ಗುಡ್ ನ್ಯೂಸ್: ಐಫೋನ್ 14 ಬೆಲೆ ದಿಢೀರ್ ಕುಸಿತ – ಖರೀದಿಸಲು ಮುಗಿಬಿದ್ರು ಜನ…!

ಗುಡ್ ನ್ಯೂಸ್: ಐಫೋನ್ 14 ಬೆಲೆ ದಿಢೀರ್ ಕುಸಿತ – ಖರೀದಿಸಲು ಮುಗಿಬಿದ್ರು ಜನ…!

ನ್ಯೂಸ್ ಆ್ಯರೋ : ಸ್ಮಾರ್ಟ್ ಫೋನ್ ಕ್ರೇಜ್ ಯಾರಿಗಿರಲ್ಲ ಹೇಳಿ. ಹೊಸ ಹೊಸ ಮಾಡೆಲ್ ಮೊಬೈಲ್ ಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡೋದೆ ಕೆಲವರ ಕೆಲಸ ಆಗಿರುತ್ತೆ. ಇನ್ನು ಕೆಲವರು ಮಾರುಕಟ್ಟೆಯಲ್ಲಿ ಯಾವ ಶೈಲಿಯ ಸ್ಮಾರ್ಟ್ ಫೋನ್ ಬಂದಿದೆ ಎಂಬುದರತ್ತ ಕುತೂಹಲಿಗಳಾಗಿರುತ್ತಾರೆ.

ಈ ಪೈಕಿ ಐಫೋನ್ ಮೊಬೈಲ್ ಎಲ್ಲಾ ಮೊಬೈಲ್ ಗಳಿಗಿಂತ ದುಬಾರಿ. ಫೋಟೋ ತೆಗೆಯುವ ಹುಚ್ಚು ಇರುವವರಿಗಂತೂ ಐಫೋನ್ ಹೇಳಿಟ್ಟ ಮೊಬೈಲ್ ಅಂತಾನೇ ಹೇಳಬಹುದು. ಆದರೆ ಇದನ್ನು ಖರೀದಿಸಲು ಎಲ್ಲರಿಗೂ ಸಾಧ್ಯವಿಲ್ಲ. ಶ್ರೀಮಂತರ ಕೈಯಲ್ಲಿ ಮಾತ್ರ ನಾವು ಹೆಚ್ಚಾಗಿ ಈ ಮೊಬೈಲ್ ನ್ನು ನೋಡಬಹುದು. ಆದರೆ ಐಫೋನ್ ಪ್ರಿಯರಿಗೆ ಈಗೊಂದು ಶುಭ ಸುದ್ದಿ ಕೇಳಿಬಂದಿದೆ.

ರಿಯಾಯಿತಿ ಕೊಡುಗೆ ಎಲ್ಲಿ ಲಭ್ಯವಿದೆ?

ಈ ರಿಯಾಯಿತಿ ಕೊಡುಗೆಯನ್ನು ಫ್ಲಿಪ್‌ಕಾರ್ಟ್‌ನಲ್ಲಿ ನೀಡಲಾಗುತ್ತಿದೆ. ಈ ಕೊಡುಗೆಯಲ್ಲಿ ದೊಡ್ಡ ಉಳಿತಾಯ ಮಾಡಬಹುದು. ಫ್ಲಿಪ್‌ಕಾರ್ಟ್‌ನಲ್ಲಿ APPLE iPhone 14 (Blue, 128 GB) 69,900 ರೂ.ಗಳ ಮೂಲ ಬೆಲೆಯಲ್ಲಿ ಸಿಗುತ್ತಿದೆ. ನಿಸ್ಸಂಶಯವಾಗಿ ಈ ಬೆಲೆ ಪ್ರತಿಯೊಬ್ಬರ ಬಜೆಟ್‌ಗೆ ಹೊಂದಿಕೆಯಾಗುವುದಿಲ್ಲ. ಆದರೆ ಐಫೋನ್ 14 ಮೇಲೆ ಭರ್ಜರಿ ರಿಯಾಯಿತಿ ಕೊಡುಗೆಯನ್ನು ನೀಡಲಾಗುತ್ತಿದೆ. ಈ ಅದ್ಭುತ ಕೊಡುಗೆಯಿಂದ ನೀವು ಬಹಳಷ್ಟು ಹಣ ಉಳಿಸಬಹುದು.

ರಿಯಾಯಿತಿ ಕೊಡುಗೆಯ ಲಾಭ

ಐಫೋನ್ 14 (Blue, 128 GB) ಮಾದರಿಗೆ ಗ್ರಾಹಕರು 69,900 ರೂ. ಪಾವತಿಸಬೇಕಾಗುತ್ತದೆ. ಆದರೆ ನೀವು ವಿನಿಮಯ ಕೊಡುಗೆಯಲ್ಲಿ ಇದನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಮಾದರಿಯ ಖರೀದಿಯ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ ಶೇ.12ರಷ್ಟು ಅಂದರೆ 8,901 ರೂ.ಗಳ ಸಂಪೂರ್ಣ ರಿಯಾಯಿತಿ ನೀಡಲಾಗುತ್ತಿದೆ. ಈ ರಿಯಾಯಿತಿ ಪಡೆದ ಬಳಿಕ ಗ್ರಾಹಕರಿಗೆ ಕೇವಲ 60,999 ರೂ.ಗೆ ಐಫೋನ್ 14 ಸಿಗಲಿದೆ. ಇದರೊಂದಿಗೆ ವಿನಿಮಯ ಕೊಡುಗೆಯಡಿ ಅತ್ಯಂತ ಕಡಿಮೆ ಬೆಲಗೆ ಐಫೋನ್ 14 ಖರೀದಿಸಬಹುದು.

ಅದೆಷ್ಟೋ ಮಂದಿಗೆ ಐಫೋನ್ ಖರೀದಿಸುವ ಮನಸ್ಸಿದ್ರೂ ಬಜೆಟ್ ಸಾಕಾಗುವುದಿಲ್ಲ. ಆದರೆ ಇದೀಗ ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಂಡರೆ ನಿಜವಾಗಿಯೂ ರಿಯಾಯಿತಿ ದರದಲ್ಲಿ ಮಿತ ಹಣದಲ್ಲಿ ನಾವು ಕೂಡಾ ಐಫೋನ್ ಖರೀದಿಸಿ ದುಬಾರಿ ಬೆಲೆಯ ಮೊಬೈಲ್ ಬಳಕೆದಾರರಾಗಬಹುದು.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *