ಜೋಗ್ ಫಾಲ್ಸ್ ನೋಡಿದ್ದೀರಿ, ಆದ್ರೆ ಫೈರ್ ಫಾಲ್ಸ್ ಎಂದಾದ್ರೂ ನೋಡಿದ್ದೀರಾ..? – ಈ ವೈರಲ್ ವೀಡಿಯೋ ನೋಡಿದ್ರೆ ದಂಗಾಗೋದು ಗ್ಯಾರಂಟಿ…!

ಜೋಗ್ ಫಾಲ್ಸ್ ನೋಡಿದ್ದೀರಿ, ಆದ್ರೆ ಫೈರ್ ಫಾಲ್ಸ್ ಎಂದಾದ್ರೂ ನೋಡಿದ್ದೀರಾ..? – ಈ ವೈರಲ್ ವೀಡಿಯೋ ನೋಡಿದ್ರೆ ದಂಗಾಗೋದು ಗ್ಯಾರಂಟಿ…!

ನ್ಯೂಸ್ ಆ್ಯರೋ : ಪ್ರಕೃತಿಯ ವಿಸ್ಮಯಗಳಿಗೆ ಸರಿಸಾಟಿ ಯಾವುದೂ ಇಲ್ಲ. ನೈಸರ್ಗಿಕವಾಗಿ ರೂಪುಗೊಂಡಿರುವ ಕೆಲವು ಕ್ರಿಯೆಗಳನ್ನು ನಾವು ಬದಲಾಯಿಸಲೂ ಸಾಧ್ಯವಿಲ್ಲ. ಅಂದ ಹಾಗೆ ನೀವು ರಮಣೀಯ ವಾತಾವರಣದಲ್ಲಿ ಮೇಲಿನಿಂದ ಹರಿಯುವ ನೀರಿನ ಝರಿಯನ್ನು ನೋಡಿರಬಹುದು. ಆದರೆ ಅದೇ ಕಲ್ಪನೆಯಲ್ಲಿ ಅದೇ ಜಾಗದಲ್ಲಿ ನೀರಿನ ಬದಲು ಬೆಂಕಿಯನ್ನು ಊಹಿಸಿ. ಶಾಕ್ ಆಗುತ್ತಲ್ವಾ..? ಆದರೆ ಇಲ್ಲೊಂದು ಕಡೆ ನೀರಿನಂತೆ ಬೆಂಕಿಯೂ ಹರಿದಿದೆ…! ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ವೀಡಿಯೋದಲ್ಲಿ ಏನಿದೆ..?

ಈ ವಿಡಿಯೋ @AMAZlNGNATURE ವೆಬ್‌ಸೈಟ್‌ನಲ್ಲಿ ವೈರಲ್ ಆಗುತ್ತಿದ್ದು, ಜಲಪಾತದಲ್ಲಿ ಬೆಂಕಿ ಉಗುಳುವ ವಿಡಿಯೋ ಫ್ಯಾಂಟಸಿ ಸಿನಿಮಾದ ದೃಶ್ಯದಂತೆ ವೈರಲ್ ಆಗುತ್ತಿದೆ. ಈ ವಿಡಿಯೋ ಅನೇಕರನ್ನು ದಿಗ್ಭ್ರಮೆಗೊಳಿಸಿದೆ.

ಇದು ನಿಜಕ್ಕೂ ಬೆಂಕಿನಾ…?

ಸೂರ್ಯನ ಬೆಳಕಿನ ಶುದ್ಧ ಕೆಂಪು ಬಣ್ಣಗಳನ್ನು ಪ್ರತಿಬಿಂಬಿಸುವಂತೆ ನೀರು ಹೊಳೆಯುತ್ತದೆ. ಆಗ ಅದು ಬೆಂಕಿಯಂತೆ ಕಾಣುತ್ತದೆ. ಈ ನೈಸರ್ಗಿಕ ವಿದ್ಯಮಾನವು ಸಂಭವಿಸುವ ಈ ಜಲಪಾತವನ್ನು “ಫೈರ್‌ ಫಾಲ್ಸ್‌” ಎಂದೂ ಕರೆಯಲಾಗುತ್ತದೆ.

ಅಷ್ಟಕ್ಕೂ ಈ ‘ಫೈರ್ ಫಾಲ್ಸ್’ ಹರಿಯೋದೆಲ್ಲಿ..?

