Samantha to become mother without getting married?

ಸಮಂತಾಗೇ ಮದ್ವೆಯಾಗದೆ ಮಕ್ಕಳು ಬೇಕಂತೆ…! -ಯಾಕೆ ಈ ನಿರ್ಧಾರ..? ಕಾರಣ ಇಲ್ಲಿದೆ ನೋಡಿ..

ನ್ಯೂಸ್ ಆ್ಯರೋ : ಚಿತ್ರರಂಗ ಅಂದಮೇಲೆ ಅಲ್ಲಿ ವೈಯಕ್ತಿಕ ಬದುಕಿಗೆ ವೃತ್ತಿ ಜೀವನದಷ್ಟು ಬೆಲೆ ಕೊಡೋದಿಲ್ಲ ಅನ್ನೋದು ಜನರ ಅಭಿಪ್ರಾಯ. ಮದುವೆಯಾದ ಕೆಲವೇ ವರ್ಷಕ್ಕೆ ಸೆಲೆಬ್ರೆಟಿಗಳೂ ವಿಚ್ಚೇದನ ಪಡೆದುಕೊಳ್ಳೋದು, ಪರಸ್ಪರ ದೂರ ಆಗೋದು ಹೊಸತಲ್ಲ ಬಿಡಿ. ಇದಕ್ಕೆ ಸಮಂತಾ- ನಾಗಚೈತನ್ಯ ಜೋಡಿಯೂ ಹೊರತಲ್ಲ. ಖ್ಯಾತ ನಟಿ ಸಮಂತಾ ಪ್ರಭು ಮತ್ತು ನಾಗಚೈತನ್ಯ ನಡುವೆ ಡಿವೋರ್ಸ್ ಆಗಿ ಅದೆಷ್ಟೋ ಸಮಯ ಕಳೆದಿದೆ. ನಂತರ ನಟಿ ಅನಾರೋಗ್ಯಕ್ಕೀಡಾದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಆದರೆ ಇದೀಗ ಅವರು ಮಕ್ಕಳು ಬೇಕೆಂದು ಆಸೆ ಪಡುತ್ತಿದ್ದಾರೆ.

ಸಮಂತಾ (Samantha) ಸದ್ಯಕ್ಕೆ ಯಾವುದೇ ಸಿನಿಮಾದಲ್ಲಿ ನಟಿಸುತ್ತಿಲ್ಲ. ಊರೂರು ಸುತ್ತುತ್ತಾ ಇದ್ದಾರೆ. ಆರೋಗ್ಯದತ್ತ ಗಮನ ಕೊಡುತ್ತಿದ್ದಾರೆ. ಈ ಸಮಯದಲ್ಲಿಯೇ ಸಮಂತಾಗೆ ಮತ್ತೆ ಮದುವೆ ಆಗುವ ಒತ್ತಾಯ ಹೆಚ್ಚಾಗಿದೆ. ಆದರೆ ಸ್ಯಾಮ್ ಲಗ್ನ ಬೇಡ, ಮಕ್ಕಳು ಬೇಕು ಎನ್ನುತ್ತಿದ್ದಾರಂತೆ. ಅದಕ್ಕೆ ಕಾರಣವೇನು ಗೊತ್ತಾ?

ಸಮಂತಾಗೆ ಮನೆಯಲ್ಲಿ ಮದುವೆ ಆಗಲು ಒತ್ತಡ…?

ಕೆಲವು ತಿಂಗಳು ಸಮಂತಾ ವೆಕೇಷನ್ ಮಾಡುತ್ತಾ ಆರೋಗ್ಯಕ್ಕೆ ಸಂಬಂಧಿಸಿದ ಟ್ರೀಟ್‌ಮೆಂಟ್ ಪಡೆಯುತ್ತಿದ್ದಾರೆ. ಅದಾದ ಮೇಲೆ ಸಿನಿಮಾ, ಕ್ಯಾಮೆರಾ ಇತ್ಯಾದಿ. ಈಗ ಮನೆಯಲ್ಲಿ ಮತ್ತೊಂದು ಮದುವೆ ಆಗುವಂತೆ ಒತ್ತಡ ಹೇರುತ್ತಿದ್ದಾರಂತೆ. ಮೂವತ್ತಾರು ವಯಸ್ಸು. ಈಗಲೇ ಇನ್ನೊಂದು ಜೋಡಿ ನೋಡಿಕೋ ಎನ್ನುವುದು ತಪ್ಪಲ್ಲ.

