
ಲೈವ್ ಸಂದರ್ಶನದಲ್ಲೇ ಸೀಮಾ ಹೈದರ್‌ಗೆ ಕಿಸ್ ಕೊಡಲು ಹೋದ ಸಚಿನ್ – ‘ಪಬ್ ಜಿ’ ಜೋಡಿಯ ರೋಮ್ಯಾಂಟಿಕ್ ವಿಡಿಯೋ ವೈರಲ್
- ವೈರಲ್ ನ್ಯೂಸ್
- September 4, 2023
- No Comment
- 79
ನ್ಯೂಸ್ ಆ್ಯರೋ : ಪಬ್ ಜಿ ಆಟದಿಂದ ಪ್ರೀತಿಯಾಗಿ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದ ಸೀಮಾ ಹೈದರ್ ಪದೇ ಪದೇ ಸುದ್ದಿಯಾಗುತ್ತಲೇ ಇರುತ್ತಾರೆ. ಪ್ರಿಯಕರ ಸಚಿನ್ ಜತೆ ಖುಷಿಯಾಗಿ ಕಾಲ ಕಳೆಯುತ್ತಿರೋ ಸೀಮಾ ದಿನಕಳೆದಂತೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಈಚೆಗೆ ಲೈವ್ ಚಾನೆಲ್‌ನ ಸಂದರ್ಶನದಲ್ಲಿ ಕ್ಯಾಮರಾ ಆಫ್ ಆಗಿದೆಯೆಂದು ತಿಳಿದು ಸೀಮಾಗೆ ಕಿಸ್ ಕೊಡಲು ಹೋಗಿ ಸಚಿನ್ ಅವರು ಸಂದರ್ಶಕನ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಖತ್ ಡ್ಯಾನ್ಸ್, ರೀಲ್ಸ್ ಮಾಡುವ ಇವರ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಇವರಿಬ್ಬರ ಪ್ರೀತಿ ಕಂಡು ಹಲವು ಮಾಧ್ಯಮಗಳು ಸುದ್ದಿ ಮಾಡಿದೆ. ಈಚೆಗೆ ನೇರ ಸಂದರ್ಶನದಲ್ಲಿ ಈ ಜೋಡಿಯನ್ನು ಸಂದರ್ಶನ ಮಾಡುವಾಗ ಸಚಿನ್ ಅವರು ಸೀಮಾಗೆ ಕ್ಯಾಮೆರಾ ಆನ್ ಇರುವಾಗಲೇ ಮುತ್ತು ಕೊಡಲು ಹೋಗಿದ್ದಾರೆ. ಇದನ್ನು ನೋಡಿದ ಸಂದರ್ಶಕ ಅರೆ ಸಚಿನ್ ಜೀ.. ನೀವು ಕ್ಯಾಮೆರಾದ ಮುಂದೆ ಇದ್ದೀರಾ. ನೀವು ಮಾಡುತ್ತಿರುವುದನ್ನ ನೇರ ಪ್ರಸಾರದಲ್ಲಿ ತೋರಿಸಲಾಗುತ್ತಿದೆ ಎಂದು ಎಚ್ಚರಿಸಿದ್ದಾರೆ. ತಕ್ಷಣವೇ ಸೀಮಾ ಹೈದರ್, ಸಚಿನ್ ಅವರನ್ನು ತಡೆದಿದ್ದಾರೆ. ಸೀಮಾ, ಸಚಿನ್ ಜೋಡಿಯ ಈ ರೊಮ್ಯಾನ್ಸ್ ವಿಡಿಯೋ ಇದೀಗ ವೈರಲ್ ಆಗಿದೆ.
ಇದೇ ಸಂದರ್ಶನದಲ್ಲಿ ಭಾಗಿಯಾಗಿದ್ದ ಸೀಮಾ ಹೈದರ್ ಪರ ವಕೀಲರು ಸಚಿನ್, ಸೀಮಾ ಜೋಡಿ ಎಷ್ಟು ಅನೋನ್ಯವಾಗಿದೆ ಅನ್ನೋದಕ್ಕೆ ಇದೇ ಸಾಕ್ಷಿ. ಕ್ಯಾಮೆರಾ ಮುಂದೆ ಅಥವಾ ಹಿಂದೆ ಅವರು ಪ್ರೀತಿಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಸೀಮಾ ಹೈದರ್ ಅವರನ್ನ ಟ್ರೋಲ್ ಮಾಡಿದ್ದಾರೆ. ಸಚಿನ್ ತುಂಬಾ ನಾಟಿಯಾಗಿದ್ದಾರೆ ಅಂತಾ ಕಾಲೆಳೆಯುತ್ತಿದ್ದಾರೆ.
ಸೀಮಾ, ಸಚಿನ್‌ಗೆ ಭರ್ಜರಿ ಆಫರ್‌ಗಳು
ಹೀಗೆ ಸೀಮಾ, ಸಚಿನ್ ಜೋಡಿ ಒಂದಲ್ಲ ಒಂದು ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದೆ. ಇವರ ಪಡೆಯುತ್ತಿರುವ ಖ್ಯಾತಿಗೆ ಖಾಸಗಿ ವಾಹನಿಗಳಿಂದ ಆಫರ್‌ಗಳು ಬರುತ್ತಿವೆ ಎಂದು ಸೀಮಾ ಅವರೇ ಹೇಳಿಕೊಂಡಿದ್ದಾರೆ. ಇದೀಗ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದಿಂದ ಬಂದ ಸೀಮಾಗೆ ಕಾನೂನಿನ ನಿಯಮಗಳು ಅಡ್ಡಿಯಾಗಿವೆ.