ಹಾರ್ಸೆಟೈಲ್ ಫಾಲ್ಸ್ ಕ್ಯಾಲಿಫೋರ್ನಿಯಾದ ಐಯೋಸೆಮೈಟ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ಜಲಪಾತವಾಗಿದೆ. ವಸಂತಕಾಲದಲ್ಲಿ ಹವಾಮಾನ ಬದಲಾದಾಗ ಈ ಜಲಪಾತವು ಬೆಂಕಿಯ ಫಾಲ್ಸ್‌ಆಗಿ ಬದಲಾಗುತ್ತದೆ. ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ರಾಷ್ಟ್ರೀಯ ಉದ್ಯಾನವನದಲ್ಲಿ ಪರ್ವತದಿಂದ ಬೆಂಕಿ ಸುರಿಯುತ್ತಿರುವಂತೆ ಕಾಣುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ರಿಲೀಸ್ ಆಗುತ್ತಿದ್ದು, ಬಿಡುಗಡೆಯಾದಾಗಲೆಲ್ಲ ವೈರಲ್ ಆಗಿದೆ.

ಆದರೆ ಒಮ್ಮೆಲೆ ಈ ವೀಡಿಯೋ ನೋಡುತ್ತಿರುವ ಪ್ರತಿಯೊಬ್ಬರಿಗೂ ಕಾಣಿಸುವ ಒಂದೇ ಒಂದು ಪ್ರಶ್ನೆ ಇದು ನೀರಾ? ಬೆಂಕಿನಾ?. ಅಂತ. ಆದರೆ ಏನೇ ಹೇಳಿ. ಬೆಂಕಿಯ ಬಣ್ಣದಲ್ಲಿ ಪರ್ವತದ ತುದಿಯಿಂದ ಸುರಿಯುವ ಜಲಪಾತ ನೋಡಲು ಮಾತ್ರ ಅದ್ಭುತವಾಗಿದೆ.

Related post

ಆಸ್ಪತ್ರೆಗೆ ದಾಖಲಾದ ಬಾಲಿವುಡ್‌ನ ಡ್ರಾಮಾ ಕ್ವೀನ್ ನಟಿ ರಾಖಿ ಸಾವಂತ್; ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೈರಲ್‌..!

ಆಸ್ಪತ್ರೆಗೆ ದಾಖಲಾದ ಬಾಲಿವುಡ್‌ನ ಡ್ರಾಮಾ ಕ್ವೀನ್ ನಟಿ ರಾಖಿ ಸಾವಂತ್; ಸಾಮಾಜಿಕ…

ನ್ಯೂಸ್ ಆರೋ:  ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ವೈಯಕ್ತಿಕ ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಲವ್​, ಮದುವೆ, ಬ್ರೇಕಪ್ ಅಂತ ಸದಾ ಸುದ್ದಿಯಲ್ಲಿರುವ ರಾಖಿ ಸಾವಂತ್​, ಬಾಲಿವುಡ್‌ನ ಡ್ರಾಮಾ…
ಎಂಡೊಮೆಟ್ರಿಯೊಸಿಸ್ ಕಾಯಿಲೆಗೆ ತುತ್ತಾದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ..!; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಬೆಡ್​ ಮೇಲಿನ ವಿಡಿಯೋ

ಎಂಡೊಮೆಟ್ರಿಯೊಸಿಸ್ ಕಾಯಿಲೆಗೆ ತುತ್ತಾದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ..!; ಸಾಮಾಜಿಕ…

ನ್ಯೂಸ್ ಆ್ಯರೋ :ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಸಹೋದರಿ, ನಟಿ ಶಮಿತಾ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಂಡೊಮೆಟ್ರಿಯೊಸಿಸ್ ಸಮಸ್ಯೆ ಇರುವುದು ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಇಂದು…
ಐಷಾರಾಮಿ ಬಂಗಲೆಯಲ್ಲೇ ವಾಸ, ದುಬಾರಿ ಕಾರಿನಲ್ಲೇ ಓಡಾಟ! ಬಿಜೆಪಿ ಅಭ್ಯರ್ಥಿ, ಬಾಲಿವುಡ್ ನಟಿ ಕಂಗನಾ ಆಸ್ತಿ ಎಷ್ಟು ಕೋಟಿ ಗೊತ್ತಾ?

ಐಷಾರಾಮಿ ಬಂಗಲೆಯಲ್ಲೇ ವಾಸ, ದುಬಾರಿ ಕಾರಿನಲ್ಲೇ ಓಡಾಟ! ಬಿಜೆಪಿ ಅಭ್ಯರ್ಥಿ, ಬಾಲಿವುಡ್…

ನ್ಯೂಸ್ ಆ್ಯರೋ : ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಕಣ ರಂಗೇರಿದ್ದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೂಡ ಬಿರುಸಿನಿಂದ ಸಾಗಿದೆ. ಈ‌ ಬಾರಿ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಾಲಿವುಡ್‌…

Leave a Reply

Your email address will not be published. Required fields are marked *