ಬೆಕ್ಕಿನ ಮರಿಯೆಂದು ಕರಿಚಿರತೆಯನ್ನು ಸಾಕಿದ ರಷ್ಯಾದ ಮಹಿಳೆ – ಪ್ರಾಣಿ ಪ್ರೀತಿಗೆ ಮನಸೋತ ನೆಟ್ಟಿಗರು, ವಿಡಿಯೋ ವೈರಲ್

ಬೆಕ್ಕಿನ ಮರಿಯೆಂದು ಕರಿಚಿರತೆಯನ್ನು ಸಾಕಿದ ರಷ್ಯಾದ ಮಹಿಳೆ – ಪ್ರಾಣಿ ಪ್ರೀತಿಗೆ ಮನಸೋತ ನೆಟ್ಟಿಗರು, ವಿಡಿಯೋ ವೈರಲ್

ನ್ಯೂಸ್‌ ಆ್ಯರೋ : ಪ್ರಾಣಿಗಳಿಗೆ ಒಮ್ಮೆ ಊಟ ಹಾಕಿದರೆ ಸಾಕು ಅದು ಸಾಯುವವರೆಗೂ ಮರೆಯಲ್ಲ. ಮೂಕ ಪ್ರಾಣಿಗಿರುವ ನಿಯತ್ತು ಮನುಷ್ಯರಿಗಿಲ್ಲ ಎಂಬ ಗಾದೆಯಿದೆ. ಅನ್ನ ಹಾಕಿದ ದಣಿಯನ್ನು ಯಾವತ್ತೂ ಪ್ರಾಣಿ ಮರೆಯುವುದಿಲ್ಲ. ಅದೆಷ್ಟೂ ಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚು ಪ್ರೀತಿಯನ್ನು ಕೊಡುತ್ತದೆ. ಹಾಗೆಯೇ ರಷ್ಯಾದ ಮಹಿಳೆಯ ಪ್ರಾಣಿ ಪ್ರೀತಿಗೆ ಎಲ್ಲರೂ ತಲೆಬಾಗಿದ್ದಾರೆ.

ರಷ್ಯಾದ ಮಹಿಳೆಯೊಬ್ಬರು ಕರಿಚಿರತೆ ಜತೆಗಿನ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಇದನ್ನು ನೋಡಿದ ನೆಟ್ಟಿಗರು ಅಚ್ಚರಿಯಾಗಿದ್ದಾರೆ. ಇನ್ನೂ ಕರಿಚಿರತೆ ಜತೆಗಿನ ಮಹಿಳೆಯ ನಂಟು ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಮರಿಯ ಅಮ್ಮ ಇದನ್ನು ಹೀಗೆ ಯಾಕೆ ಬಿಟ್ಟು ಹೋದಳೋ ಗೊತ್ತಿಲ್ಲ. ಕಣ್ಣುತೆರೆಯದ ಹಸುಗೂಸು ಮಣ್ಣಮೆತ್ತಿಕೊಂಡು ನಡುದಾರಿಯಲ್ಲಿ ಬಿದ್ದಿದೆ. ಈ ಮಹಿಳೆ ಬೆಕ್ಕಿನಮರಿಯೆಂದು ಅದನ್ನೆತ್ತಿಕೊಂಡು ಮನೆಗೆ ಬಂದಿದ್ದಾಳೆ. ಮನೆಯ ನಾಯಿ ಕೂಡ ಈ ಅನಾಥ ಮರಿಯನ್ನು ತನ್ನದೇ ಮರಿಯೆಂಬಂತೆ ಪೋಷಿಸಿದೆ. ಬೆಳೆಯುತ್ತ ಹೋದಂತೆ ಅದು ಬೆಕ್ಕಲ್ಲ ಕರಿಚಿರತೆ ಮರಿ ಎನ್ನುವುದು ಆಕೆಗೆ ಅರಿವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ರಷ್ಯಾದ ಮಹಿಳೆಯ ಪ್ರಾಣಿಪ್ರೀತಿ, ಸಹಾನುಭೂತಿಯನ್ನು ಕಂಡು ಅಚ್ಚರಿಗೊಂಡಿದ್ದಾರೆ.

