ಮಣಿಪುರದಲ್ಲಿ ಮುಂದುವರಿದ ಹಿಂಸಾಚಾರ; ಬಿಜೆಪಿ, ಕಾಂಗ್ರೆಸ್ ಕಚೇರಿಗಳು ಧ್ವಂಸ
ನ್ಯೂಸ್ ಆ್ಯರೋ: ಮಣಿಪುರದಲ್ಲಿ ಹಿಂಸಾಚಾರ ತೀವ್ರಗೊಂಡ ಬೆನ್ನಲ್ಲೇ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಹಿಂಪಡೆದಿದೆ.
ಜಿರೀಬಾಮ್ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಚೇರಿಗಳನ್ನು ಉದ್ರಿಕ್ತರ ಗುಂಪು ಧ್ವಂಸಗೊಳಿಸಿದ್ದು, ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಫಾಲ್ ಕಣಿವೆಯಲ್ಲಿ ಬಿಜೆಪಿ ಶಾಸಕರೊಬ್ಬರ ಪೂರ್ವಜರ ಮನೆಯನ್ನು ಧ್ವಂಸಗೊಳಿಸಲಾಗಿದ್ದು, ಜಿರೀಬಾಮ್‌ನ ಶಾಸಕ ಅಶಬ್ ಉದ್ದೀನ್ ಒಡೆತನದ ಕಟ್ಟಡವನ್ನು ಧ್ವಂಸಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕುಪಿತಗೊಂಡ ಜನರ ಗುಂಪು ಬಿಜೆಪಿಯ ಮೂವರು ಶಾಸಕರ ಮನೆಗಳಿಗೆ ಭಾನುವಾರ ಬೆಂಕಿ ಹಚ್ಚಿದೆ. ಅದರಲ್ಲಿ ಒಬ್ಬರು ಸಚಿವರ ಮನೆಯೂ ಸೇರಿದೆ. ಕಾಂಗ್ರೆಸ್‌ನ ಶಾಸಕರೊಬ್ಬರ ಮನೆಗೂ ಬೆಂಕಿ ಹಚ್ಚಲಾಗಿದೆ. ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಪೂರ್ವಜರ ಮನೆಗೆ ಪ್ರತಿಭಟನಕಾರರ ಗುಂಪು ನುಗ್ಗಲು ಯತ್ನಿಸಿದರೂ ಭದ್ರತಾ ಪಡೆಗಳು ಈ ಪ್ರಯತ್ನವನ್ನು ವಿಫಲಗೊಳಿಸಿವೆ.
ಜಿರೀಬಾಮ್ ಜಿಲ್ಲೆಯಲ್ಲಿ ಬಂಡು ಕೋರರು ಮೂವರು ಮಹಿಳೆಯರು ಮತ್ತು ಶಿಶುಗಳ ಹತ್ಯೆ ಮಾಡಿದ್ದರಿಂದ ಆಕ್ರೋಶಗೊಂಡ ಜನರು ಶನಿವಾರ ರಾತ್ರಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು.
Leave a Comment