ಆದರೆ ಸ್ಯಾಮ್ ಮಾತ್ರ ಮದುವೆಯ ಮರ್ಮಾಘಾತಕ್ಕೆ ಸಿಕ್ಕಿ ಬಂದಿದ್ದಾರೆ. ಇಬ್ಬರು ಮಕ್ಕಳನ್ನು ದತ್ತು ಪಡೆಯುತ್ತೇನೆ. ನೋ ಮ್ಯಾರೇಜ್ ಎಂದಿದ್ದಾರಂತೆ. ಜೀವನದಲ್ಲಿ ಯಾವುದಾದರೂ ವಿಷಯಕ್ಕೆ ಒಂದು ಸಲ ಹೊಡೆತ ಬಿದ್ದರೆ ಮನಸು ಹೀಗೊಂದು ತೀರ್ಮಾನಕ್ಕೆ ಬರುತ್ತದೆ. ಮತ್ತೆ ಅಂತಹ ಕೆಟ್ಟ ಅನುಭವ ಪಡೆಯಲು ಬಯಸುವುದಿಲ್ಲ. ಬಹುಶಃ ಸಮಂತಾಗೂ ಅದೇ ಆಗಿರಬೇಕು. ಇನ್ನೊಂದು ಹುಡುಗ ಇನ್ನೊಂದು ಕನಸು ಹೊಸ ಕಿತ್ತಾಟ? ಬೇಕಾ? ಬೇಡವಾ ಎನ್ನುತ್ತಾ ಸ್ವಂತ ಟ್ರಸ್ಟ್ನಿಂದ ಸಮಾಜ ಸೇವೆ ಮಾಡೋದು. ಮಕ್ಕಳನ್ನು ದತ್ತು ಪಡೆದು ಸಾಕೋದು. ಇದೇ ಗುರಿ ಮಾಡಿಕೊಳ್ಳುವ ಇರಾದೆ ಇದೆ ಎಂದಿದ್ದಾರೆ.

ಆದರೆ ಸಮಂತಾ ನಿಲುವನ್ನು ಅಮ್ಮ ಅಪ್ಪ ಒಪ್ಪುತ್ತಾರಾ? ಫ್ಯಾನ್ಸ್ ಸುಮ್ಮನಿರುತ್ತಾರಾ? ಸ್ಯಾಮ್ ಭವಿಷ್ಯ ಒಂಟಿಯಾ ಜಂಟಿಯಾ? ಕಾಯಬೇಕಿದೆ.

ಇನ್ನು ಇವರ ಸಿನಿಮಾ ವಿಚಾರಕ್ಕೆ ಬಂದರೆ ಇವರಿಗೆ ಬೇಡಿಕೆ ಜೋರಾಗಿಯೇ ಇದೆ. ಇವರು ಪುಷ್ಪದಲ್ಲಿ ಸೌಂಡ್ ಮಾಡಿದ್ದು ಗೊತ್ತೇ ಇದೆ. ಸೌತ್ ಸಿನಿಮಾಗಳ ಜೊತೆ ಬಾಲಿವುಡ್‌ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಸಮಂತಾ ಸದ್ಯ ಬ್ರೇಕ್‌ನಲ್ಲಿರೋ ಕಾರಣ, ವಿರಾಮದ ನಂತರ ಸ್ಯಾಮ್ ಮೇನಿಯಾ ಶುರುವಾಗಲಿದೆ. ಒಟ್ಟಾರೆಯಾಗಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಸಮಂತಾ ಜೀವನದಲ್ಲಿ ಇಂತಹ ಕೆಲವೊಂದು ಅಹಿತಕರ ಘಟನೆ ನಡೆಯಬಾರದಿತ್ತು ಎಂಬುವುದು ನೆಟ್ಟಿಗರ ಅಭಿಪ್ರಾಯ.