@factmayor ಎಂಬ ಇನ್ಸ್ಟಾಗ್ರಾಂ ಖಾತೆದಾರರು ಇದನ್ನು ಪೋಸ್ಟ್ ಮಾಡಿದ್ದಾರೆ. ಮೂಲದಲ್ಲಿ ಇದನ್ನು @luna_the_pantera ಎಂಬ ಖಾತೆಯಿಂದ ಅಪ್ಲೋಡ್ ಮಾಡಲಾಗಿದೆ. ಸೆ. 21 ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 10 ಮಿಲಿಯನ್ಗಿಂತ ಹೆಚ್ಚು ಜನರು ನೋಡಿದ್ದಾರೆ. ಲೂನಾ, ವೆಂಝಾ ಮತ್ತು ನೀವು ಮೂವರು ಅದೃಷ್ಟವಂತರು, ಒಟ್ಟಿಗೇ ಬದುಕುತ್ತಿದ್ದೀರಿ. ನಿಮಗೆ ಒಳ್ಳೆಯದಾಗಲಿ ಎಂದು ಹರಸಿದ್ದಾರೆ ನೆಟ್ಟಿಗರು.

ವಿಡಿಯೋಗೆ ಬಂದ ಪ್ರತಿಕ್ರಿಯೆಗಳು

ನಿಮ್ಮ ಮನೆಗೆ ಬಂದ ಯಾರಿಗೇ ಆಗಲಿ ಮೊದಲಿಗೆ ಇದೊಂದು ಕಾವಲುನಾಯಿ ಎನ್ನಿಸಬಹುದು. ಹತ್ತಿರ ಹೋದಾಗಲೇ ಇದೊಂದು ಕರಿಚಿರತೆ ಎಂಬ ಅರಿವಾಗುವುದು ಎಂದಿದ್ದಾರೆ ಒಬ್ಬರು. ನಿಜಕ್ಕೂ ಇದು ಅದ್ಭುತವಾಗಿದೆ ಎಂದಿದ್ದಾರೆ ಇನ್ನೊಬ್ಬರು. ಈ ಮಗುವಿನ ಜೀವ ಉಳಿಸಿದ್ದಕ್ಕೆ ನಿಮಗೆ ಧನ್ಯವಾದ ಎಂದಿದ್ದಾರೆ ಹಲವಾರು ಜನರು. ಈ ಬಾಂಧವ್ಯ ನಿಜಕ್ಕೂ ಅದ್ಭುತವಾಗಿದೆ, ನೀವೆಲ್ಲರೂ ಒಟ್ಟಿಗೇ ಇರುವುದು ಇನ್ನೂ ಸಂತೋಷ ಎಂದಿದ್ದಾರೆ ಒಂದಿಷ್ಟು ಜನ.

ವೆಂಝಾ ಮತ್ತು ಲೂನಾ

ಲೂನಾ ಹೀಗೆ ಸತತ ನೆಕ್ಕುತ್ತಿರುವುದು ವೆಂಝಾಳಿಗೆ ಇಷ್ಟವೆ? ಅಥವಾ ಸಹಿಸಿಕೊಳ್ಳುತ್ತಿದ್ದಾಳೆಯೇ? ಎಂದು ಕೇಳಿದ್ದಾರೆ ಒಬ್ಬರು. ನಿಮ್ಮ ನೆರೆಹೊರೆಯವರೊಂದಿಗೆ ಇವರಿಬ್ಬರೂ ಹೊಂದಿಕೊಳ್ಳುತ್ತಾರಾ? ಎಂದು ಕೇಳಿದ್ದಾರೆ ಇನ್ನೂ ಕೆಲವರು.

Related post

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಆರೋಗ್ಯ ಪರಿಪೂರ್ಣವಾಗಿರುತ್ತದೆ. ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಇಂದು ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಕುಟುಂಬದೊಂದಿಗೆ…
ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…

Leave a Reply

Your email address will not be published. Required fields are marked *