಿ ಬಾಯಿಯಿಂದಲೇ ಕೆತ್ತಿ ಮರವನ್ನೇ ಉರುಳಿಸಿತು! – ನಿಬ್ಬೆರಗಾಗಿಸೋ ಈ ವಿಡಿಯೋ ನಿಮಗಾಗಿ…

ಈ ಚಿಕ್ಕ ಪ್ರಾಣಿ ಬಾಯಿಯಿಂದಲೇ ಕೆತ್ತಿ ಮರವನ್ನೇ ಉರುಳಿಸಿತು! – ನಿಬ್ಬೆರಗಾಗಿಸೋ ಈ ವಿಡಿಯೋ ನಿಮಗಾಗಿ…

ನ್ಯೂಸ್ ಆ್ಯರೋ : ಭಗವಂತ ಪ್ರತಿಯೊಂದು ಪ್ರಾಣಿಗೂ ಒಂದೊಂದು ಶಕ್ತಿ ನೀಡುತ್ತಾನೆ ಅನ್ನುವ ಮಾತಿದೆ. ಸದ್ಯ, ಇಲ್ಲೊಂದು ಸೌಮ್ಯ ಸ್ವಭಾವದ ಪುಟ್ಟ ಪ್ರಾಣಿಯಿದೆ. ಆದರೆ ಇದಕ್ಕಿರುವ ಶಕ್ತಿಯನ್ನು ನೋಡಿದರೆ ನೀವು ಆಶ್ಚರ್ಯ ಪಡೋದು ಗ್ಯಾರಂಟಿ. ನೋಡಲು ಇಲಿಯಂತೆ ಕಾಣುವ ಈ ಪ್ರಾಣಿ ಬೀವರ್ ಜಾತಿಗೆ ಸೇರುತ್ತದೆ. ಇದೀಗ ಈ ಬೀವರ್ ಬಾಯಿಂದಲೇ ಬೃಹತ್ ಮರವೊಂದನ್ನು ಕೆತ್ತಿ‌ನೆಲಕ್ಕುರುಳಿಸಿದೆ. ಈ ಪ್ರಾಣಿಯ ಶಕ್ತಿ ಪ್ರದರ್ಶನದ ವಿಡಿಯೋ ಸದ್ಯ, ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿಡಿಯೋ ನೋಡಿ ದಂಗಾಗಿದ್ದಾರೆ.

ಮೂರ್ತಿ ಚಿಕ್ಕದು, ಕೀರ್ತಿ ದೊಡ್ಡದು!

ಬೀವರ್ ನೋಡಲು ಇಲಿಯಂತಿದ್ದರೂ ಕೂಡ ಬಹಳಷ್ಟು ಶಕ್ತಿ ಶಾಲಿ. ಹೆಚ್ಚಾಗಿ ತೇವಾಂಶ ಇರುವ ಕಡೆ ವಾಸಿಸುವ ಇವುಗಳು 30 ಕೆ.ಜಿ ತೂಗುತ್ತವೆ. ಮನುಷ್ಯರು ಅಥವಾ ಬೇರೆ ಯಾವ ಪ್ರಾಣಿಗೂ ಸಾದ್ಯವಿಲ್ಲದ ಕೆಲಸವನ್ನು ಇದೀಗ ಬೀವರ್ ಮಾಡಿ ತೋರಿಸಿದೆ. ಕೇವಲ ತನ್ನ ಹಲ್ಲುಗಳನ್ನು ಬಳಸಿ ಮರವೊಂದನ್ನು ಉರುಳಿಸಿದ್ದು, ಮೂರ್ತಿ ಚಿಕ್ಕದಾದರೂ, ಕೀರ್ತಿ‌ ದೊಡ್ಡದು ಎಂಬ ಮಾತನ್ನು ನಿಜವಾಗಿಸಿದೆ.

ವಿಡಿಯೋದಲ್ಲಿ ಏನಿದೆ?

ಸದ್ಯ, ವೈರಲ್ ಆಗಿರವ ವಿಡಿಯೋದಲ್ಲಿ ಬೀವರ್ ಬೃಹದಾಕಾರದ ಮರದ ಬಳಿ ಬಂದು, ಆ ಮರದ ಕೆಳಭಾಗವನ್ನು ಕೇವಲ ತನ್ನ ಹಲ್ಲುಗಳ ಸಹಾಯದಿಂದ ಕಚ್ಚಿ, ಮರದ ತೊಗಡೆ, ತಿರುಳುಗಳನ್ನೆಲ್ಲಾ ಕಿತ್ತು ಹಾಕಿ ಕೊನೆಗೆ ಮರವನ್ನೇ ಧರೆಗುರುಳಿಸುತ್ತದೆ. ನವೆಂಬರ್ 22 ರಂದು X ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 17.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಗರು ಈ ಪ್ರಾಣಿಯ ಸಾಹಸವನ್ನು ಕೊಂಡಾಡಿದ್ದಾರೆ.

8 ನಿಮಿಷದಲ್ಲಿ ಮರ ಉರುಳಿಸುವ ಬೀವರ್!

ಕಾಡಿನಲ್ಲಿ ಸಿಗುವ ಎಲೆ, ಮರದ ತೊಗಟೆ ಮತ್ತು ಹಣ್ಣುಗಳೇ ಈ ಪ್ರಾಣಿಗಳ ಮುಖ್ಯ ಆಹಾರ. ತೇವಾಂಶ ಇರುವ ಮರಗಳ ತೊಗಟೆಯನ್ನು ಕತ್ತರಿಸುತ್ತಾ ಇವುಗಳು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಸದ್ಯ, ವೈರಲ್ ವಿಡಿಯೋದಲ್ಲಿ ಕೇವಲ 8 ನಿಮಿಷದಲ್ಲಿ ಬೀವರ್ ಬೃಹತ್ ಮರವೊಂದನ್ನು ನೆಲಕ್ಕುರುಳಿಸುವುದನ್ನು ನೀವು ಕಾಣಬಹುದು.

Related post

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…
26 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ನೆರೆಮನೆಯಲ್ಲಿ ಪತ್ತೆ…!

26 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ನೆರೆಮನೆಯಲ್ಲಿ ಪತ್ತೆ…!

ನ್ಯೂಸ್ ಆರೋ: ಕಾಣೆಯಾದ ವ್ಯಕ್ತಿ ನೆರೆಮನೆಯಲ್ಲಿ ಬಂಧನದಲ್ಲಿ ಇರುವುದು ಬೆಳಕಿಗೆ ಬಂದಿದೆ ಎಂದು ಅಲ್ಜೀರಿಯಾದ ನ್ಯಾಯಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ. ಹೌದು, 26 ವರ್ಷಗಳಿಂದ ನಾಪತ್ತೆಯಾಗಿದ್ದ ಅಲ್ಜೀರಿಯಾದ ವ್ಯಕ್ತಿಯೊಬ್ಬ,…

Leave a Reply

Your email address will not be published. Required fields are marked *